ಹುಡುಗನನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದ ಹುಡುಗಿ 
ಟ್ರೆಂಡಿಂಗ್

ಇವಳನ್ನ ಬಿಟ್ಟಿದ್ದೇ ಒಳ್ಳೇದಾಯ್ತು..!ಪ್ರೇಯಸಿಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಪ್ರಿಯಕರ; ವಿಡಿಯೋ ವೈರಲ್​ Viral Video

ಪ್ರಮುಖ ಮುಖ್ಯಾಂಶಗಳು

  • ಪ್ರೇಯಸಿಗೆ ಕೈಕೊಟ್ಟ ಪ್ರಿಯಕರ
  • ಹುಡುಗನನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದ ಹುಡುಗಿ
  • ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​
ವೈರಲ್​: ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಣ್ಣ-ಸಣ್ಣ ವಿಷಯಗಳು ಸಹ ಸೋಶಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತವೆ. ಈಗ ಇಂಟರ್ನೆಟ್​ನಲ್ಲಿ ವೈರಲ್ (Viral Video)​ ಆಗುತ್ತಿರುವ ಈ ವೀಡಿಯೋನಲ್ಲಿ ಪ್ರಿಯಕರನೊಬ್ಬನನ್ನು ಆತನ ಪ್ರೇಯಸಿ ರಸ್ತೆ ಮಧ್ಯದಲ್ಲಿ ಥಳಿಸಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.

ಆಗಿದ್ದೇನು?

ಈ ವಿಡಿಯೋದಲ್ಲಿರುವ ಹುಡುಗಿ ಮತ್ತು ಹುಡುಗ ಬಹಳ ವರ್ಷಗಳಿಂದ ಒಬ್ಬರನೊಬ್ಬರು ಮೆಚ್ಚಿಕೊಂಡು ಪ್ರೀತಿಯಿಂದ ಇದ್ದರು. ಅ ಹುಡುಗನ ಮೇಲೆ ಈ ಹುಡುಗಿ ಅಪಾರವಾದ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿದ್ದಳು. ಆದರೆ ಈ ಹುಡುಗ, ಹುಡುಗಿಗೆ ನಂಬಿಕೆ ದ್ರೋಹ ಮಾಡಿದ್ದಾನೆಂದು ಆಕೆಗೆ ಗೊತ್ತಾಗಿದೆ. ಈ ಸಂಹತಿ ತಿಳಿಯುತ್ತಿಂದೆ ನಡುರಸ್ತೆಯಲ್ಲೇ ಯುವತಿ ಆ ಯುವಕನನ್ನು ಮನಬಂದಂತೆ ಥಳಿಸಿದ್ದಾಳೆ.

ರಸ್ತೆಯಲ್ಲಿ ನಡೆದ ಹೈಡ್ರಾಮಾ!

ವಿಡಿಯೋನಲ್ಲಿ, ಆ ಯುವತಿಯು ಹುಡುಗನ ಮೈಮೇಲೆ ಕುಳಿತುಕೊಂಡು ಮನಸೋ ಇಚ್ಛೇ ಹೊಡೆದಿದ್ದಾಳೆ. ಆಕೆಯ ಏಟಿನಿಂದ ಪಾರಾಗಲು ಆತ ಆಕೆಯನ್ನು ತಳ್ಳಿದ್ದಾನೆ. ಆದರೂ ಮತ್ತೆ ಅವನ ಮೇಲೆ ಎರಗಿದ ಯುವತಿ ತನಗಾದ ನೋವನ್ನು ಹಲ್ಲೆ ಮೂಲಕ ತೀರಿಸಿಕೊಂಡಿದ್ದಾಳೆ.
ಇವರಿಬ್ಬರ ಈ ಹೊಡೆದಾಟವು ನಡುರಸ್ತೆಯಲ್ಲಿ ಜರುಗಿದ್ದು, ಪಾದಾಚಾರಿಗಳು ಇವರ ವಿಡಿಯೋವನ್ನು ಸೆರಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪಬ್ಲಿಕ್​ ಹೈಡ್ರಾಮಾ ನೋಡಿದ ಜನ ನಕ್ಕು-ನಕ್ಕು ಸುಸ್ತಾಗಿದ್ದಾರೆ.

ಹೇಗಿದೆ ನೆಟ್ಟಿಗರ ರಿಯಾಕ್ಷನ್​!

ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾನಲ್ಲಿ ಫುಲ್​ ವೈರಲ್​ ಆಗಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದಿದೆ. ಹಾಗೆಯೇ ತರಾವರಿ ಕಮೆಂಟ್​ಗಳು ಹರಿದು ಬಂದಿವೆ. ಆ ಹುಡುಗ ಇವಳನ್ನು ಬಿಟ್ಟಿದ್ದು ಒಳ್ಳೆಯದೇ ಆಯಿತು, ಇಲ್ಲದಿದ್ದರೆ ಜೀವನ ಪರ್ಯಂತ ಏಟನ್ನು ತಿನ್ನುತ್ತಲೇ ಇರುತ್ತಿದ್ದ ಎಂದು ಒಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ.
ನೋಡಿ, ಇದನ್ನೇ ನಿಜವಾದ ಸ್ತ್ರೀ ಸಬಲಿಕರಣ ಎನ್ನುವುದು ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ನಿಮ್ಮ ಜಗಳ ಏನೇ ಇದ್ದರು ಅದನ್ನು ನಿಮ್ಮ ಮನೆಯಲ್ಲಿ ಪರಿಹಾರ ಮಾಡಿಕೊಳ್ಳಿ, ಹೀಗೆ ಬೀದಿಯಲ್ಲಿ ಹೊಡೆದು ಕೊಳ್ಳುವುದು ಎಷ್ಟು ಸರಿ? ಎಂದು ಮತ್ತೊಬ್ಬರು ತಿಳಿ ಹೇಳಿದ್ದಾರೆ, (ಏಜನ್ಸೀಸ್​).