ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ನೀವು ಮಾಡಬೇಕಾದ ಕೆಲಸಗಳಿವು
ನಿಮ್ಮ ಮೊಬೈಲ್ನಿಂದ ಈ ಐದು ವಿಚಾರಗಳನ್ನು ಡಿಲೀಟ್ ಮಾಡಿಬಿಡಿ
ಸುಖ ಸಂಸಾರದ ಜೀವನಕ್ಕೆ ಮಾಜಿ ಪ್ರೇಮಿಯಿಂದ ದೂರವಿರಿ
Digital detox for marriage: ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಲೇ ಪತ್ನಿ ಮತ್ತು ಪತಿ ಜೊತೆಗೆ ಯಾವುದೇ ಮನಸ್ತಾಪ ಮೂಡದಂತೆ ನೋಡಿಕೊಳ್ಳುವುದು ಮುಖ್ಯ. ಹೀಗಾಗಿ ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ಕಾಂಟ್ಯಾಕ್ಟ್ನಲ್ಲಿರುವ ಹಳೆ ಪ್ರೇಯಸಿ, ಗೆಳತಿ ವಿಚಾರ ಆಗಾಗ ಬೆಳಕಿಗೆ ಬಂದು ಇಬ್ಬರ ಮಧ್ಯೆ ಉಂಟಾಗುವ ವೈರತ್ವ ಅಥವಾ ರಹಸ್ಯ ಲಾಕರ್ನಿಂದ ಎದುರಾಗುವ ಸಂಕಷ್ಟ, ಮೆಸೇಜ್ ಹಿಸ್ಟರಿಗಳು ದ್ವೇಷಕ್ಕೆ ಕಾರಣವಾಗಬಹುದು. ಹೀಗಾಗಿ ನೀವು ನವಜೋಡಿಯಾಗುತ್ತಲೇ ಈ 5 ಅಂಶಗಳನ್ನು ಮರೆಯದೇ ಮಾಡಿ.
ಮಾಜಿ ಪ್ರೇಮಿಗಳ ಪೋಟೋ, ವಿಡಿಯೋ ಇಟ್ಟುಕೊಳ್ಳಬೇಡಿ
ನೀವು ಮದುವೆಯಾದ ನಂತರ ಅಥವಾ ಅದರ ಹಿಂದಿನ ದಿನಗಳು ಬಿಡುವಿದ್ದರೆ ನಿಮ್ಮ ಹಳೆಯ ಸಂಗಾತಿ ಜೊತೆಗೆ ನೀವು ಆತ್ಮೀಯವಾಗಿ ತೆಗೆಸಿಕೊಂಡ ಫೋಟೋಗಳನ್ನು ಡಿಲೀಟ್ ಮಾಡಿಕೊಳ್ಳಿ. ಹಳೆಯ ಪ್ರೇಮದ ನೆನಪು, ಚಾಟ್, ವಿಡಿಯೋ ಎಲ್ಲವನ್ನು ಡಿಲೀಟ್ ಮಾಡಿ. ಇದು ಅಕಸ್ಮಾತ್ ನಿಮ್ಮ ಸಂಗಾತಿಯ ಕಣ್ಣಿಗೆ ಬಿದ್ದರೆ ಅನಗತ್ಯ ಸಂಶಯ ಕಾಡುವುದು. ಅಭದ್ರತೆ ಉಂಟಾಗುವುದು ಅಥವಾ ಗಂಭೀರ ಮನಸ್ತಾಪಕ್ಕೆ ಕಾರಣವಾಗಬಹುದಾಗಿದೆ.
ಇನ್ನೂ ರಹಸ್ಯ ಲಾಕರ್ಗೆ ಗುಡ್ಬೈ ಹೇಳಿ
ನಿಮ್ಮ ಹಳೆಯ ಸಂಗಾತಿಯ ನೆನಪಿಗಾಗಿ ಆಕೆ/ಆತನ ಪೋಟೋ, ವಿಡಿಯೋ ಚಾಟ್ಗಳ ಸ್ಕ್ರೀನ್ ಶಾಟ್ ಅನ್ನು ನೀವು ಮೊಬೈಲ್ನಲ್ಲಿ ಇಟ್ಟುಕೊಂಡಿದ್ದರೆ, ಅದನ್ನು ಮೊದಲು ಡಿಲೀಟ್ ಮಾಡಿ. ಮದುವೆಯಾದ ನಂತರವೂ ಈ ಅಪ್ಲಿಕೇಶನ್ಗಳನ್ನು ಇಟ್ಟುಕೊಂಡರೆ ಅಕಸ್ಮಾತ್ ಆಗಿ ಅದನ್ನು ನೋಡುವ ನಿಮ್ಮ ಪತ್ನಿ ನಿಮಗೆ ಯಾವುದೋ ರಿಲೇಷನ್ ಶಿಪ್ ಇರಬಹುದು ಎಂದು ಭಾವಿಸುತ್ತಾಳೆ. ಯಾವುದನ್ನೋ ಲಾಕರ್ ಅಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದಾರೆ ಎಂದು ಅನುಮಾನಿಸಲು ಶುರು ಮಾಡಿಕೊಳ್ಳುತ್ತಾರೆ.
ಡೇಟಿಂಗ್ ಆಪ್ಲಿಕೇಶನ್ಗೆ ಕಡಿವಾಣ ಬೀಳಲಿ
ನಿಮ್ಮ ಮದುವೆಗೂ ಮುನ್ನ ಸಾಮಾನ್ಯವಾಗಿ ನಿಮಗಾಗಿ ಒಬ್ಬ ಸಂಗಾತಿಯನ್ನು ಬಯಸಿ ಅಥವಾ ಡೇಟಿಂಗ್ಗಾಗಿ ಬಂಬಲ್, ಟೆಂಡರ್ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ. ಸಂಪೂರ್ಣವಾಗಿ ಡಿಲೀಟ್ ಮಾಡಿ. ಇಂತಹ ಅಪ್ಲಿಕೇಶನ್ಗಳು ನಿಮ್ಮ ಮೇಳೆ ಅನುಮಾನ ಮೂಡುವಂತೆ ಮಾಡಬಹುದು ಎನ್ನಲಾಗಿದೆ.
ಮೆಸೇಜ್-ಚಾಟ್ ಹಿಸ್ಟರಿ ಡಿಲೀಟ್ ಮಾಡಿ
ನಿಮ್ಮಮೊಬೈಲ್ನಲ್ಲಿರುವ ಹಳೆಯ ಸಂಗಾತಿಯ ಇನ್ಸ್ಟಾಗ್ರಾಮ್, ಫೇಸ್ಬುಕ್ ಮೆಸೇಜ್ಗಳಲ್ಲಿರುವ ಪ್ರೇಮದ ಚಾಟ್, ವಿಡಿಯೋ, ವಾಯ್ಸ್ ಮೆಸೇಜ್ಗಳನ್ನು ಡಿಲೀಟ್ ಮಾಡಿ. ಹಳೆಯ ನೆನಪನ್ನು ಇಟ್ಟುಕೊಳ್ಳುವುದು ಹೊಸ ಸಂಬಂಧಕ್ಕೆ ಸಮಸ್ಯೆಯನ್ನುಂಟು ಮಾಡಬಹುದು.
ಮಾಜಿ ಪ್ರೇಮಿ, ಅನವಶ್ಯಕ ನಂಬರ್ ಡಿಲೀಟ್ ಮಾಡಿ
ನಿಮ್ಮ ಮೊಬೈಲ್ನಲ್ಲಿ ಹಳೆಯ ಸಂಗಾತಿ ಮತ್ತು ಅನವಶ್ಯಕವಾಗಿ ತುಂಬಿರುವ ನಂಬರ್ಗಳನ್ನು ಡಿಲೀಟ್ ಮಾಡಿಬಿಡಿ. ಅಕಸ್ಮಾತ್ ಆಗಿ ಬರುವ ಫೋನ್ ಕರೆಗಳು ಇಬ್ಬರಲ್ಲಿಯೂ ವೈಮನಸ್ಸು ಮೂಡಿಸುವ ಸಾಧ್ಯತೆ ಇರುತ್ತದೆ. ಸುಖಕರ ಜೀವನಕ್ಕಾಗಿ ಅನಗತ್ಯ ವಿಚಾರಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ, (ಏಜೆನ್ಸೀಸ್).