Krishna Janmashtami 2026 
ಟ್ರೆಂಡಿಂಗ್

ಸೆ.4ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ; ಇಲ್ಲಿದೆ ಶುಭ ಮುಹೂರ್ತ ಹಾಗೂ ಆಚರಣೆಯ ವಿಧಾನಗಳ ಮಾಹಿತಿ.. Krishna Janmashtami 2026

ಪ್ರಮುಖ ಮುಖ್ಯಾಂಶಗಳು

  • ಈ ಬಾರಿ ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 4 ಶುಕ್ರವಾರದಂದು ಆಚರಿಸಲಾಗುತ್ತದೆ.
  • ನಿಶಿತಾ ಕಾಲದ ಪೂಜೆಯು ಸೆಪ್ಟೆಂಬರ್ 4ರ ರಾತ್ರಿ 11:57ರಿಂದ ಸೆಪ್ಟೆಂಬರ್ 5ರ ರಾತ್ರಿ 12:43ರವರೆಗೆ ಇರಲಿದೆ.
  • ಜನ್ಮಾಷ್ಟಮಿಯಂದು ತಪ್ಪದೆ ಮಾಡಬೇಕಾದ ಪ್ರಮುಖ ಪೂಜಾ ವಿಧಿಗಳು ಇವು

Krishna Janmashtami 2026:

ದೇವಕಿಯ ನಂದನ ಶ್ರೀಕೃಷ್ಣನ ಜನ್ಮದಿನವಾದ 'ಕೃಷ್ಣ ಜನ್ಮಾಷ್ಟಮಿ' ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಸೆಪ್ಟೆಂಬರ್​4ರ ಶುಕ್ರವಾರದಂದು ಆಚರಿಸಲಾಗುತ್ತದೆ.

ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯು ಸೆಪ್ಟೆಂಬರ್ 4ರಂದು ಬೆಳಿಗ್ಗೆ 2:25ಕ್ಕೆ ಆರಂಭವಾಗಿ, ಸೆಪ್ಟೆಂಬರ್ 5ರಂದು ರಾತ್ರಿ 12:13ರವರೆಗೆ ಮುಂದುವರಿಯಲಿದೆ. ಇದರೊಂದಿಗೆ ಸೆಪ್ಟೆಂಬರ್ 4ರಂದು ರೋಹಿಣಿ ನಕ್ಷತ್ರವೂ ಇರಲಿದೆ.

ಈ ದಿನ ಭಕ್ತಾದಿಗಳು ಸಂಜೆಯ ತನಕ ಉಪಾವಸವನ್ನು ಕೈಗೊಂಡು ನಂತರ, ಶ್ರೀಕೃಷ್ಣನ ಜನನದ ಸಮಯವಾದ ಮಧ್ಯರಾತ್ರಿಯಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.

ಪೂಜೆ ಮತ್ತು ವಿಧಿಗಳು ಹೀಗಿರಲಿದೆ

ವೇದ ಕಾಲದ ಸಮಯ-ಲೆಕ್ಕಾಚಾರದ ಪ್ರಕಾರ ಮಧ್ಯರಾತ್ರಿಯಾದ 'ನಿಶಿತಾ ಕಾಲ'ದಲ್ಲಿ ಕೃಷ್ಣ ಪೂಜೆಯನ್ನು ಮಾಡಲಾಗುತ್ತದೆ. ದ್ರಿಕ್ ಪಂಚಾಂಗದ ಪ್ರಕಾರ, ಭಕ್ತರು ಮಧ್ಯರಾತ್ರಿಯಲ್ಲಿ ಪೂಜಾ ವಿಧಿಯ ಹದಿನಾರು ಹಂತವನ್ನು ಒಳಗೊಂಡ ವಿಸ್ತೃತ ಆಚರಣೆಯ ಪೂಜೆಯನ್ನು ನೆರವೇರಿಸುತ್ತಾರೆ.
ಕೃಷ್ಣನಿಗೆ ಅಭಿಷೇಕ ಮಾಡಿ, ಹೊಸ ವಸ್ತ್ರಗಳನ್ನು ಧರಿಸಿ, ಅವಲಕ್ಕಿ ಸೇರಿದಂತೆಇತರ ನೈವೇದ್ಯವನ್ನು ಭಗವಂತನಿಗೆ ಅರ್ಪಿಸಲಾಗುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಜನ್ಮಾಷ್ಟಮಿಯಂದು ಭಕ್ತಿಯಿಂದ ಶ್ರೀಕೃಷ್ಣನನ್ನು ಪೂಜಿಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುತ್ತದೆ ಎನ್ನುವ ನಂಬಿಕೆ ಅಂದಿನಿಂದಲೂ ಇದೆ.

ಪ್ರಮುಖ ಪೂಜಾ ವಿಧಾನ ಹೀಗಿರಲಿದೆ

ಅವಲಕ್ಕಿ ಹಾಗೂ ಕಲ್ಲು ಸಕ್ಕರೆ ಶ್ರೀಕೃಷ್ಣನಿಗೆ ಅತ್ಯಂತ ಪ್ರೀತಿಪಾತ್ರವಾದ ಅರ್ಪಣೆಗಳಾಗಿವೆ. ರಾತ್ರಿಯ ಪೂಜೆಯ ಸಮಯದಲ್ಲಿ ಲಡ್ಡು ಗೋಪಾಲನಿಗೆ ಇದನ್ನು ಅರ್ಪಿಸಲಾಗುತ್ತದೆ. ಇಸ್ಕಾನ್ ವೃಂದಾವನದ ಪ್ರಕಾರ, "ಜನ್ಮಾಷ್ಟಮಿಯು ಕೇವಲ ಆಚರಣೆಯಲ್ಲ, ಬದಲಿಗೆ ನಮ್ಮ ಸಮಯ, ಸಂಪನ್ಮೂಲ ಮತ್ತು ಹೃದಯವನ್ನು ಶ್ರೀಕೃಷ್ಣನ ಸೇವೆಯಲ್ಲಿ ಅರ್ಪಿಸುವ ಅವಕಾಶವಾಗಿದೆ."ಶ್ರೀಕೃಷ್ಣನ ಪೂಜೆಯಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ಜನ್ಮಾಷ್ಟಮಿಯಂದು ಕನ್ಹಾಗೆ ಭೋಗ್ ಅರ್ಪಿಸಿದ ನಂತರ, ಆ ನೈವೇದ್ಯದ ಮೇಲೆ ತುಳಸಿ ಎಲೆಯನ್ನು ಇಡಬೇಕು.

ಮಧ್ಯರಾತ್ರಿ ದೀಪ ಬೆಳಗುವುದು

ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದನೆಂದು ನಂಬಲಾಗಿದೆ. ಹೀಗಾಗಿ ರಾತ್ರಿಯ ಪೂಜೆಯು ಪ್ರಮುಖ ಸಂಪ್ರದಾಯವಾಗಿದೆ. ಪೂಜೆಯ ಸಮಯದಲ್ಲಿ ಮನೆಯ ದೇವಸ್ಥಾನದಲ್ಲಿ ದೀಪವನ್ನು ಹಚ್ಚಿ ನಂತರ ಆರತಿ ಮಾಡಿ. ಭಕ್ತರು "ಓಂ ನಮೋ ಭಗವತೇ ವಾಸುದೇವಾಯ" ಎನ್ನುವ ಮಂತ್ರವನ್ನು ಪಠಿಸಬಹುದು. ದೀರ್ಘಕಾಲ ಮಂತ್ರ ಪಠಿಸಲು ಸಾಧ್ಯವಾಗದಿದ್ದರೆ, ಭಕ್ತಿಯಿಂದ ಕೃಷ್ಣನ ಹೆಸರನ್ನು ಕೆಲವೊಮ್ಮೆ ಸ್ಮರಿಸುವುದೇ ಭಕ್ತಿಯ ಅಭಿವ್ಯಕ್ತಿಯಾಗಿದೆ.

ಪೂಜೆಯ ಸಮಯ ವಿವರ ಹೀಗಿದೆ

ದೆಹಲಿಯಲ್ಲಿ ಸೆಪ್ಟೆಂಬರ್ 4ರ ರಾತ್ರಿ 11:57ರಿಂದ ಸೆಪ್ಟೆಂಬರ್ 5ರ ರಾತ್ರಿ 12:43ರವರೆಗೆ ಪೂಜೆಗೆ ಮಂಗಳಕರ ಸಮಯವಿದೆ. ಆದಾಗ್ಯೂ, ನಿಶಿತಾ ಪೂಜೆಯ ಸಮಯವು ನಗರಗಳಿಗೆ ತಕ್ಕಂತೆ ಬದಲಾಗಬಹುದು. ಅಷ್ಟಮಿ ತಿಥಿಯು ಸೆಪ್ಟೆಂಬರ್ 4ರಂದು ಬೆಳಿಗ್ಗೆ 2:25ಕ್ಕೆ ಆರಂಭವಾಗಿ ಸೆಪ್ಟೆಂಬರ್ 5ರಂದು ರಾತ್ರಿ 12:13ಕ್ಕೆ ಕೊನೆಗೊಳ್ಳಲಿದೆ. ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 4ರ ರಾತ್ರಿ 11:04ರವರೆಗೆ ಮುಂದುವರಿಯುತ್ತದೆ, (ಏಜೆನ್ಸೀಸ್)