Astrology: ಜ್ಯೋತಿಷ್ಯದಲ್ಲಿ ಸೂರ್ಯನನ್ನು ಆತ್ಮವಿಶ್ವಾಸ, ಘನತೆ ಮತ್ತು ನಾಯಕತ್ವದ ಗುಣಗಳ ಶಕ್ತಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಮಂಗಳನು ಧೈರ್ಯ, ಕಠಿಣ ಪರಿಶ್ರಮ ಮತ್ತು ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಈ ಎರಡೂ ಗ್ರಹಗಳು ಒಟ್ಟಿಗೆ ಇರುವಾಗ, ಕೆಲವೊಂದು ರಾಶಿಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ ಎಂದು ಹೇಳಲಾಗುತ್ತದೆ.
ವಿಶೇಷವಾಗಿ ಹೇಳುವುದಾದರೆ, ಕೆಲಸ, ಹಣಕಾಸು ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಫೆಬ್ರವರಿಯಲ್ಲಿನ ಗ್ರಹ ಜೋಡಣೆಯು ಅನೇಕರಿಗೆ ಪ್ರಗತಿಗೆ ಕಾರಣವಾಗಿದ್ದು, ಇದು ವೃತ್ತಿ ಮತ್ತು ವ್ಯವಹಾರಗಳಿಗೆ ಸಂಬಂಧಿಸಿದಂತೆ ಅನೇಕ ರೀತಿಯಲ್ಲಿ ಬದಲಾವಣೆಗಳನ್ನು ಪಡೆಯಬಹುದು. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ತಿಳಿಯೋಣ ಬನ್ನಿ...
ಮೇಷ ರಾಶಿಯವರಿಗೆ ಈ ಗ್ರಹಗಳ ಸಂಯೋಜನೆಯು ಆತ್ಮವಿಶ್ವಾಸವನ್ನು ಸಮಯವಾಗಿರುತ್ತದೆ. ಇದು ನಿಮ್ಮ ಕಠಿಣ ಪರಿಶ್ರಮವನ್ನು ಕೆಲಸದಲ್ಲಿ ಕಾಣಲಿದ್ದೀರಿ. ಸ್ಪಧಅರ್ಥ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸುತ್ತಿರುವವರಿಗೆ ಈ ಸಮಯ ಉತ್ತಮವಾಗಲಿದೆ. ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು ಬಲಗೊಳ್ಳುತ್ತವೆ ಮತ್ತು ನಿಮ್ಮನ್ನು ನಾಯಕನಾಗಿ ನೋಡಲಾಗುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ, ಈ ಗ್ರಹಗಳ ಜೋಡಣೆಯು ಅವರ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶವನ್ನು ನೀಡಲಿದೆ. ಇದು ಪ್ರಗತಿಗೆ ಅವಕಾಶಗಳನ್ನು ಕಲ್ಪಿಸಿ ಕೊಡಲಿದೆ. ಉದ್ಯಮಿಗಳಿಗೆ ಹೊಸ ಒಪ್ಪಂದಗಳು ಲಾಭವನ್ನು ತರಲಿದ್ದು, ಮುನ್ನಣೆ ಸಿಗಲಿದೆ. ಈ ಸಮಯವು ಕುಟುಂಬದಲ್ಲಿ
ಸಂತೋಷದ ವಾತಾವರಣ ಇರಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಸಮಯವು ಹೆಚ್ಚಿನ ಗೌರವ ಮತ್ತು ಯಶಸ್ಸನ್ನು ತರುವಂತಹದ್ದಾಗಿದೆ. ಇದು ಸರ್ಕಾರ ಮತ್ತು ಆಡಳಿತದಲ್ಲಿ ಇರುವವರಿಗೆ ಗಮನಾರ್ಹ ಪ್ರಯೋಜನಗಳು ಸಿಗುವ ಸಾದ್ಯತೆ ಇದೆ. ಇದು ಬಡ್ತಿ ಮತ್ತು ಕೆಲಸದಲ್ಲಿ ಹೆಚ್ಚು ಜವಬ್ದಾರಿಯಲ್ಲಿರುವಿರಿ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿದ್ದು, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.