ಬೈಕ್ ಮೇಲೆ ಮಗುವಿಗೆ ಜನ್ಮ, ನೀಡಿದ ಮಹಿಳೆ
ವಿಯೆಟ್ನಾಂ: ಮಹಿಳೆಯೊಬ್ಬಳಿಗೆ ವಿಪರೀತವಾದ ಹೆರಿಗೆ ನೋವು ಕಂಡುಬಂದಿದ್ದು, ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಬೈಕ್‌ನ ಹಿಂಬದಿಯಲ್ಲೇ ಮಗುವಿಗೆ ಜನ್ಮ
(Baby Born On Bike) ನೀಡಿರುವ ಅಪರೂಪದ ಹಾಗೂ ಅಚ್ಚರಿಯ ಘಟನೆಯೊಂದು ವಿಯೆಟ್ನಾಂನಲ್ಲಿ ನಡೆದಿದೆ.
ಈಗ ಈ ಅದ್ಭುತ ಹೆರಿಗೆ ಬಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ಜನ ದಂಗಾಗಿದ್ದಾರೆ.
ಆಸ್ಪತ್ರೆ ತಲುಪುವ ಮೊದಲೇ ಡೆಲಿವರಿ!
ವರದಿಗಳ ಪ್ರಕಾರ, ಈ ಘಟನೆ ಸೋಮವಾರ (ಆ.3) ವಿಯೆಟ್ನಾಂನ ಥಾಯ್ ನ್ಗುಯೆನ್ ಪ್ರಾಂತ್ಯದಲ್ಲಿರುವ ಫು ಲುವಾಂಗ್ ಆಸ್ಪತ್ರೆಯ ಹೊರಗೆ ಈ ಅಚ್ಚರಿಯ ಘಟನೆ ವರದಿಯಾಗಿದೆ.
32 ವಾರಗಳ ಗರ್ಭಿಣಿಯಾಗಿದ್ದ 25 ವರ್ಷದ ಯುವತಿಗೆ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆ ನೋವು ಶುರುವಾಗಿದೆ. ಕೂಡಲೇ ಎಚ್ಚೆತ್ತ ಆಕೆಯ ಪತಿ, ಪತ್ನಿಯನ್ನು ಮೋಟಾರ್ ಸೈಕಲ್ ಹತ್ತಿಸಿಕೊಂಡು ಆಸ್ಪತ್ರೆಯತ್ತ ಹೊರಟಿದ್ದಾರೆ.
ಆದರೆ, ದುರಾದೃಷ್ಟವಶಾತ್ ಆಸ್ಪತ್ರೆಯ ಗೇಟ್ ತಲುಪುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ಆಸ್ಪತ್ರೆಯ ಪ್ರವೇಶದ್ವಾರ ತಲುಪುವಷ್ಟರಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಬೈಕ್‌ನಿಂದ ಇಳಿಯುವಾಗ ನವಜಾತ ಶಿಶು ತಾಯಿಯ ಹೊಕ್ಕುಳಬಳ್ಳಿಯೊಂದಿಗೆ ಇನ್ನೂ ಜೋಡಿಸಲ್ಪಟ್ಟೇ ಇತ್ತು. ಇದನ್ನು ನೋಡಿದ ರಸ್ತೆಯಲ್ಲಿದ್ದ ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಬೆಚ್ಚಿಬಿದ್ದಾರೆ.
ನೆರವಿಗೆ ಧಾವಿಸಿದ ವೈದ್ಯರು
ಯಾವುದೇ ಅನಾಹುತವಾಗುವ ಮುನ್ನವೇ ಎಚ್ಚೆತ್ತ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ತಕ್ಷಣವೇ ಬೈಕ್ ಬಳಿಗೆ ಓಡಿಬಂದು ಮಹಿಳೆ ಬೈಕ್‌ನಿಂದ ಇಳಿಯುವಾಗ ಮಗುವಿನ ಮೇಲೆ ಯಾವುದೇ ಒತ್ತಡ ಬೀಳದಂತೆ ಬಹಳ ಎಚ್ಚರಿಕೆಯಿಂದ ನಿಲ್ಲುವಂತೆ ಸಿಬ್ಬಂದಿ ಸೂಚಿಸಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯಕೀಯ ತಂಡ, ನವಜಾತ ಶಿಶುವನ್ನು ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿ, ಹುಷಾರಾಗಿ ಹೊಕ್ಕುಳಬಳ್ಳಿಯನ್ನು ಕತ್ತರಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಹಾಗೂ ಹಸುಗೂಸನ್ನು ಹೆರಿಗೆ ಕೋಣೆಗೆ ಕರೆದೊಯ್ದು ಚಿಕಿತ್ಸೆ ಮಂದುವರಿಸಿದ್ದಾರೆಂದು ತಿಳಿದು ಬಂದಿದೆ.
ತಾಯಿ-ಮಗು ಆರೋಗ್ಯವಾಗಿದ್ದಾರೆ!
ವಿಯೆಟ್ನಾಂನ ಮಾಧ್ಯಮ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಜನಿಸಿದ ಗಂಡು ಮಗು ಸುಮಾರು 2 ಕೆಜಿ ತೂಕವಿದೆ. 32 ವಾರಗಳಲ್ಲೇ ಅಕಾಲಿಕವಾಗಿ ಜನಿಸಿರುವುದರಿಂದ ಮಗುವನ್ನು ಸದ್ಯ ವೈದ್ಯರ ವಿಶೇಷ ನಿಗಾದಲ್ಲಿ ಇಡಲಾಗಿದೆ. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಮಗುವಿಗೆ ಹೆಪಟೈಟಿಸ್ ಬಿ ಲಸಿಕೆಯನ್ನು ಸಹ ನೀಡಲಾಗಿದೆ.
ಸದ್ಯ ತಾಯಿ ಹಾಗೂ ಮಗು ಇಬ್ಬರೂ ಸಂಪೂರ್ಣ ಆರೋಗ್ಯವಾಗಿದ್ದು, ಯಾವುದೇ ಅಪಾಯವಿಲ್ಲದೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ.
ಬೈಕ್‌ನಲ್ಲೇ ಹೆರಿಗೆಯಾದ ಈ ವಿಡಿಯೋ ಈಗ ಇನ್‌ಸ್ಟಾಗ್ರಾಮ್ ಸೇರಿದಂತೆ ನಾನಾ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡು ಸಖತ್ ಸದ್ದು ಮಾಡುತ್ತಿದೆ, (ಏಜನ್ಸೀಸ್).