Death Rituals (ಸಾಂದರ್ಭಿಕ ಚಿತ್ರ)
Death Rituals: ಗರುಡ ಪುರಾಣವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯ ಮತ್ತು ಪವಿತ್ರ ಗ್ರಂಥವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಧಾರ್ಮಿಕ ನಿರೂಪಣೆಯಲ್ಲ. ಬದಲಾಗಿ ಜೀವನ ಮತ್ತು ಮರಣದ ಬಗ್ಗೆ ಆಳವಾದ ಸತ್ಯವನ್ನು ವಿವರಿಸುವ ಗ್ರಂಥವೂ ಆಗಿದೆ.
ಒಬ್ಬ ವ್ಯಕ್ತಿಯ ಕಾರ್ಯಗಳು, ಅವನ ಭವಿಷ್ಯ ಮತ್ತು ಮರಣಾನಂತರದ ಆತನ ಸ್ಥಿತಿಯನ್ನು ಈ ಪುರಾಣಗಳು ನಿರ್ಧರಿಸುತ್ತವೆ. ಆದಾಗ್ಯೂ, ಇದರ ಅತ್ಯಂತ ಮತಹ್ವ ವಿಷಯವೆಂದರೆ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ.
ಗರುಡ ಪುರಾಣವು ಸ್ವರ್ಗ, ನರಕ, ಪಾಪ, ಪುಣ್ಯ ಮತ್ತು ಆತ್ಮದ ವಿವರವಾದ ವಿವರಣೆಗಳನ್ನು ಒಳಗೊಂಡಿದೆ. ಇದು ಒಬ್ಬ ವ್ಯಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲು ಸಹಾಯ ಮಾಡುತ್ತದೆ.
ಹೆಚ್ಚುವರಿಯಾಗಿ, ಗರುಡ ಪುರಾಣವು ಸಾವಿನ ನಂತರ ಸಂಭವಿಸುವ ಘಟನೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ಅದಕ್ಕಾಗಿಯೇ ಯಾವುದಾದರೂ ವ್ಯಕ್ತಿ ಸತ್ತ ನಂತರ ಆತ್ಮದ ಶಾಂತಿಗಾಗಿ ಮನೆಯಲ್ಲಿ ಗರುಡ ಪುರಾಣವನ್ನು ಪಠಿಸಲಾಗುತ್ತದೆ. ಹಾಗಿದ್ದರೆ, ಸಾವಿನ ಸಮಯದಲ್ಲಿ ಆತ್ಮಕ್ಕೆ ಶುಭವೆಂದು ಪರಿಗಣಿಸಲಾದ 4 ನಾಲ್ಕು ವಿಷಯಗಳು ಯಾವುದು ಎಂದು ನೋಡೋಣ ಬನ್ನಿ...
ತುಳಸಿ
ಸನಾತನ ಧರ್ಮದಲ್ಲಿ, ತುಳಸಿಯನ್ನು ದೇವಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಸತ್ತ ವ್ಯಕ್ತಿಯ ತುಳಸಿ ಎಲೆಯನ್ನು ದೇಹದ ಬಳಿ ಅಥವಾ ಬಾಯಿಯಲ್ಲಿ ಹೊಂದಿರುವ ವ್ಯಕ್ತಿಯ ಆತ್ಮವು ನರಕಕ್ಕೆ ಹೋಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರಿಂದ ಸಾವಿನ ಸಮಯದಲ್ಲಿ ವ್ಯಕ್ತಿಯನ್ನು ತುಳಸಿ ಗಿಡದ ಬಳಿ ಇಟ್ಟು ಅಥವಾ ಆತನ ಹಣೆ ಮತ್ತು ಬಾಯಿಯಲ್ಲಿ ತುಳಸಿ ಇಡುವುದು ಸಾಂಪ್ರದಾಯವಾಗಿದೆ.
ಗಂಗಾ ನೀರು
ಸಾವಿನ ಸಮಯದಲ್ಲಿ ಗಂಗಾಜಲವನ್ನು ಬಾಯಿಗೆ ಸುರಿಯುವ ಸಂಪ್ರದಾಯವನ್ನು ನಾವು ಗಮನಿಸಿರುತ್ತೇವೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗಂಗಾಜಲವು ವಿಷ್ಣು ದೇವರ ಪಾದಗಳಿಂದ ಹುಟ್ಟುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಈ ನೀರನ್ನು ಸತ್ತ ವ್ಯಕ್ತಿಯ ಬಾಯಲ್ಲಿ ಸುರಿಯುವುದರಿಂದ ಪಾಪಗಳನ್ನು ತೊಳೆದುಹಾಕುತ್ತದೆ ಎನ್ನಲಾಗುತ್ತದೆ.
ಕಪ್ಪು ಎಳ್ಳು
ಎಳ್ಳು ಬಹಳ ಪವಿತ್ರ. ಇದು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ಆದಾಗ್ಯೂ, ಇದನ್ನು ದಾನ ಮಾಡುವುದನ್ನು ಬಹಳ ಶುಭವೆಂದು ಹೇಳಲಾಗುತ್ತದೆ. ಸಾವಿನ ಸಮಯದಲ್ಲಿ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಸಕರಾತ್ಮಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಕರಾತ್ಮಕತೆಯನ್ನು ದೂರಗೊಳಿಸುತ್ತದೆ. ಹಾಗೆಯೇ ಆತ್ಮದ ಪ್ರಯಾಣವನ್ನು ಸುಗಮಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
ಕುಶಾ ಹುಲ್ಲು
ಸಾವಿನ ಅಂಚಿನಲ್ಲಿರುವ ವ್ಯಕ್ತಿಯನ್ನು ಕುಶ ಚಾಪೆಯ ಮೇಲೆ ಮಲಗಿಸುವುದು ಅಥವಾ ದೇಹದ ಕೆಳಗೆ ಕುಶ ಹುಲ್ಲನ್ನು ಇಡುವುದರಿಂದ ಆ ವ್ಯಕ್ತಿಯ ಆತ್ಮವು ಶಾರೀರಿಕ ಬಂಧನಗಳಿಂದ ಮುಕ್ತವಾಗಿ, ಯಾವುದೇ ಅಡೆತಡೆಯಿಲ್ಲದೆ ಶಾಂತಿಯುತವಾಗಿ ಪರಂಧಾಮಕ್ಕೆ ಪ್ರಯಾಣಿಸುತ್ತದೆ ಎಂಬ ನಂಬಿಕೆಯಿದೆ. ಕುಶ ಹುಲ್ಲು ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುವ ಅಥವಾ ತಡೆಯುವ ಗುಣವನ್ನು ಹೊಂದಿದ್ದು, ಅಂತ್ಯಕಾಲದಲ್ಲಿ ವ್ಯಕ್ತಿಯ ಸುತ್ತಲ ಪರಿಸರವನ್ನು ಶುದ್ಧವಾಗಿರಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.