Janhvi Kapoor on Tollywood Work Culture
- ತೆಲುಗು ಸಿನಿಮಾರಂಗದಲ್ಲಿ ಕೆಲಸದ ಅವಧಿ ಗೌರವಿಸಲಾಗುತ್ತದೆ ಎಂದ ಜಾನ್ವಿ ಕಪೂರ್.
- ಎಂಟು ಗಂಟೆ ಕೆಲಸದ ಅವಧಿ ಉಲ್ಲೇಖಿಸಿ ಎರಡು ಸಿನಿಮಾದಿಂದ ಹೊರ ನಡೆದ ದೀಪಿಕಾ.
- ಸ್ಟಾರ್ ನಟಿ ದೀಪಿಕಾ ಪಡುಕೋಣೆಗೆ ಟಾಂಗ್ ಕೊಟ್ಟ ಜಾನ್ವಿ ಕಪೂರ್.
Janhvi Kapoor on Tollywood Work Culture: 8 ಗಂಟೆಗಳ ಕಾಲ ಕೆಲಸದ ಅವಧಿ ವಿಚಾರ ಪ್ರಸ್ತಾಪಿಸಿ ನಟಿ ದೀಪಿಕಾ ಪಡುಕೋಣೆಯವರು ಸ್ಪಿರಿಟ್ ಮತ್ತು ಕಲ್ಕಿ ಭಾಗ 2ರಿಂದ ಹೊರ ನಡೆದಿದ್ದರು. ಈ ಬಗ್ಗೆ ಇನ್ನು ಬಿಸಿ ಚರ್ಚೆಗಳು ಪ್ರಚಲಿತದಲ್ಲಿದ್ದಾಗಲೇ 'ಪೆದ್ದಿ' ಸಿನಿಮಾದ ನಟಿ ಜಾನ್ವಿ ಕಪೂರ್ ಅವರು ತೆಲುಗು ಸಿನಿಮಾರಂಗವನ್ನು ಹಾಡಿ ಹೊಗಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಟಾಲಿವುಡ್ನ ಕೊಂಡಾಡಿದ ಜಾನ್ವಿ
ಜಾನ್ವಿ ಕಪೂರ್ ಅವರು ಇತ್ತೀಚೆಗೆ ಖಾಸಗಿ ಮಾಧ್ಯಮಕ್ಕೆ ಕೊಟ್ಟ ಸಂದರ್ಶನದಲ್ಲಿ ಟಾಲಿವುಡ್ನಲ್ಲಿ ಅನುಸರಿಸಲಾಗುವ ಕೆಲಸದ ಅವಧಿ ಬಗ್ಗೆ ಮಾತನಾಡಿದ ಅವರು, 'ಪೆದ್ದಿ ಸಿನಿಮಾ ಶೂಟಿಂಗ್ ವೇಳೆ ನಾನು ಲೇಟ್ ನೈಟ್ ಶೂಟಿಂಗ್ನಲ್ಲಿ ಹೆಚ್ಚು ಭಾಗಿಯಾಗಲೇ ಇಲ್ಲ. ಇಲ್ಲಿ ಕೆಲಸದ ಅವಧಿಯನ್ನು ಗೌರವಿಸಲಾಗುತ್ತದೆ. ಊಟ, ವಿಶ್ರಾಂತಿ ನಿದ್ದೆ ಎಲ್ಲದಕ್ಕೂ ಸುಮಾರು 40 ನಿಮಿಷ ಊಟಕ್ಕೆಂದು ವಿರಾಮ ನೀಡಲಾಗುತ್ತದೆ. ಆ ನಂತರ ಮತ್ತೆ ಚಿತ್ರೀಕರಣ ಆರಂಭವಾಗುತ್ತದೆ. ಶಾಟ್ ಶುರುವಾಗುವ ಮುನ್ನ ಸಾಕಷ್ಟು ವಿಶ್ರಾಂತಿ ಪಡೆಯಲು ಹಾಗೂ ನಿದ್ರೆಗೆ ಕಾಲಾವಕಾಶ ನೀಡಲಾಗುತ್ತದೆ' ಎಂದು ಹೇಳಿದರು.
'ರಾತ್ರಿ ಚಿತ್ರೀಕರಣ ಆರಂಭವಾದರೆ ನಸುಕಿನ ಮುಂಜಾನೆ 2 ಗಂಟೆಗೆ ಪೂರ್ಣಗೊಳ್ಳುತ್ತದೆ. ನಂತರ ಮಲಗಲು ಅವಕಾಶ ನೀಡಲಾಗುತ್ತದೆ. ಆದರೆ, ಬಾಲಿವುಡ್ನಲ್ಲಿ ಹಾಗೋಗೋದಿಲ್ಲ. ಅಲ್ಲಿ ಸಿನಿಮಾ ತಂಡದ ಮೇಲೆ ಕೆಲಸದ ಅವಧಿ ನಿರ್ಧಾರಗೊಳ್ಳುತ್ತದೆ. ಮೊದಲು ಎಲ್ಲವು ಮುಂಚೆಯೇ ತೀರ್ಮಾನಿಸಲಾಗಿರುತ್ತದೆ. ಆದರೆ, ಸಿನಿಮಾ ಶೂಟಿಂಗ್ ನಂತರ ಎಲ್ಲವೂ ಬದಲಾಗುತ್ತದೆ. ಎಲ್ಲದಕ್ಕೂ ನಾವೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ' ಎಂದರು.
ಮುಂದುವರೆದು, 'ಪೆದ್ದಿ ಸಿನಿಮಾ ಡೇ ಶೂಟಿಂಗ್ 9ರಿಂದ ಮಧ್ಯಾಹ್ನ 12ರ ತನಕ ಚಿತ್ರೀಕರಣ ನಡೆದಿತ್ತು. ಇಲ್ಲಿ ನಟಿ, ನಟ ಸೇರಿದಂತೆ ತಂತ್ರಜ್ಞರು ಎಲ್ಲರಿಗೂ ಒಂದೇ ಸಮಯ. ಪ್ಯಾಕಪ್ ಮಾಡುವಾಗ ಎಲ್ಲರಿಗೂ ಒಂದೇ ನಿಯಮ ಪಾಲನೆ ಮಾಡಲಾಗುತ್ತದೆ. ನಾನು 12 ಗಂಟೆಯವರೆಗೂ ನಡೆದ ಶೂಟಿಂಗ್ನಲ್ಲಿ ಎರಡರಿಂದ ಮೂರು ಬಾರಿ ಮಾತ್ರ ಭಾಗಿಯಾಗಿರಬಹುದು ಅಷ್ಟೇ' ಎಂದು ಜಾನ್ವಿ ಮಾತನಾಡಿದರು.
ದೀಪಿಕಾ ಪಡುಕೋಣೆ ವಾದವೇನು?
ದೀಪಿಕಾ ಪಡುಕೋಣೆಯವರು ಸಿನಿಮಾ ರಂಗದಲ್ಲಿ 8 ಗಂಟೆ ಕೆಲಸದ ಶಿಫ್ಟ್ ಬಗ್ಗೆ ಧ್ವನಿ ಎತ್ತಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕೆಲಸದ ಸಮತೋಲನ, ಮಗುವಿನ ಪೋಷಣೆ ಬಗ್ಗೆ ಅವರು ಮಾತನಾಡಿದ್ದರು. ಕಂಗನಾ ರಣಾವತ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದರು. ಎಂಟು ಗಂಟೆ ಕೆಲಸದ ಅವಧಿಯನ್ನು ಉಲ್ಲೇಖಿಸಿ ನಟಿ ದೀಪಿಕಾ ಪಡುಕೋಣೆಯವರು ಎರಡು ಪ್ರಭಾವಿ ನಟರ ಸಿನಿಮಾವಾದ ಸ್ಪಿರಿಟ್ ಮತ್ತು ಕಲ್ಕಿ 2898 AD ಸೀಕ್ವೆಲ್‌ನಿಂದ ಹೊರ ನಡೆದಿದ್ದರು. ಈಗ ಜಾನ್ವಿ ಕಪೂರ್ ಅವರು ಇದೇ ವಿಚಾರವಾಗಿ ಟಾಲಿವುಡ್ನನ್ನು ಕೊಂಡಾಡಿದ್ದು ಪರೋಕ್ಷವಾಗಿ ದೀಪಿಕಾರಿಗೆ ಟಾಂಗ್ ಕೊಟ್ಟರಾ ಎನ್ನುವ ಚರ್ಚೆಗಳು ಶುರುವಾಗಿದೆ.