ಸಾಮಾಜಿಕ ಜಾಲತಾಣದಲ್ಲಿ ವೈರಲ್
ವೈರಲ್: ಸಾಮಾಜಿಕ ಜಾಲತಾಣ ಎನ್ನುವುದು ವಿಸ್ಮಯಗಳ ಗೂಡು. ಇಲ್ಲಿ ದಿನಕ್ಕೊಂದು ವಿಡಿಯೋ ವೈರಲ್ (Viral Video) ಆಗುತ್ತಿರುತ್ತದೆ. ಆದರೆ ಈಗ ಹರಿದಾಡುತ್ತಿರುವ ಒಂದು ವಿಡಿಯೋ ಮಾತ್ರ ಇಡೀ ಇಂಟರ್ನೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಎದೆನಡುಗಿಸುವ ದೃಶ್ಯವೊಂದರಲ್ಲಿ ಸಾಕ್ಷಾತ್ ಹನುಮಂತನೇ ಬಂದು ಮಗುವನ್ನು ರಕ್ಷಿಸಿದನೇ? ಎಂಬ ಚರ್ಚೆ ಈಗ ಸೋಶಿಯಲ್ ಮೀಡಿಯಾನಲ್ಲಿ ಶುರುವಾಗಿದೆ.
ವಿಡಿಯೋಲೇನಿದೆ?
ವೈರಲ್ ಆಗಿರುವ ಈ ವಿಡಿಯೋ ನೋಡಿದರೆ ಎಂತಹವರಿಗೂ ಒಂದು ಕ್ಷಣ ಉಸಿರು ಬಿಗಿ ಹಿಡಿದಂತಾಗುತ್ತದೆ. ಬಹುಮಹಡಿ ಕಟ್ಟಡವೊಂದರ ಬಾಲ್ಕನಿಯಲ್ಲಿ ಪುಟ್ಟ ಮಗುವೊಂದು ಆಯತಪ್ಪಿ ಬೇಲಿಯಿಂದ ಹೊರಭಾಗಕ್ಕೆ ನೇತಾಡುತ್ತಿದೆ. ಒಂದು ಸಣ್ಣ ತಪ್ಪು ನಡೆದರೂ ಮಗು ನೂರಾರು ಅಡಿ ಎತ್ತರದಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತು.
ಮಗು ಬೀಳುವ ಆತಂಕದಲ್ಲಿದ್ದಾಗ, ಎಲ್ಲಿಂದಲೋ ಬಂದ ಲಂಗೂರ್ (ಕೋತಿ) ಮಿಂಚಿನ ವೇಗದಲ್ಲಿ ಮಗು ಬೀಳುವ ಮುನ್ನವೇ ಅದನ್ನು ಭದ್ರವಾಗಿ ಹಿಡಿದುಕೊಂಡ ಕೋತಿ, ಕೇವಲ ಒಂದೇ ಜಿಗಿತದಲ್ಲಿ ಕೆಳಗಿನ ಬಾಲ್ಕನಿಗೆ ಸುರಕ್ಷಿತವಾಗಿ ಜಿಗಿಯುತ್ತದೆ. ಮಗುವನ್ನು ಕ್ಷೇಮವಾಗಿ ಕೆಳಗಿಳಿಸಿದ ಈ ದೃಶ್ಯ ನೋಡುಗರ ಕಣ್ಣಲ್ಲಿ ನೀರನ್ನು ತರಿಸಿದೆ.
ಪವಾಡ ಎಂದ ನೆಟ್ಟಿಗರು
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಭಕ್ತಿಯ ಅಲೆ ಎದ್ದಿದೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಲಕ್ಷಾಂತರ ಜನರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಆಪತ್ಕಾಲದಲ್ಲಿ ಮಗುವನ್ನು ರಕ್ಷಿಸಲು ಹನುಮಂತನೇ ಮಂಗನ ರೂಪದಲ್ಲಿ ಬಂದಿದ್ದಾನೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ದೇವರು ಇದ್ದಾನೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ? ಎಂದು ಭಕ್ತರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ತಜ್ಞರು ಹೇಳುವುದೇ ಬೇರೆ
ಒಂದೆಡೆ ಭಕ್ತಿಯ ಮಾತು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಗೊತ್ತಿರುವವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇಂದಿನ AI (ಕೃತಕ ಬುದ್ಧಿಮತ್ತೆ) ಯುಗದಲ್ಲಿ ಇಂತಹ ವಾಸ್ತವಿಕ ವಿಡಿಯೋಗಳನ್ನು ಸೃಷ್ಟಿಸುವುದು ಬಹಳ ಸುಲಭ. ವಿಡಿಯೋದ ಎರಡನೇ ಫ್ರೇಮ್‌ನಲ್ಲಿ ಕೋತಿಯ ಜಿಗಿತವು ನೈಸರ್ಗಿಕವಾಗಿ ಕಾಣುತ್ತಿಲ್ಲ ಎಂಬುದು ಕೆಲವರ ವಾದವಾಗಿದೆ. ಇದು ಎಡಿಟ್ ಮಾಡಿದ ವಿಡಿಯೋ ಅಥವಾ AI ನಿಂದ ತಯಾರಾದ ದೃಶ್ಯವಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ,(ಏಜನ್ಸೀಸ್).