ಟ್ರೆಂಡಿಂಗ್

'ನೋ ಮೇಲ್ಸ್, ಮೀಟಿಂಗ್ಸ್, ಸೋಮವಾರ ಸಿಗೋಣ'; ಮೈಕ್ರೋಸಾಫ್ಟ್ ಔಟ್ಲುಕ್ ಸರ್ವರ್‌ ಡೌನ್‌..ಇಂಟರ್ನೆಟ್​ನಲ್ಲಿ ಮೀಮ್ಸ್​ ವೈರಲ್

  • ಮೈಕ್ರೋಸಾಫ್ಟ್ ಔಟ್ಲುಕ್ ಸರ್ವರ್‌ ಡೌನ್‌, ಶುಕ್ರವಾರದಿಂದಲೇ ಉದ್ಯೋಗಿಗಳಿಗೆ ವೀಕೆಂಡ್ ಮೂಡ್

  • ಶುಕ್ರವಾರ ಮುಂಜಾನೆ 1.30ರ ಸುಮಾರಿಗೆ ಮೈಕ್ರೋಸಾಫ್ಟ್​​ ಅಡಚಣೆ..ಸರಿಪಡಿಸುತ್ತಿರುವ ಬಗ್ಗೆ ಮಾಹಿತಿ

  • ಫ್ರೈಡೆ ಫನ್​ ಡೇ ಎಂದು ಎಕ್ಸ್​ನಲ್ಲಿ ಮೀಮ್ಸ್ ಕ್ರಿಯೇಟ್ ಮಾಡಿದ ಎಂಪ್ಲಾಯಿಸ್

Microsoft outage as memes: ವಾರವಿಡೀ ಕೆಲಸ ಮಾಡಿ ಒತ್ತಡದಿಂದ ಬೇಸತ್ತಿದ್ದ ಟೆಕ್ಕಿಗಳಿಗೆ ಶುಕ್ರವಾರ ಮೈಕ್ರೋಸಾಫ್ಟ್ ನೀಡಿದ ಅನಿರೀಕ್ಷಿತ 'ಉಡುಗೊರೆ'ಯೆಂದರೆ ಅದು ಸರ್ವರ್ ಡೌನ್. ಇಮೇಲ್ ಇಲ್ಲ, ಮೀಟಿಂಗ್‌ಗಳಿಲ್ಲದೆ ಶುಕ್ರವಾರದಿಂದಲೇ ಉದ್ಯೋಗಿಗಳು ತಮ್ಮ ವೀಕೆಂಡ್ ಎಂಜಾಯ್ ಮಾಡಿದ್ದು, ಮೈಕ್ರೋ ಸಾಫ್ಟ್​ ಸರ್ವರ್​ಗೆ ಥ್ಯಾಂಕ್ಯೂ ಹೇಳಿದ್ದಾರೆ. ಸದ್ಯ ಉದ್ಯೋಗಿಗಳ ಪರಿಸ್ಥಿತಿ ಬಗ್ಗೆ ಎಕ್ಸ್​ನಲ್ಲಿ ಮೀಮ್ಸ್​ ವೈರಲ್ ಆಗಿದೆ.

ಮೈಕ್ರೋಸಾಫ್ಟ್ 365 ಹಾಗೂ ಔಟ್ಲುಕ್, ಟೀಮ್ಸ್ ಸೇರಿದಂತೆ ಹಲವು ಅಪ್ಲಿಕೇಶನ್​​ಗಳು ಸುಮಾರು ಏಳಕ್ಕೂ ಹೆಚ್ಚು ಗಂಟೆಗಳ ಕಾಲ ಸ್ತಬ್ಧಗೊಂಡಿದ್ದವು. ಇದರಿಂದಾಗಿ ಓಪನ್​ ಎಐ ಮತ್ತು ಆಂಥ್ರೋಪಿಕ್‌ನ ಸೇವೆಗೂ ಕೂಡ ಮೈಕ್ರೋಸಾಫ್ಟ್ 365 ಕನೆಕ್ಟರ್‌ ದೋಷದಿಂದಾಗಿ ಸಮಸ್ಯೆಯಾಗಿತ್ತು. ಇದರಿಂದ ಕೆಲಸ ಮಾಡಲಾಗದೆ ಉದ್ಯೋಗಿಗಳು ಪರದಾಡುವಂತಾಗಿತ್ತು. ಹೀಗಾಗಿ ಎಕ್ಸ್​ನಲ್ಲಿ ಮೀಮ್​​ ಕ್ರಿಯೇಟ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದು, ಸಾಕಷ್ಟು ತಮಾಷೆಗೆ ಕಾರಣವಾಗಿದೆ.

ಮೀಮ್ಸ್ ಹಬ್ಬ

ಮೈಕ್ರೋಸಾಫ್ಟ್ ಔಟ್ಲುಕ್ ಡೌನ್ ಆಗಿದೆ ಮೀಟಿಂಗ್​ ಇಲ್ಲ, ಇಮೇಲ್ ಇಲ್ಲ, ಲ್ಯಾಪ್ಟಾಪ್​ ಮುಚ್ಚಿಟ್ಟು ಎಂಜಾಯ್ ಮಾಡಿ ಸಾಕು ಎನ್ನುವ ರೀತಿಯಲ್ಲಿ, ಮತ್ತೊಬ್ಬರು, ನಾವು ನೇರವಾಗಿ ಸೋಮವಾರ ಸಿಗೋಣ. ಪ್ರಿಯ ಮೈಕ್ರೋಸಾಫ್ಟ್, ಆತುರಪಡಬೇಡಿ. ನಿಮ್ಮ ಸಮಯ ತೆಗೆದುಕೊಳ್ಳಿ. ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ. ನಿಮ್ಮ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ,ಎಲ್ಲರಿಗೂ ಶುಕ್ರವಾರದ ಶುಭಾಶಯಗಳುವಿಧೇಯಪೂರ್ವಕವಾಗಿ,ಪ್ರತಿಯೊಬ್ಬ ಕಾರ್ಪೊರೇಟ್ ಉದ್ಯೋಗಿ ಎಂದು ತಮಾಷೆಯಾಗಿ ಬರೆದುಕೊಂಡು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಳ್ಳುತ್ತಿದ್ದಾರೆ.

ಡೌನ್‌ಡೇಟೆಕ್ಟರ್‌ (Downdetector) ವರದಿಗಳ ಪ್ರಕಾರ. ಮೈಕ್ರೋಸಾಫ್ಟ್​​ ಅಡಚಣೆಯು ಶುಕ್ರವಾರ ಮುಂಜಾನೆ 1.30ರ ಸುಮಾರಿಗೆ ತೀವ್ರಗೊಂಡಿತು. ಇದರ ಸಲುವಾಗಿ ಸುಮಾರು 1,38,058 ದೂರುಗಳು ದಾಖಲಾದವು. ಬಳಿಕ ಬೆಳಿಗ್ಗೆ 4.30ರ ವೇಳೆಗೆ ಈ ಸಂಖ್ಯೆ ಸುಮಾರು 34,490ಕ್ಕೆ ಇಳಿದರೂ, ಸಾವಿರಾರು ಬಳಕೆದಾರರು ಸಮಸ್ಯೆ ಎದುರಿಸುತ್ತಲೇ ಇದ್ದರು.

ಮೈಕ್ರೋಸಾಫ್ಟ್ ಹೇಳಿಕೆ ಬಿಡುಗಡೆ

ಸರ್ವರ್​ ಡೌನ್​​​​ ಅನ್ನು ಮರುಸ್ಥಾಪಿಸುವ ಕೆಲಸ ನಡೆಯುತ್ತಿರುವುದಾಗಿ ಶುಕ್ರವಾರ ಬೆಳಿಗ್ಗೆ 3.30ಕ್ಕೆ ಮೈಕ್ರೋಸಾಫ್ಟ್ ಮಾಹಿತಿ ಹಂಚಿಕೊಂಡಿತು. ಮೈಕ್ರೋಸಾಫ್ಟ್ ತನ್ನ ಸರ್ವರ್‌ಗಳನ್ನು ಸರಿಪಡಿಸುವಲ್ಲಿ ಬ್ಯುಸಿಯಾಗಿದ್ದರೆ, ಇಂಟರ್ನೆಟ್ ಲೋಕ ಮಾತ್ರ ಶುಕ್ರವಾರದ ದಿನವನ್ನು ಎಂಜಾಯ್ ಮಾಡುವುದರಲ್ಲಿ ಮಗ್ನವಾಗಿತ್ತು, (ಏಜೆನ್ಸೀಸ್)