Trisha Krishnan visits Ajith Kumar House 
ಟ್ರೆಂಡಿಂಗ್

ನಟ ಅಜಿತ್ ತಾಯಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ ವಿಜಯ್​, ನಟಿ ತ್ರಿಶಾ; 'ಇಲ್ಲೂ ಬಿಡಲ್ವಲ್ಲ ಗುರೂ' ಎಂದ ನೆಟ್ಟಿಗರು..Ajith Kumar

ಪ್ರಮುಖ ಮುಖ್ಯಾಂಶಗಳು

  • ​ನಟ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಚೆನ್ನೈನಲ್ಲಿ ನಿಧನ
  • ​ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಅಜಿತ್ ನಿವಾಸಕ್ಕೆ ಭೇಟಿ
  • ಸೋಶಿಯಲ್​ ಮೀಡಿಯಾದಲ್ಲಿ ತ್ರಿಷಾ ಹಾಗೂ ವಿಜಯ್​​​ ಇರುವ ವಿಡಿಯೋಗಳು ವೈರಲ್
​ಚೆನ್ನೈ:  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಅಜಿತ್ ಅವರ ತಾಯಿ ಮೋಹಿನಿ ಮಣಿ ಅವರು (85) ಅವರು ಶನಿವಾರ ಮುಂಜಾನೆ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಯಿಯ ಅಗಲಿಕೆಯಿಂದ ತೀವ್ರ ದುಃಖದಲ್ಲಿರುವ ಅಜಿತ್ ಕುಮಾರ್ ಮತ್ತು ಅವರ ಕುಟುಂಬಕ್ಕೆ  ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣನ್​ ಒಟ್ಟಾಗಿ ಸಾಂತ್ವನ ಸೂಚಿಸಿದ್ದಾರೆ.
ಚೆನ್ನೈನ ಪಾಲವಾಕ್ಕಂನಲ್ಲಿರುವ ಅಜಿತ್​ ನಿವಾಸಕ್ಕೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್  ಭೇಟಿ ಕೊಟ್ಟು  ಮೋಹಿನಿ ಮಣಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇದೇ ಸಮಯದಲ್ಲಿ ನಟಿ ತ್ರಿಶಾ ಕೃಷ್ಣನ್​ ಅವರು ಸಹ ಹಾಜರಿದ್ದರು. 
ವಿಜಯ್​, ತ್ರಿಶಾ ಒಟ್ಟಾಗಿ ಕಾಣಿಸಿಕೊಂಡ ವಿಡಿಯೋ ವೈರಲ್
ಶನಿವಾರ ರಾತ್ರಿ ಅಜಿತ್​ ಅವರ ನಿವಾಸಕ್ಕೆ ಭೇಟಿ ಕೊಟ್ಟ ವಿಜಯ್​ ಅವರು ಬಿಳಿ ಶರ್ಟ್​ ಹಾಗೂ ಪ್ಯಾಂಟ್​ ಧರಿಸಿದ್ದರು. ನಟಿ ತ್ರಿಶಾ ಅವರು ಕಪ್ಪು ಸಲ್ವಾರ್​ ಧರಿಸಿದ್ದರು.  ಮುಖ್ಯಮಂತ್ರಿ ವಿಜಯ್, ಅವರನ್ನು ಅಪ್ಪಿಕೊಂಡು ಸುದೀರ್ಘವಾಗಿ ಸಾಂತ್ವನ ಹೇಳಿದರು. ನಟಿ ತ್ರಿಶಾ ಕೂಡ ಅಜಿತ್ ಅವರ ಕುಟುಂಬದವರನ್ನು ಭೇಟಿಯಾಗಿ ತಮ್ಮ ತೀವ್ರ ಸಂತಾಪವನ್ನು ಸೂಚಿಸಿದರು ಈ ವಿಡಿಯೋವನ್ನು ಸೆರೆಹಿಡಿದು, ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. 

ಅಜಿತ್​ ಕುಟಂಬಸ್ಥರ ಮನವಿ ಇದು

ತಾಯಿಯ ನಿಧನದ ಈ ದುಃಖದ ಸಮಯದಲ್ಲಿ ಖಾಸಗಿತನ ಕಾಯ್ದುಕೊಳ್ಳಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ನಮ್ಮ ತಾಯಿಯವರ ಅಂತಿಮ ಸಂಸ್ಕಾರವು ಕೇವಲ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆಯಲಿದೆ. ಪೋಷಕರನ್ನು ಅಥವಾ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಅನುಭವಿಸಿದ ಪ್ರತಿಯೊಬ್ಬರೂ ನಮ್ಮ ಈ ನಿರ್ಧಾರವನ್ನು ಗೌರವಿಸುತ್ತಾರೆ ಎಂದು ನಾವು ನಂಬುತ್ತೇವೆ ಎಂದು ನಟ ಅಜಿತ್​ ಸಹೋದರರು ಹೇಳಿದ್ದಾರೆ.
​ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್, ರಾಧಿಕಾ ಶರತ್‌ಕುಮಾರ್ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಅಜಿತ್ ಕುಮಾರ್ ಮತ್ತು ಅವರ ಕುಟುಂಬಕ್ಕೆ ಈ ದೊಡ್ಡ ನಷ್ಟವನ್ನು ಭರಿಸುವ ಶಕ್ತಿ ಸಿಗಲಿ ಎಂದು ಕಂಬನಿ ಮಿಡಿದಿದ್ದಾರೆ. ನಮ್ಮ ಸಹೋದರ ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಾಂತ್ವನಗಳು ಎಂದು ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ, (ಏಜೆನ್ಸೀಸ್).