H Vinoth on Jana Nayagan delay
- ಜೂನ್ 19 ರಂದು ವಿಜಯ್ ಹುಟ್ಟುಹಬ್ಬದ ಅಂಗವಾಗಿ ರಿಲೀಸ್ ಆಗುವ ವದಂತಿ
- ಜನನಾಯಗನ್ ಸಿನಿಮಾ ಬಿಡುಗಡೆ ವಿಳಂಬದ ಬಗ್ಗೆ ನಿರ್ದೇಶಕ ವಿನೋತ್ ಹೇಳಿದ್ದೇನು
- ಜನನಾಯಗನ್ ಸಿನಿಮಾ ರಿಲೀಸ್ ವಿಳಂಬದ ಸತ್ಯವನ್ನು ಹೇಳಲುಧೈರ್ಯವಿಲ್ಲ ಎಂದ ಹೆಚ್. ವಿನೋತ್
- ಈ ಚಿತ್ರವು ಸೆನ್ಸಾರ್ ಮಂಡಳಿ ಯ ಒಪ್ಪಿಗೆ ಸಿಗದೆ ಕಳೆದ 5 ತಿಂಗಳಿನಿಂದ ನೆನೆಗುದಿಗೆ ಬಿದ್ದಿದೆ.
H Vinoth on Jana Nayagan Delay:
ಎಚ್. ವಿನೋತ್ ನಿರ್ದೇಶನ ಮತ್ತು ಕೆವಿಎನ್ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿರುವ ಜನನಾಯಗನ್ ಸಿನಿಮಾ ರಿಲೀಸ್ ಆಗುವ ಲಕ್ಷಣಗಳೇ ಕಾಣುತ್ತಿಲ್ಲ. ಜೋಸೆಫ್ ವಿಜಯ್ ಅವರು ತಮಿಳುನಾಡಿನ ಸಿಎಂ ಆದ ಬಳಿಕವೂ ಸಿನಿಮಾ ಬಿಡುಗಡ ಬಗ್ಗೆ ಹೇಳಿಕೆಗಳು ಕೇಳಿಬರುತ್ತಿದ್ದರೂ ಸಹ ದಿನಾಂಕ ಮಾತ್ರ ಫಿಕ್ಸ್ ಆಗ್ತಿಲ್ಲ.
ಇತ್ತೀಚೆಗೆ ಪಾಂಡಿರಾಜ್ ಅವರ ನಿರ್ದೇಶನದ 'ಪರಿಮಳ ಆಂಡ್ ಕೋ' ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಎಚ್ ವಿನೋತ್ ಭಾಗಿಯಾಗಿದ್ದರ. ನಿರೂಪಕಿಯೊಬ್ಬರು, ಜನನಾಯಗನ್ ಸಿನಿಮಾ ರಿಲೀಸ್ ಯಾವಾಗ ಎಂದು ಕೇಳಿದ್ದಾರೆ. ಈ ವೇಳೆ ನಿರ್ದೇಶಕ ವಿನೋತ್ ಅವರು ಆಡಿರುವ ಮಾತು ಗಂಭೀರ ಆಲೋಚನೆಗೆ ಕಾರಣವಾಗಿದೆ.
ವಿನೋತ್ ಹೇಳಿದ್ದೇನು?
ಇಡೀ ತಮಿಳುನಾಡು ಕೇಳುತ್ತಿರುವ ಪ್ರಶ್ನೆ ಇದು, ಈಗ ನಾನು ಸಹ ಅದನ್ನೇ ಕೇಳುತ್ತಿದ್ದೇನೆ. ದಯವಿಟ್ಟು ಹೇಳಿ, 'ಜನ ನಾಗನ್' ಸಿನಿಮಾ ಯಾವಾಗ ಬಿಡುಗಡೆಯಾಗುವುದೆಂದು ಎಂದು ನಿರೂಪಕಿ ಕೇಳಿದ್ದಾರೆ.
ವಿನೋತ್ ನಗುತ್ತಾ ಹೇಳಿದ್ದು ಹೀಗೆ..
'ಇಲ್ಲ ಇದು ನಮ್ಮ ಕೈಲಿಲ್ಲ. ಸತ್ಯ ಏನು ಎಂದು ಹೇಳುವ ಧೈರ್ಯ ನನಗಿಲ್ಲ. ನಿಮಗೆ ಸತ್ಯ ಹೇಳುವ ಧೈರ್ಯ ಮಾಡಿ, ಪೋಸ್ಟ್ ಹಂಚಿಕೊಂಡರೆ ಅದನ್ನು ರಿಸೀವ್ ಮಾಡಲು ಅಥವಾ ಬೇರೋಬ್ಬರಿಗೆ ನಾನು ಹೇಳುವ ಮಾಹಿತಿಯನ್ನು ಹಂಚಿಕೊಳ್ಳಲು ನಿಮ್ಮಿಂದ ಸಾಧ್ಯವಾಗೋದಿಲ್ಲ. ಹಾಗಾಗಿ ಯಾವಾಗ ಬರುತ್ತದೆಯೋ ನೋಡೋಣ‘ ಎಂದು ಹೇಳಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.
ವಿನೋತ್ ಅವರ ಈ ನಿಗೂಢ ಹೇಳಿಕೆ ವೇದಿಕೆಯಲ್ಲಿದ್ದ ಸಹ-ನಿರ್ದೇಶಕರಾದ ಪಾ ರಂಜಿತ್ ಹಾಗೂ ಮತ್ತಿತ್ತರಲ್ಲಿ ಅವರಲ್ಲಿ ನಗು ತರಿಸಿದರೂ, ವಿಜಯ್ ಅಭಿಮಾನಿಗಳಲ್ಲಿ ಚಿತ್ರದ ಬಿಡುಗಡೆಯ ಹಿಂದಿನ ರಾಜಕೀಯ ಅಥವಾ ಸೆನ್ಸಾರ್ ಮಂಡಳಿಯ ಒತ್ತಡಗಳ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಸಿನಿಮಾ ರಿಲೀಸ್ಗೆ ತಡವ್ಯಾಕೆ?
ವಿಜಯ್ ಅಭಿನಯದ ಕೊನೆಯ ಸಿನಿಮಾ ಜನನಾಯಗನ್ನಲ್ಲಿ ಬಾಬಿ ಡಿಯೋಲ್, ಪೂಜಾ ಹೆಗ್ಡೆ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜನವರಿ 9ರಂದು ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆನಂತರ ಮಕರ ಸಂಕ್ರಾಂತಿಯಂದು ತೆರೆಗೆ ಬರಲಿದೆ ಎಂದಿದ್ದರು.. ಆದರೆ, ಕಳೆದ ಐದು ತಿಂಗಳಿನಿಂದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಯಿಂದ ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಬಾಕಿಯಾಗಿದೆ.
ಎಚ್ಡಿ ಪ್ರಿಂಟ್ ಲೀಕ್
ಕೆವಿಎನ್ ಪ್ರೊಡಕ್ಷನ್ಸ್ (KVN Productions) ನ ವೆಂಕಟ್ ಕೆ. ನಾರಾಯಣ ಅವರು ಸೆನ್ಸಾರ್ ವಿಳಂಬದ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರೂ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಇದರ ನಡುವೆ ಕಳೆದ ಏಪ್ರಿಲ್ ತಿಂಗಳಲ್ಲಿ ಚಿತ್ರದ ಕೆಲವು ಪ್ರಮುಖ ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಈ ಸಂಬಂಧ ಒಂಬತ್ತು ಜನರನ್ನು ಬಂಧಿಸಲಾಗಿತ್ತು.
ಜೂನ್‌ನಲ್ಲಿ ರಿಲೀಸ್?
ಇತ್ತೀಚೆಗೆ 'ಬುಕ್‌ಮೈಶೋ' ನಂತಹ ಟಿಕೆಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಜೂನ್ 19 ರಂದು (ವಿಜಯ್ ಅವರ 52 ನೇ ಜನ್ಮದಿನದ ಮುನ್ನಾದಿನ) ಬಿಡುಗಡೆಯಾಗಲಿದೆ ಎಂದು ತೋರಿಸಲಾಗಿತ್ತು. ಆದರೆ ತಮಿಳುನಾಡಿನ ಚಲನಚಿತ್ರ ತಂತ್ರಜ್ಞಾನ ಸಚಿವ ರಾಜ್‌ಮೋಹನ್ ಅರುಮುಗಂ ಈ ಬಗ್ಗೆ ಪ್ರತಿಕ್ರಿಯಿಸಿ, "ಯಾವುದೇ ಚಿತ್ರವನ್ನು ರಾಜಕೀಯ ಕಾರಣಗಳಿಗಾಗಿ ತಡೆ ಹಿಡಿಯಲು ಸಾಧ್ಯವಿಲ್ಲ. ಕಾನೂನಾತ್ಮಕವಾಗಿ ಸೆನ್ಸಾರ್ ಪ್ರಕ್ರಿಯೆಗಳು ಮುಗಿದ ನಂತರವಷ್ಟೇ ಸಿನಿಮಾ ಬಿಡುಗಡೆಯಾಗಲಿದೆ ಎಂದಿದ್ದರು, (ಏಜೆನ್ಸೀಸ್).