ಹಾವನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಹುಡುಗ
- ಹಾವನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಹುಡುಗ
- ಹಾವನ್ನು ರಕ್ಷಿಸಿ ತನ್ನ ಬ್ಯಾಗ್ಗೆ ಹಾಕಿಕೊಂಡ ಯುವಕ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ವೈರಲ್: ಭಾರತದಲ್ಲಿ ಇಂಟರ್ನೆಟ್ ಕ್ರಾಂತಿ ಆದ ನಂತರ ಪ್ರತಿದಿನ ಒಂದಿಲ್ಲೊಂದು ವಿಡಿಯೋಗಳು ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಬ್ಲಿಂಕಿಟ್ನಲ್ಲಿ ಕೆಲಸ ಮಾಡುವ ಡೆಲಿವರಿ ಹುಡುಗ (Blinkit Delivery Boy) ನೊಬ್ಬ ರಸ್ತೆಯಲ್ಲಿದ್ದ ಹಾವೊಂದನ್ನು ರಕ್ಷಣೆ ಮಾಡಿ ತನ್ನ ಬ್ಯಾಗಿನಲ್ಲಿ ಹಾಕಿಕೊಳ್ಳುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಮುಂಬೈನಲ್ಲಿ ಸೆರೆಹಿಡಿದ್ದೆಂದು ತಿಳಿದು ಬಂದಿದೆ. ವಿಡಿಯೋನಲ್ಲಿ ಬ್ಲಿಂಕಿಟ್ನ ಹಳದಿ ಬಣ್ಣದ ಸಮವಸ್ತ್ರ ಧರಿಸಿರುವ ಯುವಕನೊಬ್ಬ, ರಸ್ತೆಯಲ್ಲಿ ಹರಿಯುತ್ತಿದ್ದ ಉದ್ದನೆಯ ಹಾವೊಂದನ್ನು ಹಿಡಿದು, ತನ್ನ ಡೆಲಿವರಿ ಬ್ಯಾಗ್ನಲ್ಲಿ ಹಾಕಿಕೊಳ್ಳುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದಾಗಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಸೋಷಿಯಲ್ ಮೀಡಿಯಾನಲ್ಲಿ ಪೋಸ್ಟ್ ಆದ ಒಂದೇ ದಿನದಲ್ಲಿ ಈ ವಿಡಿಯೋ ಸುಮಾರು 1.64 ಲಕ್ಷ ವೀಕ್ಷಣೆಯನ್ನು ಕಂಡಿದೆ. ವಿಡಿಯೋನ ನೋಡಿದ ನೆಟ್ಟಿಗರು ವಿನೋದ ಭರಿತ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.ಬ್ಲಿಂಕಿಟ್ನಲ್ಲಿ ಹಾವನ್ನು ಕೂಡ ಡೆಲಿವರಿ ಮಾಡ್ತಾರಾ? ನನಗೆ ಇವತ್ತೆ ತಿಳಿಯಿತು ಎಂದು ಒಬ್ಬ ಬಳಕೆದಾರ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ.
ಇವನು ಹಾವನ್ನೆನೋ ರಕ್ಷಣೆ ಮಾಡಿದ ಈಗ ಬ್ಯಾಗ್ನಿಂದ ಹಾವು ಆಚೆ ಬಂದರೆ ಇವನ ರಕ್ಷಣೆಯನ್ನು ಆ ಭಗವಂತನೇ ಮಾಡಬೇಕು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಪಾಪ ಆ ಹಾವು ತನ್ನಷ್ಟಕ್ಕೆ ತಾನು ಹರಿದು ಹೋಗುತ್ತಿತ್ತು, ಇವನು ಅದನ್ನು ಹಿಡಿಯಲು ಏಕೆ ಹೋದ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ, (ಏಜನ್ಸೀಸ್).