Grow Dragon Fruit On Home Terrace
- ಡ್ರ್ಯಾಗನ್ ಹಣ್ಣನ್ನು ಮನೆಯ ಟೆರಾಸ್ ಮೇಲೆಯೇ ಬೆಳೆಯೋದು ಹೇಗೆ?.
- 16-20 ಇಂಚಿನ ಡ್ರಮ್ ಅಥವಾ ಬಕೆಟ್ನಲ್ಲಿ ಡ್ರ್ಯಾಗನ್ ಹಣ್ಣು ಬೆಳೆಯಬಹುದು.
- ಮಧುಮೇಹ ನಿಯಂತ್ರಣ, ಹೃದಯ ಆರೋಗ್ಯಕ್ಕೂ ಮದ್ದು ಈ ಡ್ರ್ಯಾಗನ್ ಹಣ್ಣು
Grow Dragon Fruit On Home Terrace:
ಡ್ರ್ಯಾಗನ್ ಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಹಳಷ್ಟು ಸಹಕಾರಿ. ಮಧುಮೇಹ ನಿಯಂತ್ರಿಸಲು ಮದ್ದು. ಹೃದಯ ಆರೋಗ್ಯಕ್ಕೂ ಸಾಕಷ್ಟು ಸಹಕಾರಿ. ಇಷ್ಟೆಲ್ಲ ಆರೋಗ್ಯ ಪ್ರಯೋಜನವನ್ನು ನೀಡುವ ಈ ಡ್ರ್ಯಾಗನ್ ಫ್ರೂಟ್ ಕೊಂಡುಕೊಳ್ಳಲು ಮಾತ್ರ ಹಲವರು ಕಷ್ಟ ಪಡುತ್ತಾರೆ, ಒಂದು ಹಣ್ಣಿಗೆ ಎಂಬತ್ತರಿಂದ 100 ರೂಪಾಯಿಗಳವರೆಗೂ ಮಾರಾಟವಾಗುವ ಕಾರಣ ಸಾಕಷ್ಟು ಜನರು ಇದನ್ನು ಕೊಂಡುಕೊಳ್ಳಲು ಮುಂದಾಗೋದೆ ಇಲ್ಲ.
ಆದರೆ, ವಿಚಾರ ಏನೆಂದರೆ ಡ್ರ್ಯಾಗನ್ ಹಣ್ಣು ಬೆಳೆಯುವದರಲ್ಲಿ ಭಾರಿ ಲಾಭ ಇದೆ. ಹೌದು ಈ ಹಣ್ಣನ್ನು ಬೆಳೆಯಲು ಬೇರೆ ಗಿಡ ಅಥವಾ ಹಣ್ಣಿನ ಗಿಡದಂತೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮಣ್ಣು ಹಾಗೂ ಪೋಷಣೆಯನ್ನು ಸರಿಯಾದ ರೀತಿ ಮಾಡಿದರೆ ಸಾಕು ನಿಮ್ಮ ಮನೆಯ ತಾರಸಿಯಲ್ಲಿಯೂ ನೀವು ಡ್ರ್ಯಾಗನ್ ಹಣ್ಣನ್ನು ಬೆಳೆದು, ಯಾವುದೇ ಖರ್ಚಿಲ್ಲದೆ ಆರೋಗ್ಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ತಾರಸಿಯಲ್ಲಿ ಡ್ರ್ಯಾಗನ್ ಹಣ್ಣು ಬೆಳೆಯೋದು ಹೇಗೆ?
- ಸಸಿ ಹೀಗೆ ಆಯ್ಕೆ ಮಾಡಿಕೊಳ್ಳಿ
ಮೊದಲಿಗೆ ಡ್ರ್ಯಾಗನ್ ಹಣ್ಣು ಬೆಳೆಯಲು ಬೀಜ ಬಳಕೆ ಮಾಡಬೇಡಿ. ನೀವು ಬೀಜ ಬಿತ್ತು ಅದು ಬೆಳೆಯಲು ಹೆಚ್ಚು ಸಮಯ ಹಿಡಿಯುವ ಕಾರಣ, ನರ್ಸರಿಗಳಲ್ಲಿ ಬೆಳೆದ ಡ್ರ್ಯಾಗನ್ ಸಸಿಯನ್ನು ಕೊಂಡು ತಂದು ಬೆಳೆಯುವುದು ಉತ್ತಮ. ಕತ್ತರಿಸಿದ ಡ್ರ್ಯಾಗನ್ ಗಿಡಗಳು ಹೆಚ್ಚು ವರ್ಷ ಫಸಲು ನೀಡುತ್ತದೆ. ನೀವು ಕೆಂಪು ಅಥವಾ ಬಿಳಿ ಯಾವ ಪ್ರಭೇದದ ಹಣ್ಣನ್ನಾದರೂ ಕೊಂಡುಕೊಳ್ಳಬಹುದು.
ಗಿಡ ನೆಡುವ ಸಾಧನ ಹೀಗಿರಲಿ
ನರ್ಸರಿಯಿಂದ ಕೊಂಡುತಂದ ಡ್ರ್ಯಾಗನ್ ಹಣ್ಣಿನ ಗಿಡವನ್ನು ಮಡಿಕೆ ಅಥವಾ ಬಕೆಟ್ನಂತಹ ಬೃಹತ್ ಗಾತ್ರದ ಸಾಧನಕ್ಕೆ ಹಾಕಿ. ಆನ್ಲೈನ್ ಶಾಪಿಂಗ್ನಲ್ಲಿ ಡ್ರ್ಯಾಗನ್ ಟಬ್ ಅನ್ನು ಕೊಂಡುಕೊಳ್ಳಬಹುದು. ಒಟ್ಟಾರೆಯಾಗಿ 16 ಅಥವಾ 20 ಇಂಚಿನ ಟಬ್ ಬಳಕೆ ಮಾಡಿ ನೀವು ಈ ಹಣ್ಣಿನ ಗಿಡವನ್ನು ಪೋಷಣೆ ಮಾಡಬೇಕಾಗುತ್ತದೆ.
ಮಣ್ಣು ಹೀಗಿರಲಿ
ಶೇ0.50ರಷ್ಟು ಮರಳು ಮಿಶ್ರಿತ ಮಣ್ಣು, ಶೇ30ರಷ್ಟು ಗೊಬ್ಬರ, ಶೇ.20ರಷ್ಟು ಮರಳು ಅಥವಾ ಕೊಕೊಪಿಟ್ ಮಿಶ್ರಣ ಮಾಡಿ ಗಿಡಕ್ಕೆ ಹಾಕಿ. ಬುಡದಲ್ಲಿ ಸ್ವಲ್ಪ ನೀರನ್ನು ಹಾಕಿ, ಈ ಡ್ರ್ಯಾಗನ್ ಹಣ್ಣು ಬಳ್ಳಿಯಂತೆ ಬೆಳೆಯುವ ಕಾರಣ, ಸಸಿ ಪಕ್ಕ ಒಂದು ಗಟ್ಟಿಯಾದ ಕೋಲನ್ನು ಇಡಿ.
ಡ್ರ್ಯಾಗನ್ ಹಣ್ಣಿಗೆ ಬಿಸಿಲು ಬೇಕು
ಡ್ರ್ಯಾಗನ್ ಗಿಡವು ಸೊಂಪಾಗಿ ಬೆಳೆಯಲು ಆರರಿಂದ ಎಂಟು ಗಂಟೆಗಳ ಕಾಲ ಬಿಸಿಲಿನಲ್ಲಿ ಇರಬೇಕು. ಇದಕ್ಕೆ ಹೆಚ್ಚು ಬಿಸಿಲಿನ ಅಗತ್ಯ ಇರುತ್ತದೆ. ಬಿಸಿಲಲ್ಲಿ ಇದ್ದಷ್ಟು ಉತ್ತಮ ಹಾಗೂ ಸಿಹಿ ಭರಿತ ಹಣ್ಣನ್ನು ಸೇವನೆ ಮಾಡಬಹುದಾಗಿದೆ.
ಇದು ನೆನಪಿರಲಿ
- ಡ್ರ್ಯಾಗನ್ ಹಣ್ಣಿಗೆ ಹೆಚ್ಚು ನೀರಿನ ಅವಶ್ಯಕತೆ ಇರೋದಿಲ್ಲ. ಬುಡ ಒಣಗಿದಾಗಷ್ಟೇ ನೀರನ್ನು ಹಾಕಿ. ಒಂದು ವಾರಕ್ಕೆ ಎರಡು ಅಥವಾ ಮೂರು ಬಾರಿ ನೀರು ಹಾಕಿ ಪೋಷಿಸಿದರೆ ಸಾಕು.
- ಡ್ರ್ಯಾಗನ್ ಹಣ್ಣು ಬೆಳೆದಂತೆ ಕೊಂಬೆಗಳನ್ನು ಕತ್ತರಿಸಿ ಇದು, ಹಣ್ಣು ಬೇಗನೆ ಬೆಳೆಯಲು ಸಹಾಯ ಮಾಡುತ್ತದೆ.
- ಸಾಮಾನ್ಯವಾಗಿ ಡ್ರ್ಯಾಗನ್ ಸಸಿ ನೆಟ್ಟು 12ರಿಂದ 13 ತಿಂಗಳಿಗೆ ಹೂ ಬಿಡುತ್ತದೆ. 30 -35 ದಿನಕ್ಕೆ ಹಣ್ಣನ್ನು ನೀಡುತ್ತದೆ, (ಏಜೆನ್ಸೀಸ್).