ಪೆಟ್ರೋಲ್ ಬಂಕ್ನಲ್ಲಿ ಬೈಕ್ಗೆ ಪೆಟ್ರೋಲ್ ಸ್ನಾನ ಮಾಡಿಸಿದ ಯುವಕ
- ಮಧ್ಯಪ್ರಾಚ್ಯ ಯುದ್ಧದಿಂದ ತೈಲ ಮತ್ತು ಇಂಧನ ಪೂರೈಕೆಯಲ್ಲಿ ವ್ಯತ್ಯಯ
- ಪೆಟ್ರೋಲ್ ಬಂಕ್ನಲ್ಲಿ ಬೈಕ್ಗೆ ಪೆಟ್ರೋಲ್ ಸ್ನಾನ ಮಾಡಿಸಿದ ಯುವಕ
- ವೈರಲ್ ವಿಡಿಯೋಗೆ ನೆಟ್ಟಿಗರ ಹಿಡಿಶಾಪ
ವೈರಲ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಇನ್ನು ಕಡಿಮೆ ಆಗುವ ಮೂಡ್ನಲ್ಲಿಲ್ಲ. ಇದರ ನಡುವೆ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಓಡಾಟವನ್ನು ಇರಾನ್ ನಿರ್ಬಂಧಿಸಿರುವ ಕಾರಣ ತೈಲ ಹಾಗೂ ಇಂಧನ ಮಾರುಕಟ್ಟೆಯಲ್ಲಿ ಏರುಪೇರು ಉಂಟಾಗಿದೆ.
ತೈಲ ಬೆಲೆಯ ಬಿಸಿ ಭಾರತಕ್ಕೂ ತಗುಲಿದ್ದು, ಬೆಲೆ ಏರಿಕೆಯಾಗದೇ ಇದ್ದರು ಅಲ್ಲಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಖಾಲಿಯಾಗಿರುವ ಕುರಿತು ಸುದ್ದಿ ಬರುತ್ತಿವೆ. ಇದರ ನಡುವೆ ಇತ್ತೀಚೆಗೆ ಯುವಕನೊಬ್ಬ ತೋರಿರುವ ವರ್ತನೆ ಸೋಶಿಯಲ್ ಮೀಡಿಯಾದಲ್ಲಿ (Viral Video) ಭಾರಿ ಚರ್ಚೆಗೆ ಕಾರಣವಾಗಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಬೈಕ್ಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಬಂದ ಯುವಕನೊಬ್ಬ, ಪೆಟ್ರೋಲ್ ತುಂಬಿಸುವ ಗನ್ನ್ನು ಹಿಡಿದು ತನ್ನ ಬೈಕ್ಗೆ ಸ್ನಾನ ಮಾಡಿಸಿದ್ದಾನೆ. ಈಗ ಈ ವಿಡಿಯೋ ನೋಡಿದ ನೆಟ್ಟಗರು ಫುಲ್ ಗರಂ ಆಗಿದ್ದಾರೆ.
ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಪಡೆದಿದ್ದು, ವಿಡಿಯೋ ನೋಡಿದ ಜನ ಆ ಯುವಕನ ಮೇಲೆ ಕೆಂಡಕಾರುತ್ತಿದ್ದಾರೆ. ಮೊದಲೇ ಪೆಟ್ರೋಲ್ ಸಿಗುತ್ತಿಲ್ಲ ಎಂದು ನಾವು ಪರದಾಡುತ್ತಿದ್ದರೆ, ಇವ ಗಾಡಿಯನ್ನೇ ಪೆಟ್ರೋಲಿನಿಂದ ತೊಳೆಯುತ್ತಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.
ಮೊದಲು ಇಂತಹ ವೈರಲ್ ಗಿರಾಕಿಗಳನ್ನು ಒದ್ದು ಜೈಲಿಗೆ ಹಾಕಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ. ಇವನನ್ನು ಆ ಇರಾನ್ಗೆ ಕಳುಹಿಸಿಬಿಡಿ, ಅಲ್ಲಿ ಯುದ್ಧದಲ್ಲಾದರೂ ಸತ್ತು ಹೋಗಲಿ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ,(ಏಜನ್ಸೀಸ್).