ಟ್ರೆಂಡಿಂಗ್

ಮೀನಿನಂತೆ ಕಾಣುವ ಡಾಲ್ಫಿನ್​ ಮೀನಲ್ಲ; ಮನುಷ್ಯರೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗುವ ಇವು ಯಾವ ಪ್ರಭೇದಕ್ಕೆ ಸೇರಿದ್ದು?..Dolphin

  • ಡಾಲ್ಫಿನ್​ಗಳು ಮೀನಲ್ಲ ಯಾಕೆ ಗೊತ್ತಾ? ಇಲ್ಲಿವೆ ಅಚ್ಚರಿ ಸಂಗತಿಗಳು!

  • ಡಾಲ್ಫಿನ್​ಗಳು ಮೀನಿನಂತೆ ಕಂಡರೂ ಅವುಗಳು ಮೀನಿನ ಪ್ರಭೇದಕ್ಕೆ ಸೇರಲ್ಲ

  • ಡಾಲ್ಫಿನ್​ಗಳು ಹಾಲುಣಿಸುತ್ತವೆ, ಮೊಟ್ಟೆ ಇಡದೆ ಮರಿ ಹಾಕುತ್ತವೆ..ಇಲ್ಲಿವೆ ಇನ್ನಷ್ಟು ರೋಚಕ ವಿಚಾರಗಳ

dolphin looks like a fish is not a fish: ಮನುಷ್ಯರೊಂದಿಗೆ ಭಾವನಾತ್ಮಕವಾಗಿ ಡಾಲ್ಫಿನ್​ಗಳು ಕನೆಕ್ಟ್​ ಆಗುತ್ತವೆ. ಆನಿಮೇಷನ್​ ಸಿನಿಮಾದಲ್ಲಿ ನೋಡಿರುವಂತೆ ಡಾಲ್ಫಿನ್​ಗಳು ತಮಗಿಷ್ಟವಾದ ವ್ಯಕ್ತಿ ಹಾನಿಗೊಳಗಾದಾಗ ಕಾಪಾಡಿ, ಖಳ ನಾಯಕರೊಂದಿಗೆ​ ಫೈಟ್ ಮಾಡೋದನ್ನು ನೋಡಿ ಖುಷಿ ಪಟ್ಟಿದ್ದೇವೆ. ಡಾಲ್ಫಿನ್​ ಬಗ್ಗೆ ಕತೆಗಳನ್ನು ಕೇಳುವಾಗ ತಲ್ಲೀನರಾಗಿದ್ದೇವೆ, ಆದರೆ, ಇಷ್ಟೆಲ್ಲ ಬುದ್ಧಿ ಇರುವ ಮೀನಿನಂತೆ ಕಾಣುವ ಡಾಲ್ಫಿನ್ ಮೀನೇ ಅಲ್ಲ, ಅದು ಸಸ್ತನಿ ಎನ್ನುವುದು ನಿಮಗೆ ಗೊತ್ತಿದ್ಯಾ?.

ಡಾಲ್ಫಿನ್​ ಮೀನಲ್ಲ ಮತ್ತೇನು?

ಹೌದು, ಡಾಲ್ಫಿನ್​ ಮೀನಿನಂತೆ ಕಾಣುತ್ತದೆ ವಿನ್ಹ..ಇದು ಮೀನಿನ ಪ್ರಭೇದಕ್ಕೆ ಸೇರಿದ್ದಲ್ಲ. ಇದು ಮೀನುಗಳಂತೆ ಮೊಟ್ಟೆ ಇಟ್ಟು ಮರಿ ಮಾಡೋದಿಲ್ಲ. ಬದಲಾಗಿ ಮನುಷ್ಯರು ಮತ್ತು ಪ್ರಾಣಿಗಳಂತೆ ನೇರವಾಗಿ ಮರಿಗಳಿಗೆ ಜನ್ಮಕೊಡುತ್ತದೆ. ಶ್ವಾಸಕೋಶದಿಂದ ಉಸಿರಾಡುತ್ತದೆ. ಒಟ್ಟಾರೆಯಾಗಿ ಮರಿಗಳಿಗೆ ಹಾಲುಣಿಸುವ ಸಸ್ತನಿ ಎನ್ನುವ​ ವಿಚಾರವನ್ನು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಸಸ್ತನಿ ಎಂದರೆ ಏನು?

ಬೆನ್ನೆಲುಬು ಹೊಂದಿರುವ ಪ್ರಾಣಿಗಳು, ಮರಿಗಳಿಗೆ ಹಾಲುಣಿಸುವ ಪ್ರಾಣಿಗಳು ಮತ್ತು ದೇಹದ ಮೇಲೆ ಕೂದಲು ಹೊಂದಿರುವ ಪ್ರಾಣಿಗಳ ವರ್ಗವನ್ನು ಸಸ್ತನಿ ಎಂದು ಕರೆಯಲಾಗುತ್ತದೆ. ತಾಯಿ ಪ್ರಾಣಿಗಳು ಮರಿಗಳಿಗೆ ಹಾಲುಣಿಸಲು ಸ್ತನ ಗ್ರಂಥಿಗಳನ್ನು ಹೊಂದಿರುತ್ತದೆ. ಮರಿಗಳಿಗೆ ಜನ್ಮ ನೀಡುತ್ತದೆ. ವಾತಾವರಣಕ್ಕೆ ತಕ್ಕಂತೆ ತಮ್ಮ ದೇಹದ ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳುವ ವಿಶೇಷ ಗುಣವು ಸಸ್ತನಿಗಳಲ್ಲಿ ಇರುತ್ತದೆ.

ಡಾಲ್ಫಿನ್​ ಮೀನಲ್ಲ ಯಾಕೆ?

ಡಾಲ್ಫಿನ್​ಗಳು ಸಹ ಮೀನುಗಳಂತೆ ಕಾಣುತ್ತದೆ. ಅವುಗಳಂತೆ ನೀರಿನಲ್ಲಿ 24 ಗಂಟೆಯೂ ಕಾಲ ಕಳೆಯುತ್ತದೆ. ಈಜುತ್ತವೆ. ಆದರೆ, ಇವು ಮೀನಿನ ಪ್ರಭೇದಕ್ಕೆ ಮಾತ್ರ ಸೇರಿಲ್ಲ. ಇದು ಸಸ್ತನಿ. ಡಾಲ್ಫಿನ್​ಗಳು ಸಹ ಮನುಷ್ಯರಂತೆ ಮರಿಗಳಿಗೆ ಹಾಲನ್ನು ಉಣಿಸುತ್ತದೆ. ಮೀನುಗಳಂತೆ ಡಾಲ್ಫಿನ್​ಗಳು ಮೊಟ್ಟೆಯಿಟ್ಟು ಮರಿ ಮಾಡದೇ, ನೇರವಾಗಿ ಮರಿಗಳನ್ನಿಟ್ಟು ಪೋಷಣೆ ಮಾಡುತ್ತದೆ. ದೇಹದ ಗ್ರಂಥಿಗಳಿಂದ ಡಾಲ್ಫಿನ್​ ಹಾಲುಣಿಸುತ್ತದೆ. ಆದರೆ ಮೀನುಗಳು ಹಾಲನ್ನುಣಿಸುವುದಿಲ್ಲ.

ಶ್ವಾಸಕೋಶದ ಮೂಲಕ ಉಸಿರಾಟ

ಮೀನುಗಳು ನೀರಿನಲ್ಲಿರುವ ಆಮ್ಲಜನಕವನ್ನು ಉಸಿರಾಡಲು ಕಿವಿರುಗಳನ್ನು ಹೊಂದಿರುತ್ತವೆ. ಆದರೆ ಡಾಲ್ಫಿನ್‌ಗಳಿಗೆ ಕಿವಿರುಗಳಿಲ್ಲ, ಮನುಷ್ಯರಂತೆ ಶ್ವಾಸಕೋಶಗಳನ್ನು ಹೊಂದಿವೆ. ಹಾಗಾಗಿ ಅವು ಉಸಿರಾಡಲು ಆಗಾಗ್ಗೆ ನೀರಿನ ಮೇಲ್ಮೈಗೆ ಬಂದು ತಲೆಯ ಮೇಲಿನ ರಂಧ್ರದ ಮೂಲಕ ಗಾಳಿಯನ್ನು ಸೇವಿಸುತ್ತವೆ.

ಮೀನುಗಳು ಶೀತಲ ರಕ್ತವನ್ನು ಹೊಂದಿರುವ ಜಲಚರ ಜೀವಿಗಳು. ತಮ್ಮ ಸುತ್ತಲಿನ ವಾತಾವರಣಕ್ಕೆ ತಕ್ಕಂತೆ ದೇಹದ ಉಷ್ಣತೆಯನ್ನು ಬದಲಿಸಿಕೊಳ್ಳುತ್ತದೆ. ಆದರೆ. ಡಾಲ್ಫಿನ್​ಗಳು ಉಷ್ಣದ ರಕ್ತದ ಜೀವಿಗಳು..ದೇಹದ ತಾಪಮಾನ ಎಂದಿಗೂ ಒಂದೇ ರೀತಿಯಲ್ಲಿರುತ್ತದೆ. ಡಾಲ್ಫಿನ್​ಗಳು ಹುಟ್ಟಿದಾಗ ಮುಖದ ಮೂಗಿನ ಬಳಿ ಸಣ್ಣಗೆ ಕೂದಲಿರುತ್ತದೆ. ಆದರೆ, ಮೀನುಗಳಿಗೆ ಅಂತಹ ಮೀಸೆಗಳಿಲ್ಲ. ಮೀನುಗಳ ಬಾಲಗಳು ಎಡ ಮತ್ತು ಬಲಕ್ಕೆ ಚಲಿಸುತ್ತವೆ. ಆದರೆ, ಡಾಲ್ಫಿನ್​ ಭಾಗವು ಮೇಲೆ ಮತ್ತು ಕೆಳಕ್ಕೆ ಚಲಿಸುತ್ತವೆ.

ಇದನ್ನೂ ಓದಿ: ಬಣ್ಣ ಬಣ್ಣದ ಸೋಪಾದ್ರೂ ಬರುವ ನೊರೆ ಮಾತ್ರ ಬಿಳಿಯೇ! ಏಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ | Soap Foam

ಡಾಲ್ಫಿನ್​ಗಿದೆ ವಿಶೇಷ ಗುಣಗಳು

ಹೆಚ್ಚಾಗಿ ಸಮುದ್ರಗಳಲ್ಲಿ ಕಂಡು ಬರುವ ಡಾಲ್ಫಿನ್​ಗಳು..ಕೆಲವು ಡಾಲ್ಫಿನ್​ಗಳು ಸಿಹಿ ನೀರಿನಲ್ಲಿಯೂ ವಾಸಿಸುತ್ತದೆ. ಭಾರತದ ಗಂಗಾ ನದಿ ಮತ್ತು ಚಿಲ್ಕಾ ಸರೋವರದಲ್ಲಿ ಹಾಗ ಗೋವಾ ಲಕ್ಷ ದ್ವೀಪದಲ್ಲಿ ಡಾಲ್ಫಿನ್​ಗಳು ಇವೆ. ಇವು ಮನುಷ್ಯರಿಗೆ ಹೆಚ್ಚು ಕನೆಕ್ಟ್ ಆಗುತ್ತವೆ.

ಡಾಲ್ಫಿನ್​ಗಳು ಕನ್ನಡಿ ಮುಂದೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತದೆ. ಕ್ಲಿಕ್​ ಮತ್ತು ವಿಸ್ಲಿಂಗ್​ ಶಬ್ಧದ ಸಹಾಯದಿಂದಾಗಿ ತಮ್ಮದೇ ಭಾಷೆಯಲ್ಲಿ ಮನುಷ್ಯರೊಂದಿಗೆ ಕನೆಕ್ಟ್​ ಆಗುತ್ತದೆ. ಮನುಷ್ಯರು ತೀರಾ ಮಾನಸಿಕವಾಗಿ ಸಮಸ್ಯೆಗ ಒಳಗಾದಾಗ ಹಾಗೂ ಮಕ್ಕಳು ಒತ್ತಡಕ್ಕೆ ಒಳಗಾದಾಗ ಡಾಲ್ಫಿನ್​ ಅಸಿಸ್ಟೆಡ್​ ಥೆರಪಿ ಬಳಕೆ ಮಾಡಲಾಗುತ್ತದೆ. ಇದು ಬದಲಾವಣೆಗೆ ಕಾರಣವಾಗುತ್ತದೆ ಎನ್ನುವುದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ಶಾಕಿಂಗ್​ ವಿಚಾರ ಎಂದರೆ, ಡಾಲ್ಫಿನ್​ಗಳಿಗೆ ಗರ್ಭಿಣಿಯರ ಮೇಲೆ ಹೆಚ್ಚು ಕಾಳಜಿ ಹಾಗೂ ಮೃದು ಸ್ವಭಾವವಿದೆ ಎಂದು ವರದಿಯೊಂದು ಹೇಳುತ್ತದೆ. ತನಗಿರುವ ವಿಶೇಷ ಗುಣದಿಂದ ಹೊಟ್ಟೆಯಲ್ಲಿರುವ ಮಗುವಿನ ಶಬ್ಧವನ್ನು ಗುರುತಿಸಿ, ಗರ್ಭಿಣಿ ಜೊತೆಗೆ ಅಕ್ಕರೆಯೊಂದಿಗೆ ನಡೆದುಕೊಳ್ಳುತ್ತದೆ ಎನ್ನುವುದು ವಿಜ್ಞಾನಿಗಳು ಸಂಶೋಧನೆಯಿಂದ ತಿಳಿದುಬಂದಿರುವ ವಿಚಾರವಾಗಿದೆ,(ಏಜೆನ್ಸೀಸ್).