Fridge Food Storage Rules 
ಟ್ರೆಂಡಿಂಗ್

ನಿಮ್ಮ ಫ್ರಿಡ್ಜ್​ನಲ್ಲಿ ಯಾವ ಆಹಾರ ಎಲ್ಲಿಡಬೇಕು?; FSSAI ನೀಡಿದ ಮಹತ್ವದ ಟಿಪ್ಸ್ ಇಲ್ಲಿದೆ

ಪ್ರಮುಖ ಮುಖ್ಯಾಂಶಗಳು

  • ಆಹಾರ ಕಲುಷಿತಗೊಳ್ಳುವುದನ್ನು ತಡೆಯಲು ಫ್ರಿಡ್ಜ್‌ನಲ್ಲಿ ಯಾವ ವಸ್ತು ಇಡಬೇಕು ಗೊತ್ತಾ?
  • ಮಾಂಸ, ಬೇಯಿಸಿದ ಆಹಾರದ ಸೀಫುಡ್ ಯಾವುದು ಯಾವ ರೋನಲ್ಲಿರಬೇಕು?
  • ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಲು ಮೊಟ್ಟೆಗಳನ್ನು ನಿಗದಿತ ಟ್ರೇನಲ್ಲಿ ಇಡುವುದು ಕಡ್ಡಾಯ
Fridge Food Storage Rules: ಸಾಮಾನ್ಯ ಜನರು ಹಾಗೇ ಅಲ್ವ ಕೊಳೆಯದೇ ಆಹಾರ ಇರುತ್ತೆ ಅಂದ್ರೆ ಇದ್ದಬದ್ದ ಆಹಾರವನ್ನೆಲ್ಲ ಫ್ರಿಡ್ಜ್​ನಲ್ಲಿ ಇಟ್ಟು, ಬೇಕಾದಾಗ ಅದನ್ನ ತೆಗೆದುಕೊಂಡು ಸೇವನೆ ಮಾಡ್ತಾರೆ.  ಆದರೆ, ಯಾವ್ಯಾವುದೋ ರೋನಲ್ಲಿ ಯಾವುದೋ ಆಹಾರ ಇಡುವುದರಿಂದ ಬ್ಯಾಕ್ಟೀರಿಯಾಗಳು ಹರಡಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫ್ರಿಡ್ಜ್‌ನಲ್ಲಿ ಆಹಾರವನ್ನು ಸುರಕ್ಷಿತವಾಗಿ ಸಂಗ್ರಹಿಸುವ ಕುರಿತು ಅತ್ಯಂತ ಪ್ರಮುಖ ಮಾರ್ಗಸೂಚಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.

ಫ್ರಿಡ್ಜ್  ಬಳಕೆ ಮಾಡುವುದು ಹೇಗೆ?

ಮಾಂಸ, ಚಿಕನ್, ಸೀ ಫುಡ್ ಎಲ್ಲಿಡ್ಬೇಕು? 

ಮಾಂಸ ಮತ್ತು ಮೀನುಗಳನ್ನು ಯಾವಾಗಲೂ ಫ್ರಿಡ್ಜ್‌ನ ಅತ್ಯಂತ ಕೆಳಗಿನ ಶೆಲ್ಫ್‌ನಲ್ಲಿ ಅಂದರೆ ಬಾಟಮ್ ಶೆಲ್ಫ್​ನಲ್ಲಿಡಬೇಕು. ಮುಚ್ಚಿದ ಪಾತ್ರೆ ಅಥವಾ ಪ್ಲಾಸ್ಟಿಕ್ ಚೀಲಗಳಲ್ಲಿ ಇಡಬೇಕು. ಇದರಿಂದ ಕಚ್ಚಾ ಮಾಂಸದಲ್ಲಿರುವ ರಸ ಅಥವಾ ನೀರು ಕೆಳಗೆ ಸೋರಿ, ಫ್ರಿಡ್ಜ್‌ನಲ್ಲಿರುವ ಇತರ ಬೇಯಿಸಿದ ಆಹಾರ ಪದಾರ್ಥಗಳು ಅಥವಾ ಹಣ್ಣು-ತರಕಾರಿಗಳ ಮೇಲೆ ಬೀಳುವುದನ್ನು ತಡೆಯಬಹುದು.
ಮೊಟ್ಟೆ ಎಲ್ಲಿಡಬೇಕು?
FSSAI ಪ್ರಕಾರ, ಮೊಟ್ಟೆಗಳನ್ನು ಅವುಗಳನ್ನು ಕೊಂಡುಕೊಂಡು ಬಂದ ಮೂಲ ಕಾರ್ಟನ್ ನಲ್ಲಿ ಅಥವಾ ಫ್ರಿಡ್ಜ್‌ನಲ್ಲಿ ನೀಡಲಾಗಿರುವ ನಿಗದಿತ ಮೊಟ್ಟೆಯ ಟ್ರೇನಲ್ಲಿ ಇಡಬೇಕು. ಇವುಗಳನ್ನು ಇತರ ತೆರೆದಿಟ್ಟ ಆಹಾರ ಪದಾರ್ಥಗಳಿಂದ ದೂರವಿಡುವುದು ಅತ್ಯಗತ್ಯ.

ಬೇಯಿಸಿದ ಆಹಾರ ಯಾವ ರೋನಲ್ಲಿಡಬೇಕು?

ಒಮ್ಮೆ ಬೇಯಿಸಿ ಉಳಿದ ಆಹಾರಗಳು, ಹಾಲಿನ ಉತ್ಪನ್ನಗಳು ಮತ್ತು ಸಲಾಡ್‌ಗಳಂತಹ ತಕ್ಷಣ ತಿನ್ನಬಹುದಾದ ಆಹಾರಗಳನ್ನು ಫ್ರಿಡ್ಜ್‌ನ ಮೇಲಿನ ಶೆಲ್ಫ್‌ಗಳಲ್ಲಿ ಇಡಬೇಕು. ಗಾಳಿಯಾಡದ ಸ್ವಚ್ಛವಾದ ಮುಚ್ಚಳವಿರುವ ಪಾತ್ರೆಗಳಲ್ಲಿ ಮಾತ್ರ ಸಂಗ್ರಹಿಸಬೇಕು. ಕಚ್ಚಾ ಆಹಾರಗಳಿಂದ ಇವುಗಳನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿಡಬೇಕು.

ಹಣ್ಣು ತರಕಾರಿ ಎಲ್ಲಿಡಬೇಕು?

ಹಣ್ಣು ಮತ್ತು ತರಕಾರಿಗಳನ್ನು ಫ್ರಿಡ್ಜ್‌ನ ಕೆಳಭಾಗದಲ್ಲಿರುವ 'ಕ್ರಿಸ್ಪರ್ ಡ್ರಾಯರ್' ಅಥವಾ ತರಕಾರಿ ಬಾಕ್ಸ್‌ನಲ್ಲಿ ಇಡಬೇಕು. ಇವುಗಳನ್ನು ಇಡುವ ಮುನ್ನ ಕಚ್ಚಾ ಮಾಂಸದ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳುವುದು ಮುಖ್ಯ.

ಫ್ರಿಡ್ಜ್ ವಾರಕ್ಕೆ ಎರಡು ಬಾರಿಯಾದರು ಸ್ವಚ್ಛಗೊಳಿಸಬೇಕು

  • ಫ್ರಿಡ್ಜ್‌ನ ಒಳಭಾಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಯಾವುದೇ ಆಹಾರ ಚೆಲ್ಲಿದರೆ ತಕ್ಷಣ ಒರೆಸಬೇಕು.
  • ಫ್ರಿಡ್ಜ್‌ನ ತಾಪಮಾನವನ್ನು ಯಾವಾಗಲೂ 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ (ಅಥವಾ ಅದಕ್ಕೆ ಸಮನಾಗಿ) ಮತ್ತು ಫ್ರೀಜರ್ ತಾಪಮಾನವನ್ನು -18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ನಿರ್ವಹಿಸಬೇಕು.
  • ಫ್ರಿಡ್ಜ್‌ನಲ್ಲಿ  ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ತುಂಬಿಸಬೇಡಿ.
  • ಆಹಾರ ಸುರಕ್ಷತೆಯ ಈ ಸರಳ ನಿಯಮಗಳನ್ನು ಪಾಲಿಸುವುದರಿಂದ ಆಹಾರ ವ್ಯರ್ಥವಾಗುವುದನ್ನು ತಡೆಯಬಹುದು.
  • ಸಲ್ಮೊನೆಲ್ಲಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳಿಂದ ಬರುವ ಆಹಾರ ವಿಷಪೂರಿತ ಸಮಸ್ಯೆಯಿಂದ ದೂರವಿರಬಹುದು ಎಂದು ಪ್ರಾಧಿಕಾರ ತಿಳಿಸಿದೆ, (ಏಜೆನ್ಸೀಸ್).