Naga Chaitanya sobhita dhulipala birthday post
- ಪತ್ನಿ ಶೋಭಿತಾ ಧೂಳಿಪಾಲ 34ನೇ ಬರ್ತ್‌ಡೇಗೆ ವಿಶೇಷವಾಗಿ ವಿಶ್ ಮಾಡಿದ ನಾಗ ಚೈತನ್ಯ.
- ಇನ್‌ಸ್ಟಾಗ್ರಾಮ್‌ನಲ್ಲಿ ಶೋಭಿತಾ ಜೊತೆಗಿನ ರಜಾದಿನಗಳ ಅಪರೂಪದ ಫೋಟೋ ಪೋಸ್ಟ್
- 2024ರ ಡಿಸೆಂಬರ್‌ನಲ್ಲಿ ಶೋಭಿತಾ ಅವರನ್ನು ಮದುವೆಯಾಗಿದ್ದ ನಾಗ ಚೈತನ್ಯ.
Naga Chaitanya Sobhita Dhulipala Birthday Post: ಶೋಭಿತಾ ಧೂಳಿಪಾಲ ಅವರ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ಪತಿ ನಾಗ ಚೈತನ್ಯ ಅವರು ತಮ್ಮ ಪ್ರೀತಿಯ ಪತ್ನಿಗಾಗಿ ಅತ್ಯಂತ ರೋಮ್ಯಾಂಟಿಕ್ ಹಾಗೂ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ತಮ್ಮ ವೈವಾಹಿಕ ಜೀವನದ ಮಧುರ ಕ್ಷಣಗಳ ಅಪರೂಪದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗ್ರೇಟ್ಫುಲ್ ಲೈಫ್ ಎಂದ ಅಕ್ಕಿನೇನಿ
Happy birthday my lady @sobhitad. Grateful I get to do life with you (ಹುಟ್ಟುಹಬ್ಬದ ಶುಭಾಷಯ ಮೈ ಲೇಡಿ ಶೋಭಿತಾ ಧೂಳಿಪಾಲ, ನಿಮ್ಮೊಂದಿಗೆ ಜೀವನವನ್ನು ಕಳೆಯಲು ಸಿಕ್ಕಿರುವ ಅವಕಾಶಕ್ಕೆ ನಾನು ನಿಜಕ್ಕೂ ಧನ್ಯನಾಗಿದ್ದೇನೆ) ಎಂದು ಬರೆದುಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಕಿಡ್ನ್ಯಾಪ್ ಮೊಮೆಂಟ್ಸ್ ಹಾಡನ್ನು ಜೋಡಿಸಿ ಈ ಪೋಸ್ಟ್ ಮಾಡಲಾಗಿದೆ.
ಅಭಿಮಾನಿಗಳ ಗಮನಸೆಳೆದ ಕ್ಯೂಟ್ ಫೋಟೋಗಳು!
ಚೈತನ್ಯ ಹಂಚಿಕೊಂಡಿರುವ ಚಿತ್ರಗಳಲ್ಲಿ ಒಂದೆಡೆ ಈ ಜೋಡಿ ರಜಾದಿನಗಳನ್ನು ಆನಂದಿಸುತ್ತಿರುವುದು ಕಂಡುಬಂದರೆ, ಇನ್ನೊಂದೆಡೆ ಚೈತನ್ಯ ಅವರೇ ಕ್ಲಿಕ್ಕಿಸಿದ ಶೋಭಿತಾ ಅವರ ಸುಂದರ ಸೋಲೋ ಫೋಟೋಗಳಿವೆ. ಇದರಲ್ಲಿ ನೆಟ್ಟಿಗರ ಗಮನ ಸೆಳೆದದ್ದು ಕೊನೆಯಲ್ಲಿರುವ ಒಂದು ತಮಾಷೆಯ ಫೋಟೋ! ಅದರಲ್ಲಿ ಶೋಭಿತಾ ಅವರು ದೂರ ನಿಂತು, ಕ್ಯಾಮೆರಾ ಆಂಗಲ್ ಬಳಸಿ ನಾಗ ಚೈತನ್ಯ ಅವರ ಕುತ್ತಿಗೆಯನ್ನು ಹಿಡಿದುಕೊಳ್ಳುವಂತೆ ಪೋಸ್ ನೀಡಿದ್ದಾರೆ.
ಈ ಫೋಟೋ ನೋಡಿ ಅಭಿಮಾನಿಗಳು ಸಖತ್ ಎಂಜಾಯ್ ಮಾಡುತ್ತಿದ್ದು, ಕಮೆಂಟ್ ಬಾಕ್ಸ್‌ನಲ್ಲಿ "ಸರ್, ಈ ಕೊನೆಯ ಫೋಟೋವನ್ನೇ ಮೊದಲು ಹಾಕಬೇಕಿತ್ತು!" ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಕೆಲವು ಅಭಿಮಾನಿಗಳು "ಅಕ್ಕಿನೇನಿ ಲಕ್ಷ್ಮಿ ಶೋಭಿತಾ ಮೇಡಂಗೆ ಹುಟ್ಟುಹಬ್ಬದ ಶುಭಾಶಯಗಳು, ಈ ಜೋಡಿಗೆ ದೇವರು ಸದಾ ಸುಖ-ಸಂತೋಷ ನೀಡಲಿ" ಎಂದು ಹಾರೈಸುತ್ತಿದ್ದಾರೆ.
ಸಮಂತಾ, ನಾಗಚೈತನ್ಯ ಡಿವೋರ್ಸ್
ಸಮಂತಾ ರುತ್ಪ್ರಭು ಅವರಿಂದ 2021ರಲ್ಲಿ ಡಿವೋರ್ಸ್ ಪಡೆದುಕೊಂಡ ನಾಗಚೈತನ್ಯ ಅವರು2024 ರ ಡಿಸೆಂಬರ್ 4 ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋಸ್‌ದಲ್ಲಿ ಶೋಭಿತಾ ಧೂಳಿಪಾಲರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2025ರಲ್ಲಿ ಸಮಂತಾ ರುತ್ ಪ್ರಭು ಅವರು ಫ್ಯಾಮಿಲಿ ಮ್ಯಾನ್ ಖ್ಯಾತಿಯ ನಿರ್ದೇಶಕ ರಾಜ್ ನಿಡಿಮೂರು ಜೊತೆಗೆ ವೈವಾಹಿಕ ಜೀವನ ಆರಂಭಿಸಿದ್ದಾರೆ.
ದೆಹಲಿ ಕೋರ್ಟ್ ಮೆಟ್ಟಿಲೇರಿದ್ದ ಚೈತನ್ಯ
ಡಿವೋರ್ಸ್ ಕೊಟ್ಟ ನಂತರ ಸಮಂತಾ ಔದ್ಯೋಗಿಕ ಜೀವನ ಹಾಳಾಗಿದೆ. ಅವರಿಗೆ ಮೋಸ ಮಾಡಿದ್ದಾರೆ ಎಂದು ಎಐ ವಿಡಿಯೋ ಕ್ರಿಯೇಟ್ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಜ್ಯೋತಿ ಸಿಂಗ್ ಅವರಿದ್ದ ಪೀಠವು ಮಧ್ಯಂತರ ರಕ್ಷಣೆ ನೀಡಿ ಸಮನ್ಸ್ ಜಾರಿ ಮಾಡಿದೆ. 'ವೈಯಕ್ತಿಕ ಹಕ್ಕುಗಳನ್ನು' ಮಧ್ಯಂತರ ಆದೇಶವನ್ನು ಹೊರಡಿಸುವುದಾಗಿ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30 ಕ್ಕೆ ನಿಗದಿಪಡಿಸಲಾಗಿದೆ.