ಹಾವನ್ನು ಬರಿಗೈಲಿ ಹಿಡಿದು ಯುವಕನ ಸಾಹಸ
- ಹಾವನ್ನು ಬರಿಗೈಲಿ ಹಿಡಿದು ಯುವಕನ ಸಾಹಸ
- ಗಾಳಿಯಲ್ಲಿ ಹಗ್ಗದಂತೆ ತಿರುಗಿಸಿದ ಭೂಪ
- ತಾಕತ್ ಇದ್ರೆ ಕಾಳಿಂಗ ಸರ್ಪದ ಜೊತೆ ಈ ಆಟ ಆಡು ಎಂದ ನೆಟ್ಟಿಗರು
ವೈರಲ್: ಹಾವು ಎಂಬ ಹೆಸರು ಕೇಳಿದ ತಕ್ಷಣ ಎಂಹತ ಧೈರ್ಯಶಾಲಿಯಾಗಿದ್ದರೂ ಅವನಲ್ಲಿ ಸ್ವಲ್ಪವಾದರೂ ಹೆದರಿಕೆ ಎನ್ನುವುದು ಹುಟ್ಟುತ್ತದೆ. ಆದರೆ ಇಲ್ಲೊಬ್ಬ ಈ ಹಾವನ್ನು (Snake Stunt) ಹಗ್ಗದ ರೀತಿ ಗಿರ-ಗಿರ ಎಂದು ತಿರುಗಿಸುತ್ತಿದ್ದು, ಒಂದೇ ಸಲ ಹಾವು ಅತನ ಮೇಲೆ ದಾಳಿ ನಡೆಸಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋನಲ್ಲಿ ಏನಿದೆ?
ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಯುವಕನೊಬ್ಬ ಕಪ್ಪು ಬಣ್ಣದ ಉದ್ದನೆಯ ಹಾವೊಂದನ್ನು ಹಗ್ಗದಂತೆ ಹೊಡಿದು ಗಾಳಿಯಲ್ಲಿ ತಿರುಗಿಸುತ್ತಿದ್ದು, ಆ ಹಾವು ಅವನ ಮೇಲೆ ದಾಳಿ ಮಾಡಲು ಯತ್ನಿಸುತ್ತಿದೆ. ಆದರೆ ಈ ಚಾಲಾಕಿ ಯುವಕ ಪ್ರತಿ ಬಾರಿ ಹಾವು ದಾಳಿ ಮಾಡಿದಾಗ ತಪ್ಪಿಸಿಕೊಂಡಿದ್ದಾನೆ.
ಕಾಳಿಂಗ ಸರ್ಪ ಎಂದು ತಿಳಿದಿದ್ದ ನೋಡುಗರು
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಕೆಲ ವೀಕ್ಷಕರು ಈ ಹಾವು ಕಾಳಿಂ ಸರ್ಪ, ಇದರ ಜೊತೆ ಚೆಲ್ಲಾಟ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಆದರೆ ಇದೊಂದು ಇಲಿ ಭಕ್ಷಕ ಹಾವಾ (Rat Snake) ಗಿದ್ದು, ಇದರಲ್ಲಿ ಯಾವುದೇ ರೀತಿಯ ವಿಷವಿರುವುದಿಲ್ಲ ಎಂದು ಇನ್ನೊಬ್ಬ ಬಳಕೆದಾರರು ತಿಳಿಸಿದ್ದಾರೆ. ಆದರೂ ಹಾವಿನೊಂದಿಗೆ ಈ ರೀತಿಯ ಸರಸ ಸರಿಯಲ್ಲ ಎನ್ನುವುದು ಅವರ ಅಭಿಪ್ರಾಯವಾಗಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದಿದ್ದು, ಕಮೆಂಟ್ಗಳ ಮಳೆಯೇ ಸುರಿದಿದೆ. ನಿನಗೆ ತಾಕತ್ ಇದ್ದರೆ ಈ ಆಟವನ್ನು ಬ್ಲಾಕ್ ಮಾಂಬಾ ಹಾವಿನೊಂದಿಗೆ ಆಡು ಎಂದು ಒಬ್ಬರು ಸವಾಲನ್ನು ಹಾಕಿದ್ದಾರೆ. ಪಾಪ ಆ ಹಾವಿಗೆ ಎಷ್ಟು ನೋವಾಯಿತೋ ಏನೋ ಎಂದು ಇನ್ನೊಬ್ಬರು ಸಹಾನುಭೂತಿ ತೋರಿಸಿದ್ದಾರೆ. ಇವನು ಇದೇ ಕೆಲಸವನ್ನು ಕಾಳಿಂಗ ಸರ್ಪದೊಟ್ಟಿಗೆ ಮಾಡಿದ್ದರೆ ಇಲ್ಲಿವರೆಗೆ ದೇವರ ಪಾದ ಸೇರುತ್ತಿದ್ದ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ, (ಏಜನ್ಸೀಸ್).