ಸಾಂದರ್ಭಿಕ ಚಿತ್ರ 
ವೆಬ್‌ಡೆಸ್ಕ್

ಚಂದ್ರ ಸಂಚಾರ: ಈ ರಾಶಿಯವರಿಗೆ ಧನಲಕ್ಷ್ಮಿ ಒಲಿಯೋದು ಗ್ಯಾರಂಟಿ! ನಿಮ್ದೂ ಇದೇ ರಾಶಿನಾ? Astrology

Astrology: ಇಂದು ಚಂದ್ರನು ಮೇಷ ರಾಶಿಯಿಂದ ಹೊರಟು ಉಚ್ಚ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆ ತನ್ನ ರಾಶಿಯಲ್ಲಿ ಚಂದ್ರನು ಕೆಲವೊಂದು ಸ್ಥಾನಪಲ್ಲಟ ಮಾಡುತ್ತಾನೆ. ಇದು ಕೆಲವೊಂದು ರಾಶಿಚಕ್ರಗಳಿಗೆ ತುಂಬಾ ಪ್ರಯೋಜನ ಎಂದು ಹೇಳುತ್ತಾರೆ. ಜ್ಯೋತಿಷ್ಯದ ಪ್ರಕಾರ, ಈ ಚಂದ್ರ ಸಂಚಾರವು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಪ್ರತಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ. ಹಾಗಿದ್ದರೆ ಯಾವ ರಾಶಿಯವರಿಗೆ ಪ್ರಯೋಜನಗಳಿವೆ ಎಂದು ನೋಡೋಣ ಬನ್ನಿ....

ಮೇಷ ರಾಶಿ

ಜ್ಯೋತಿಷ್ಯದಲ್ಲಿ ಸಂಪತ್ತಿನ ಮನೆ ಎಂದು ಪರಿಗಣಿಸಲಾದ ಚಂದ್ರನು ಎರಡನೇ ಮನೆಯಲ್ಲಿ ಸಾಗುತ್ತಾನೆ. ಇದು ಈ ಜನರಿಗೆ ಆರ್ಥಿಕ ವಿಷಯಗಳಲ್ಲಿ ಯಶಸ್ಸನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲಿದ್ದೀರಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದ್ದು, ಗುರು-ಹಿರಿಯರ ಆಶೀರ್ವಾದ ನಿಮ್ಮ ಕೈ ಹಿಡಿಯಲಿದೆ.

ವೃಷಭ ರಾಶಿ

ಈ ಚಂದ್ರನ ಸಂಚಾರವು ನಿಮ್ಮ ಜೀವನದಲ್ಲಿ ಸಕರಾತ್ಮಕ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಲಿದ್ದೀರಿ. ಆರ್ಥಿಕ ಲಾಭಗಳು ನಿಮಗೆ ಸಹಾಯ ಮಾಡಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ಮಾಡಲಿದ್ದೀರಿ.

ಕುಂಭ ರಾಶಿ

ಚಂದ್ರನು ನಿಮ್ಮ ನಾಲ್ಕನೇ ಮನೆಯನ್ನು ಸಾಗಿಸುತ್ತಾನೆ, ಇದನ್ನು ಸಂತೋಷದ ಮನೆ ಎಂದು ಹೇಳಲಾಗುತ್ತದೆ. ಚಂದ್ರನ ಉಪಸ್ಥಿತಿಯು ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷವನ್ನು ತರಲಿದ್ದಾನೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕೆಲಸಕ್ಕೆ ಸಂಬಂಧಿಸಿದಂತೆ ಬಡ್ತಿ, ಸಂಬಳ ಹೆಚ್ಚಾಗುವ ನಿರೀಕ್ಷೆ ಇದೆ. ಪ್ರೇಮ ಸಂಬಂಧಗಳಿಗೆ ಉತ್ತಮ ಸಮಯವಾಗಲಿದ್ದು, ನಿಮ್ಮ ಸಂಗಾತಿಯೊಂದಿಗೆ ಉತ್ತಮ ಜೀವನವನ್ನು ಸಾಗಿಸಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.