ಸಾಂದರ್ಭಿಕ ಚಿತ್ರ 
ವೆಬ್‌ಡೆಸ್ಕ್

ಶನಿಯ ಮನೆಯಲ್ಲಿ ಚತುರ್ಗ್ರಹಿ ಯೋಗ: ಇಂದಿನಿಂದ ಈ ರಾಶಿಯವರ ಅದೃಷ್ಟದ ಬಾಗಿಲು ಓಪನ್​! Astrology

Astrology: ಜ್ಯೋತಿಷ್ಯದಲ್ಲಿ ಫೆಬ್ರವರಿ ತಿಂಗಳು ಬಹಳ ಒಳ್ಳೆಯದಂದು ಗುರುತಿಸಲಾಗುತ್ತದೆ. ವಿಶೇಷವಾಗಿ, ಅನೇಕ ಗ್ರಹಗಳು ಒಂದರ ನಂತರ ಒಂದರಂತೆ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಬಾರಿ, ಕುಂಭ ರಾಶಿಯಲ್ಲೂ ಇದೇ ರೀತಿಯ ಅಪರೂಪದ ಕಾಕತಾಳೀಯ ಸಂಭವಿಸುವುದರಿಂದ ಕೆಲವೊಂದು ರಾಶಿಯವರಿಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಪ್ರಸ್ತುತ ಬುಧ, ಸೂರ್ಯ, ಮಂಗಳ ಮತ್ತು ಶುಕ್ರ ಎಲ್ಲರೂ ಮಕರ ರಾಶಿಯಲ್ಲಿದ್ದಾರೆ, ಆದರೆ ಈಗ ಅವುಗಳ ಪ್ರಭಾವವು ಕುಂಭ ರಾಶಿಯ ಮೂಲಕ ಇತರ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಕೆಲವೊಂದು ರಾಶಿಗಳ ಮೇಲೆ ಪ್ರಯೋಜನ ನೀಡಲಿದೆ ಎಂದು ಹೇಳಲಾಗುತ್ತದೆ. ಹಾಗಿದ್ರೆ ಯಾವ ರಾಶಿಯವರು ಪ್ರಯೋಜನ ಪಡೆಯುತ್ತಾರೆ ಎಂದು ನೋಡೋಣ ಬನ್ನಿ...

ಮಿಥುನ ರಾಶಿ

ಕುಂಭ ರಾಶಿಯಲ್ಲಿ ಚತುರ್ಗ್ರಹಿ ಯೋಗವು ರೂಪುಗೊಳ್ಳುವುದರಿಂದ ಮಿಥುನ ರಾಶಿಯವರಿಗೆ ಉತ್ತಮ ಸಮಯವಾಗಿರುತ್ತದೆ. ಈ ವೇಳೆ ಅವರು ನಾಯಕತ್ವದ ಅವಕಾಶಗಳನ್ನು ಹೊಂದುತ್ತಾರೆ. ಕೆಲಸ ಮಾಡುತ್ತಿರುವವರಿಗೆ ಈ ಅವಧಿಯು ಮನ್ನಣೆ ಮತ್ತು ಜವಾಬ್ದಾರಿಗಳನ್ನು ತರುತ್ತದೆ. ವೃತ್ತಿ ಪ್ರಗತಿಗೆ ಸಹಾಯ ಮಾಡುತ್ತದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಇದು ಅನುಕೂಲವನ್ನು ನೀಡುತ್ತದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿದ್ದು, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಪ್ರಗತಿಗೆ ಇದು ಶುಭ ಸಮಯ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಗ್ರಹಗಳ ಸಂಚಾರವು ಉಪಯುಕ್ತವಾಗಿದೆ. ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದ ಯೋಜನೆಗಳು ಕ್ರಮೇಣ ಈಡೇರುತ್ತವೆ. ಹಳೆಯ ಸಾಲಗಳನ್ನು ತೀರಿಸುವ ಅಥವಾ ಬಾಕಿ ಇರುವ ಹಣವನ್ನು ಮರುಪಡೆಯುವ ಸಾಧ್ಯತೆಯಿದೆ. ಕೆಲಸ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ನಿರಂತರ ಲಾಭವನ್ನು ನಿರೀಕ್ಷಿಸಬಹುದು. ಆರ್ಥಿಕ ಪರಿಸ್ಥಿತಿ ಸುಧಾರಲಿದ್ದು, ನಿಮ್ಮ ಯೋಜನೆಗಳು ಪೂರ್ತಿಯಾಗಲಿವೆ.

ಕುಂಭ ರಾಶಿ

ಈ ಸಮಯವನ್ನು ಕುಂಭ ರಾಶಿಯವರಿಗೆ ವಿಶೇಷವೆಂದು ಪರಿಗಣಿಸಲಾಗುತ್ತದೆ. ಒಂದೇ ರಾಶಿಯಲ್ಲಿ ನಾಲ್ಕು ಗ್ರಹಗಳು ಚಲಿಸುವುದರಿಂದ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯದಾಗಲಿದೆ. ನಿರಂತರ ಪರಿಶ್ರಮ, ಕಠಿಣ ನಿರ್ಧಾರಗಳು ಯಶಸ್ಸನ್ನು ನೀಡಲಿವೆ. ತಾಳ್ಮೆ ಮತ್ತು ತಿಳುವಳಿಕೆ ಮುಂದುವರೆದಂತೆ ಅನೇಕ ಉಪಯೋಗಗಳು ಕಾಣುತ್ತವೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.