Aishwarya Rai Bachchan ಚಿತ್ರ Instagram 
ವೆಬ್‌ಡೆಸ್ಕ್

ಕೊನೆಗೂ ರೆಡ್ ಕಾರ್ಪೆಟ್ ಮೇಲೆ ಕೇನ್ಸ್ ರಾಣಿಯ ದರ್ಬಾರ್! ‘ಲುಮಿನಾರಾ’ ನೀಲಿ ಗೌನ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ... Aishwarya Rai Bachchan

Aishwarya Rai Bachchan: ‘ಕೇನ್ಸ್ ಚಲನಚಿತ್ರೋತ್ಸವ 2026’ ಮೇ 12 ರಂದು ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿದೆ. ಒಂದು ಕಡೆ ಚಿತ್ರರಂಗದ ತಾರೆಯರು ರೆಡ್​ ಕಾರ್ಪೆಟ್​ ಮೇಲೆ ಮಿಂಚುತ್ತಿದ್ದರೆ ಸಿನಿಮಾ ಪ್ರೇಮಿಗಳು ಮಾತ್ರ ಒಂದು ಜನಪ್ರಿಯ ಮುಖವನ್ನು ಮಿಸ್​ ಮಾಡಿಕೊಳ್ಳುತ್ತಿದ್ದರು. ಅವರೇ ಸುಂದರಿ ಐಶ್ವರ್ಯಾ ರೈ ಬಚ್ಚನ್​. ಆದರೆ, ಈಗ ಅಭಿಮಾನಿಗಳ ಸುದೀರ್ಘ ಕಾಯುವಿಕೆಗೆ ತೆರೆ ಬಿದ್ದಿದ್ದು, ಐಶ್ವರ್ಯಾ ರೈ ಅವರ ಬಹುನಿರೀಕ್ಷಿತ ಫಸ್ಟ್ ಲುಕ್ ಕೊನೆಗೂ ಬಿಡುಗಡೆಯಾಗಿದೆ.

ಕೇನ್ಸ್‌ನಿಂದ ಐಶ್ವರ್ಯಾ ರೈ ಮೊದಲ ನೋಟ

ಈ ಬಾರಿ ಕೇನ್ಸ್‌ಗೆ ಪಾದಾರ್ಪಣೆ ಮಾಡಿದ ಐಶ್ವರ್ಯಾ, ಡಿಸೈನರ್​ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ಮತ್ಸ್ಯಕನ್ಯೆಯ ಫಿನಿಶ್ ಹೊಂದಿರುವ ನೀಲಿ ಗೌನ್​ನಲ್ಲಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದರು. ಅವರು ಶೀನ್​ ದುಪಟ್ಟಾದೊಂದಿಗೆ ತಮ್ಮ ಲುಕ್​ನ್ನು ಪೂರ್ಣಗೊಳಿಸಿದರು.
ವರದಿಗಳ ಪ್ರಕಾರ, ಅಮಿತ್ ಅಗರ್ವಾಲ್ ಈ ವರ್ಷದ ಪ್ರದರ್ಶನಕ್ಕಾಗಿ ವಿಶೇಷವಾದ ಲುಮಿನಾರಾವನ್ನು ವಿನ್ಯಾಸಗೊಳಿಸಿದ್ದು, ಇದು "ಚಲನೆಯಲ್ಲಿ ಬೆಳಕು" (Light in Motion) ಎಂಬ ವಿನೂತನ ಪರಿಕಲ್ಪನೆಯನ್ನು ಆಧರಿಸಿದೆ. ಸಾಮಾನ್ಯವಾಗಿ ಫ್ಯಾಷನ್ ಜಗತ್ತಿನಲ್ಲಿ ಬೆಳಕನ್ನು ಕೇವಲ ಹೊಳಪು ಅಥವಾ ಪ್ರಕಾಶಕ್ಕಾಗಿ ಬಳಸಲಾಗುತ್ತದೆ. ಆದರೆ, ಅಗರ್ವಾಲ್ ಅವರು ಈ ಕೃತಿಯಲ್ಲಿ ಬೆಳಕನ್ನು ಕೇವಲ ಒಂದು ದೃಶ್ಯ ವೈಭವವಾಗಿ ನೋಡದೆ, ಅದನ್ನು ಶಕ್ತಿ , ಚಲನೆ ಮತ್ತು ಬಲದ ಸಂಕೇತವಾಗಿ ಪರಿಶೋಧಿಸಿದ್ದಾರೆ.
ಐಶ್ವರ್ಯ ಯಾವಾಗಲೂ ಕೇನ್ಸ್ ಅನ್ನು ಬಲವಾದ ವ್ಯಕ್ತಿತ್ವ ಮತ್ತು ವಿಕಾಸದ ಪ್ರಜ್ಞೆಯೊಂದಿಗೆ ಸಂಪರ್ಕಿಸಿದ್ದಾರೆ. ಲುಮಿನಾರಾ ಮೂಲಕ ಸ್ಟೈಲಿಸ್ಟ್ ಮೋಹಿತ್ ರೈ ಮತ್ತು ನಾನು ಕೇವಲ ಒಂದು ಉಡುಪಿನಂತೆ ಕಾಣುವ ರೇಡಿಯಂಟ್ ವಿನ್ಯಾಸವನ್ನು ಮಾಡಲು ಬಯಸಲಿಲ್ಲ; ಬದಲಾಗಿ ಅವಳ ಸುತ್ತಲೂ ಒಂದು 'ಶಕ್ತಿ ಕ್ಷೇತ್ರದಂತೆ' ಭಾಸವಾಗುವ ವಿಶಿಷ್ಟವಾದದ್ದನ್ನು ರಚಿಸಲು ಬಯಸಿದ್ದೆವು, ಎಂದು ಅಮಿತ್ ಅಗರ್ವಾಲ್ ತಿಳಿಸಿದ್ದಾರೆ.
ಐಶ್ವರ್ಯಾ ರೈ ತಮ್ಮ ಲುಕ್​ನ್ನು ಪೂರ್ಣಗೊಳಿಸಲು, ತನ್ನ ಕೂದಲನ್ನು ಮೃದುವಾದ, ಸಡಿಲವಾದ ಸುರುಳಿಗಳಲ್ಲಿ ಧರಿಸಿದ್ದರು ಮತ್ತು ಮೇಕಪ್‌ಗಾಗಿ ಕೆನ್ನೆಗೆ ಗುಲಾಬಿ ಬ್ಲಷ್​ ಮತ್ತು ಐಶ್ಯಾಡೋವನ್ನು ಆರಿಸಿಕೊಂಡರು. ಕೆಂಪು ಲಿಪ್ಸ್ಟಿಕ್, ನೀಲಿ ಬಣ್ಣದ ವಜ್ರ ಖಚಿತ ಆಭರಣವನ್ನು ಧರಿಸಿ ಕೇನ್ಸ್​ನಲ್ಲಿ ಕಂಗೊಳಿಸುತ್ತಿದ್ದರು.

ಹಿಂದೆ ಏನಾಗಿತ್ತು?

ಕೇನ್ಸ್​ ಚಲನಚಿತ್ರೋತ್ಸವ ಪ್ರಾರಂಭವಾಗಿ ಸುಮಾರು ದಿನಗಳು ಕಳೆದರೂ ಬಾಲಿವುಡ್​ ಕ್ವೀನ್​ ಐಶ್ವರ್ಯ ರೈ ಅವರ ಉಪಸ್ಥಿತಿ ಕಂಡುಬಂದಿರಲಿಲ್ಲ. ಇದರಿಂದ ಅವರ ಅನೇಕ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದ ಬೆನ್ನಲ್ಲೇ ಅವರು ತಮ್ಮ ಮಗಳೊಂದಿಗೆ ಕೇನ್ಸ್​ಗೆ ಹೋಗಲು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಅವರನ್ನು ಪ್ರೀತಿಸುವ ಜನರಿಗೆ ಕುತೂಹಲ ಉಂಟಾಗಿತ್ತು.

ಏರ್‌ಪೋರ್ಟ್‌ನಲ್ಲಿ ತಾಯಿ-ಮಗಳ ‘ಬ್ಲಾಕ್ ಟ್ವಿನ್ನಿಂಗ್’ ಲುಕ್

ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಐಶ್ವರ್ಯಾ ರೈ ಮತ್ತು ಆರಾಧ್ಯ ಇಬ್ಬರೂ ಕಪ್ಪು ಬಣ್ಣದ ಮ್ಯಾಚಿಂಗ್ ಉಡುಪುಗಳನ್ನು ಧರಿಸಿ ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಸದಾ ಮಗಳ ಕೈ ಹಿಡಿದುಕೊಂಡೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಐಶ್ವರ್ಯಾ, ಈ ಬಾರಿಯೂ ಆರಾಧ್ಯ ಜೊತೆ ಕ್ಯಾಮೆರಾಗಳಿಗೆ ಮುಗುಳ್ನಗುತ್ತಲೇ ಫೋಸ್ ನೀಡಿದ್ದು, ತಾಯಿ-ಮಗಳ ಜೋಡಿಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ವಿಡಿಯೋ ಆನ್​ಲೈನ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಸಂತೋಷಪಟ್ಟ ಅನೇಕ ಅಭಿಮಾನಿಗಳು ಕೇನ್ಸ್ ಹಬ್ಬದ ಅಸಲಿ ರಾಣಿ 'ಎಕ್ಸ್‌ಕ್ಲೂಸಿವಾಗಿ ಎಂಟ್ರಿ ಕೊಟ್ಟಿದ್ದಾರೆ, ಇನ್ನು ರೆಡ್ ಕಾರ್ಪೆಟ್ ಮೇಲೆ ಅಸಲಿ ಧಮಾಕಾ ಶುರು ಎಂದು ಕೊಂಡಾಡಿದ್ದಾರೆ (ಏಜೆನ್ಸೀಸ್​).