Rajat Dalal 
ಕಿರುತೆರೆ

Rajat Dalal - ಅಡ್ಡ ಬಂದರೆ ಡಿಕ್ಕಿ!

Rajat Dalal -
ಪಾರ್ಕಿಂಗ್​ನಲ್ಲಿ ಕಾರಿಗೆ ಅಡ್ಡವಾಗಿ ಇನ್ನೊಂದು ಕಾರು ನಿಲ್ಲಿಸಿದ್ದರೆ ಏನು ಮಾಡುತ್ತಾರೆ? ಆ ಕಾರಿನ ಮಾಲೀಕನನ್ನು ಹುಡುಕುತ್ತಾರೆ ಅಥವಾ ಆತ ಬರುವವರೆಗೂ ಕಾಯುತ್ತಾರೆ. ಐದಾರು ಜನರ ಗುಂಪಿದ್ದರೆ, ಕಾರನ್ನೆತ್ತಿ ಪಕ್ಕಕ್ಕಿಟ್ಟು ಹೋಗಿರುವ ಘಟನೆಗಳೂ ನಡೆದಿವೆ. ಆದರೆ, ಬಿಗ್​ಬಾಸ್​ ಹಿಂದಿ ಖ್ಯಾತಿಯ ಕಿರುತೆರೆ ನಟ ರಜತ್​ ದಲಾಲ್​ ಹಾಗಲ್ಲ. ಅಡ್ಡ ನಿಲ್ಲಿಸಿರುವ ಕಾರಿಗೆ ತನ್ನ ಕಾರಿನಲ್ಲಿ ಗುದ್ದಿ, ಜಾಗ ಮಾಡಿಕೊಳ್ಳುತ್ತಾರೆ. ಹೌದು, ಇತ್ತೀಚೆಗಷ್ಟೆ ಅವರು ತಮ್ಮ ಥಾರ್​ ಜೀಪಿನಲ್ಲಿ ಅಡ್ಡ ನಿಲ್ಲಿಸಿದ್ದ ಕಾರನ್ನು ಗುದ್ದಿಕೊಂಡು ಹೋಗಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ. ಹಾಗೇ ಅದನ್ನು ಸಮರ್ಥಿಸಿಕೊಂಡಿರುವ ರಜತ್​, "ಇದು ಪ್ರಚಾರಕ್ಕಾಗಿ ಮಾಡಿದ ವಿಡಿಯೋ ಅಲ್ಲ. ಎಲ್ಲದಕ್ಕೂ ಒಂದು ಮಿತಿ ಇದೆ. ಪ್ರತಿದಿನ ಇದೇ ಡ್ರಾಮಾ. 45ರಿಂದ 50 ನಿಮಿಷ ಕಾದೆ. ಆದರೆ, ಯಾರೊಬ್ಬರೂ ಬಂದು ಕಾರನ್ನು ತೆಗೆಯಲಿಲ್ಲ. ನಾನೂ ಮನುಷ್ಯನೇ. ಪ್ರತಿದಿನ ಯಾರೋ ಒಬ್ಬರು ಕಾರನ್ನು ಅಡ್ಡಾದಿಡ್ಡಿ ನಿಲ್ಲಿಸುವ ಕಾರಣ ನಾನು ನನ್ನ ಕೆಲಸಗಳಿಗೆ ತಡವಾಗಿ ಹೋಗಲು ಆಗುವುದಿಲ್ಲ. ನನ್ನ ಸಹನೆಗೂ ಮಿತಿಯಿದೆ. ನಿಮ್ಮ ಕಾರುಗಳನ್ನು ಹೀಗೆ ಮತ್ತೊಂದು ಕಾರಿಗೆ ಅಡ್ಡ ನಿಲ್ಲಿಸಿದ್ದರೆ, ಕಡೆ ಪಕ್ಷ ನಿಮ್ಮ ೋನ್​ ನಂಬರ್​ ಬರೆದಿಡಿ' ಎಂದಿದ್ದಾರೆ.