ನದಿದಡದಲ್ಲಿ ಪಿಂಡದಾನ ಮಾಡಿದ ಪತಿರಾಯ
- ಹೆಂಡತಿಯ ರೀಲ್ಸ್ ಹುಚ್ಚಿಗೆ ಬೇಸತ್ತ ಪತಿ
- ನದಿದಡದಲ್ಲಿ ಪಿಂಡದಾನ ಮಾಡಿದ ಪತಿರಾಯ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ವೈರಲ್: ಯಾವಾಗ ಪ್ರತಿಯೊಬ್ಬರ ಕೈಗೆ ಮೊಬೈಲ್ ತಲುಪಿತೋ ಅಂದಿನಿಂದ ಈ ವೈರಲ್ ಆಗಬೇಕೆಂಬ ಭೂತ ಜನರ ತಲೆ ಏರಿದೆ. ಆದ್ದರಿಂದ ನಮ್ಮ ದೇಶದಲ್ಲಿ ಯಾವುದಾದರೊಂದು ವಿಡಿಯೋ ವೈರಲ್ (Viral Video) ಆಗುತ್ತಲೇ ಇರುತ್ತದೆ.
ಕೆಲ ದಿನಗಳ ಹಿಂದೆ ಬದುಕಿರುವ ಪತ್ನಿಯ ಪಿಂಡದಾನ ಮಾಡಿರುವ ಗಂಡನ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಗಂಡನೊಬ್ಬ ತನ್ನ ಪತ್ನಿಯ ಫೋಟೊವನ್ನು ಹಿಡಿದುಕೊಂಡು ನದಿ ತಟದಲ್ಲಿ ಪಿಂಡದಾನ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಮಾಹಿತಿ ಪ್ರಕಾರ ಇತನ ಹೆಂಡತಿ ಯಾವಾಗಲೂ ರೀಲ್ಸ್ ಮಾಡುತ್ತಿದ್ದು, ಇದರಿಂದ ರೋಸಿ ಹೋಗಿರುವ ಪತಿರಾಯ ಪಿಂಡದಾನ ಮಾಡಿದ್ದಾನೆ. ಅದರೆ ಇತನ ಹೆಂಡತಿ ಜೀವಂತಯವಾಗಿದ್ದಾಳೆ ಎಂದು ತಿಳಿದು ಬಂದಿದೆ.
ನೆಟ್ಟಿಗರಿಂದ ಪರ-ವಿರೋಧದ ಚರ್ಚೆ!
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದಂತೆ ನೆಟ್ಟಿಗರು ಕಮೆಂಟ್ ಮಾಡಲು ಶುರುವಿಟ್ಟಿದ್ದಾರೆ. ಈ ದಂಪತಿಗಳ ಜಗಳಕ್ಕಾಗಿ ನಮ್ಮ ಸನಾತನ ಹಿಂದೂ ಪದ್ಧತಿಯನ್ನು ಏಕೆ ಬಳಕೆ ಮಾಡಿಕೊಳ್ಳುತ್ತಿದ್ದಿರಿ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇವೆಲ್ಲಾ ಕೇವಲ ಲೈಕ್ಸ್ಗಾಗಿ ಮಾಡಿರುವ ಗಿಮಿಕ್ ಅಷ್ಟೇ ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದು ಇಬ್ಬೊಬ್ಬರು ಹೇಳಿದ್ದಾರೆ.
ನಿಮ್ಮ ದಾಂಪತ್ಯದಲ್ಲಿ ಸಮಸ್ಯೆಯಿದ್ದರೆ ನ್ಯಾಯಾಲಯಕ್ಕೆ ಹೋಗಿ ಅದರ ಬದಲು ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚಾಟ ಮಾಡಬೇಡಿ ಎಂದು ಮತ್ತೊಬ್ಬರು ತಿಳಿ ಹೇಳಿದ್ದಾರೆ, (ಏಜನ್ಸೀಸ್).