ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಕೆವಿಐಸಿ ಮಹತ್ತರ ಪಾತ್ರ ವಹಿಸಿದೆ. ಕಳೆದ 12 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಶೇ. 56 ರಷ್ಟು ಪ್ರಗತಿಯಾಗಿದ್ದು, ಪ್ರಸ್ತುತ ಈ ವಲಯವು ದೇಶದ 2.04 ಕೋಟಿ ಜನರಿಗೆ ಜೀವನೋಪಾಯ ಕಲ್ಪಿಸಿದೆ. ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮದ (PMEGP) ಅಡಿಯಲ್ಲಿ 2025-26ರ ಸಾಲೊಂದರಲ್ಲೇ 66,494 ಹೊಸ ಘಟಕಗಳನ್ನು ಸ್ಥಾಪಿಸಲಾಗಿದ್ದು, 7.31 ಲಕ್ಷಕ್ಕೂ ಹೆಚ್ಚು ಜನರಿಗೆ ಹೊಸದಾಗಿ ಕೆಲಸ ಸಿಕ್ಕಿದೆ.
ಖಾದಿ ಕ್ಷೇತ್ರವು ಇಂದು ಮಹಿಳಾ ಆರ್ಥಿಕ ಸಬಲೀಕರಣದ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ಈ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಮಹಿಳೆಯರಾಗಿದ್ದಾರೆ. ತರಬೇತಿ ಕಾರ್ಯಕ್ರಮಗಳಲ್ಲೂ ಶೇ. 59 ರಷ್ಟು ಮಹಿಳೆಯರೇ ಭಾಗವಹಿಸುತ್ತಿದ್ದಾರೆ. ಇದರೊಂದಿಗೆ, ಕುಶಲಕರ್ಮಿಗಳಿಗೆ ನೀಡಲಾಗುವ ನೂಲಿನ ಸಂಭಾವನೆಯನ್ನು ಪ್ರತಿ ಹ್ಯಾಂಕ್‌ಗೆ 4 ರೂಪಾಯಿಗಳಿಂದ 15 ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದು, ಅವರ ಆದಾಯದಲ್ಲಿ ಶೇ. 275 ರಷ್ಟು ಬಂಪರ್ ಏರಿಕೆಯಾಗಿದೆ.
ದೇಶದಲ್ಲಿ 'ಹರ್ ಘರ್ ತಿರಂಗ' ಅಭಿಯಾನದ ಪ್ರಭಾವದಿಂದಾಗಿ ರಾಷ್ಟ್ರೀಯ ಧ್ವಜಗಳ ಮಾರಾಟವು 2.35 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಖಾದಿ ಕೇವಲ ಸಾಂಪ್ರದಾಯಿಕ ಉಡುಪಾಗಿ ಉಳಿಯದೆ, ನವ ಭಾರತದ ಸ್ವಾವಲಂಬನೆ ಮತ್ತು ಗ್ರಾಮೀಣ ಸಮೃದ್ಧಿಯ ರೋಮಾಂಚಕ ಸಂಕೇತವಾಗಿ ಹೊರಹೊಮ್ಮಿದೆ ಎಂದು ಕೆವಿಐಸಿ ಅಧ್ಯಕ್ಷರು ತಿಳಿಸಿದರು.