ಎಐ ಸಹಾಯದಿಂದ ನಿರ್ಮಿಸಿದ ಚಿತ್ರ 
ವೆಬ್‌ಡೆಸ್ಕ್

ಮಾನ್ಸೂನ್​​ನಲ್ಲಿ ಅಕ್ಕಿಗೆ ಹುಳುಗಳ ಕಾಟ ಕಾಡ್ತಿದ್ಯಾ?; ಈ ಸಿಂಪಲ್​​​​ ಟ್ರಿಕ್ಸ್​ ಬಳಸಿ..Rice Insect-Free

ವಿಜಯವಾಣಿ ಸುದ್ದಿ ಜಾಲ

ಸಾಮಾನ್ಯವಾಗಿ ಭಾರತೀಯರು ಅಕ್ಕಿ ಹೆಚ್ಚು ಬಳಕೆ ಮಾಡುತ್ತಾರೆ. ಹೀಗಾಗಿ ತಿಂಗಳಿಗಾಗುವಷ್ಟು ಖರೀದಿ ಮಾಡುತ್ತಾರೆ. ಎಲ್ಲರಿಗೂ ಕಾಡುವ ಸಾಮಾನ್ಯ ಸಮಸ್ಯೆ ಎಂದರೆ ಅದನ್ನು ಹುಳಗಳಿಂದ ಶೇಖರಿಸಿ ಇಡುವುದು. ಈ ಹಿಂದೆ ಹಿರಿಯರು ಅದೇ ಕೆಲಸವಾಗಿ ಅನ್ನ ಮಾಡುವ ಮುನ್ನ ಕ್ಲೀನ್​ ಮಾಡಿ ಬಳಕೆ ಮಾಡುತ್ತಿದ್ದರು. ಅಕ್ಕಿಯಲ್ಲಿ ಹುಳ, ಗಡ್ಡೆ, ದುರ್ವಾಸನೆ ಕಂಡು ಬಂದರೆ, ಅದಕ್ಕಾಗಿ ಗಂಟೆಗಟ್ಟಲೇ ಸಮಯ ಇನ್ವೆಸ್ಟ್ ಮಾಡುವ ಅಗತ್ಯ ಇಲ್ಲ ಕೆಲವೊಂದು ಸಣ್ಣ ಟಿಪ್ಸ್​ಗಳನ್ನು ಪಾಲನೆ ಮಾಡುವ ಮೂಲಕ ಹುಳುಗಳು ಬರದಂತೆ ನೋಡಿಕೊಳ್ಳಬಹುದು.

ಬೇವಿನ ಎಲೆ ಇಡಿ

ಅಕ್ಕಿ ಡಬ್ಬಿಯಲ್ಲಿ ಒಣಗಿದ 8-10 ಬೇವಿನ ಎಲೆಯನ್ನು ಇಡಿ. ಇದರ ತೀವ್ರವಾದ ವಾಸನೆಗೆ ಅಕ್ಕಿಗೆ ಕೀಟ ಮತ್ತು ಹುಳು ಹತ್ತಿರ ಸೇರೋಕು ಬಿಡೋದಿಲ್ಲ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್​ ಅಂಶವು ಹುಳುಗಳು ಅಕ್ಕಿ ತಿನ್ನುವುದನ್ನು ತಡೆಯುತ್ತದೆ.

ಪಲಾವ್​ ಎಲೆ ಅಕ್ಕಿ ಚೀಲದಲ್ಲಿ ಇಡಿ

ಪಲಾವ್​ ಎಲೆಯಲ್ಲಿರುವ ನೈಸರ್ಗಿಕವಾದ ವಾಸನೆ ಮತ್ತು ಘಾಟು ಹುಳವನ್ನು ಅಥವಾ ನುಸಿಯಾಗುವುದನ್ನು ತಡೆಯಲು ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಕ್ಕಿ ಇಡಲು ಗಾಜು, ಲೋಹದ ಪಾತ್ರೆ ಅಥವಾ ಪ್ಲಾಸ್ಟಿಕ್​ ಬಳಕೆ ಮಾಡಬಹುದಾಗಿದೆ.

ಬಿಸಿಲಿನಲ್ಲಿ ಹಾಕಿ

ಆಗಾಗ್ಗೆ ಅಕ್ಕಿಯನ್ನು ಬಿಸಿಲಿನಲ್ಲಿ ಒಣಗಲು ಹಾಕಿ. ಆಗ ಅಕಸ್ಮಾತ್​ ಹುಳವಿದ್ದರೂ ಸಹ ಮಾಯವಾಗುತ್ತದೆ. ಬಿಸಿಲ ತಾಪಕ್ಕೆ ಇರಲಾರದೆ ಸಣ್ಣ ಕೀಟಗಳು ಹೊರ ಹೋಗುತ್ತದೆ. ನಂತರ ಅದನ್ನು ಸುಸ್ಸಜ್ಜಿತ ಕಂಟೇನರ್​ಗೆ ಹಾಕಿ ಶೇಖರಿಸಿ ಇಡಿ.

ತಂಪಾಗಿರುವ ವಾತಾವರಣದಲ್ಲಿ ಅಕ್ಕಿ ಇಡಬೇಡಿ

ಅಕ್ಕಿಯನ್ನು ತಂಪಾಗಿರುವ ಸ್ಥಳದಲ್ಲಿ ಶೇಖರಣೆ ಮಾಡಿ ಇಡಬೇಡಿ. ಇದರಿಂದಾಗಿ ಅಕ್ಕಿ ನುಸಿಯಾಗಿ, ಜಿಡ್ಡುಗಟ್ಟಿ, ದುರ್ವಾಸನೆ ಬರಲು ಶುರುವಾಗುವ ಸಾಧ್ಯತೆ ಇದೆ. ಹೀಗಾಗಿ ಒಣಗಿದ ವಾತಾವರಣ ಅಥವಾ ಸೂರ್ಯನ ನೆರಳು ಬೀಳುವ ಸ್ಥಳದಲ್ಲಿ ಅಕ್ಕಿಯನ್ನು ಇಡುವುದು ಸೂಕ್ತ ಕ್ರಮ.

ಒಣಗಿದ ಮೆಣಸು

ಒಣಗಿದ ಮೆಣಸಿನಕಾಯಿಯಲ್ಲಿರುವ ಖಾರವಾದ ಘಾಟು ಕೀಟಗಳಿಗೆ ಇಡಿಸೋದಿಲ್ಲ. ಹೀಗಾಗಿ ಅಕ್ಕಿಯನ್ನು ಮನೆಗೆ ತಂದ ನಂತರ ಬಾಕ್ಸ್​ನಲ್ಲಿ 8-10 ಎಸಳು ಮೆಣಸಿನ ಕಾಯಿ ಹಾಕಿ ಶೇಖರಿಸಿಡಿ. ಇದರಿಂದ ಹುಳವಾಗುವುದನ್ನು ತಡೆಯಬಹುದಾಗಿದೆ.

ಉಪ್ಪು ಹಾಕಿ

ಒಂದು ಕೆಜಿ ಉಪ್ಪಿಗೆ ಕಲ್ಲು ಉಪ್ಪನ್ನು ಹಾಕಿ ಇಡಿ. ಇದು ಮಾನ್ಸೂನ್​ನಲ್ಲಿ ತೇವಾಂಶದಿಂದ ಅಕ್ಕಿಯಲ್ಲಿ ಬರುವ ವಾಸನೆಯನ್ನು ತಡೆಯುತ್ತದೆ. ಜೊತೆಗೆ ಥಂಡೀ ವಾತಾವರಣಕ್ಕೆ ಒದ್ದೆಯಾದ ಅಕ್ಕಿಯನ್ನು ಒಣಗಿದಂತೆ ಇಡಲು ಸಹಾಯ ಮಾಡುತ್ತದೆ.

ಲವಂಗ-ಬೆಳ್ಳುಳ್ಳಿ ಬಳಸಿ

ಅಕ್ಕಿ ಡಬ್ಬದಲ್ಲಿ ಮಾನ್ಸೂನ್​ ಕಾಲದಲ್ಲಿ ಸುಲಿಯದ ಬೆಳ್ಳುಳ್ಳಿ 5-6 ಎಸಳು, ಇನ್ನೂ 4-5 ಲವಂಗವನ್ನು ಕಟ್ಟಿಡಿ. ಇವೆರೆಡರ ಗಾಢ ವಾಸನೆಗೆ ಯಾವುದೇ ಹುಳವೂ ಹತ್ತಿರ ಸುಳಿಯೋದಿಲ್ಲ. ಜೊತೆಗೆ ತೇವಾಂಶದಿಂದ ಇರಲು ಬಿಡುವುದಿಲ್ಲ, (ಏಜೆನ್ಸೀಸ್).