ನೀರಿನಿಂದ ಹಾರಿ ಬಂದು ಹಾವಿನ ತಲೆಯನ್ನೇ ಹಿಡಿದ ಮೀನು! 
ಟ್ರೆಂಡಿಂಗ್

ನೀರಿನಿಂದ ಹಾರಿ ಬಂದು ಹಾವಿನ ತಲೆಯನ್ನೇ ಹಿಡಿದ ಮೀನು! ಮುಂದೇನಾಯ್ತು? ಇಲ್ಲಿದೆ ರಣರೋಚಕ ವಿಡಿಯೋ...Fish catches snake

ನದಿಯ ಮೇಲ್ಮೈಯಲ್ಲಿದ್ದ ಮೀನೊಂದು, ಆ ಹಾವನ್ನು ತನ್ನ ಆಹಾರ ಅಥವಾ ಬೇಟೆ ಎಂದು ತಪ್ಪಾಗಿ ಭಾವಿಸಿದೆ. ತಕ್ಷಣವೇ ನೀರಿನಿಂದ ಹಾರಿಬಂದ ಮೀನು, ನೇರವಾಗಿ ಹಾವಿನ ತಲೆಯನ್ನು ತನ್ನ ಬಾಯೊಳಗೆ ಹಾಕಿಕೊಂಡಿದೆ.

Fish catches snake : ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಪ್ರಕೃತಿಯ ಅಚ್ಚರಿಯ ದೃಶ್ಯಗಳು ಎಂದೆಂದಿಗೂ ಜನರನ್ನು ಬೆರಗುಗೊಳಿಸುತ್ತವೆ. ಇಂತಹದ್ದೇ ಒಂದು ವಿಚಿತ್ರ ಹಾಗೂ ರೋಚಕ ಘಟನೆಯ ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ನೀರಿನಿಂದ ಹಾರಿದ ಮೀನೊಂದು ಮರದ ಕೊಂಬೆಯಲ್ಲಿದ್ದ ಹಾವಿನ ತಲೆಯನ್ನು ತನ್ನ ಬಾಯಲ್ಲಿ ಕಚ್ಚಿಕೊಂಡ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಸಾಮಾಜಿಕ ಜಾಲತಾಣದ ಎಕ್ಸ್ (X) ಪುಟದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ, ನದಿಯ ನೀರಿನ ಮೇಲೆ ತೂಗುಬಿದ್ದಿರುವ ಮರದ ಕೊಂಬೆಯೊಂದರ ಮೇಲೆ ಹಸಿರು ಬಣ್ಣದ ಹಾವೊಂದು ಕುಳಿತಿರುವುದನ್ನು ಕಾಣಬಹುದು. ನದಿಯ ಮೇಲ್ಮೈಯಲ್ಲಿದ್ದ ಮೀನೊಂದು, ಆ ಹಾವನ್ನು ತನ್ನ ಆಹಾರ ಅಥವಾ ಬೇಟೆ ಎಂದು ತಪ್ಪಾಗಿ ಭಾವಿಸಿದೆ. ತಕ್ಷಣವೇ ನೀರಿನಿಂದ ಹಾರಿಬಂದ ಮೀನು, ನೇರವಾಗಿ ಹಾವಿನ ತಲೆಯನ್ನು ತನ್ನ ಬಾಯೊಳಗೆ ಹಾಕಿಕೊಂಡಿದೆ.

ಹಾವಿನ ತಲೆಯನ್ನು ಬಾಯಲ್ಲಿ ಕಚ್ಚಿಕೊಂಡ ಮೀನು, ತಕ್ಷಣವೇ ನೀರಿಗೆ ಮರಳಲು ಸಾಧ್ಯವಾಗದೆ ಗಾಳಿಯಲ್ಲಿಯೇ ನೇತಾಡಬೇಕಾಯಿತು. ನೀರು ಹಾಗೂ ನೆಲದ ಜೀವಿಗಳ ನಡುವಿನ ಈ ಅನಿರೀಕ್ಷಿತ ಕಾಳಗವು ಕೆಲಕಾಲ ವೀಕ್ಷಕರಲ್ಲಿ ರೋಮಾಂಚನ ಉಂಟುಮಾಡಿತು. ಮೀನು ಗಾಳಿಯಲ್ಲಿ ಒದ್ದಾಡುತ್ತಾ, ಹಾವಿನ ಜತೆಗಿನ ಸಂಘರ್ಷದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟಿತು.

ಮೀನು ತನ್ನ ತಲೆಯನ್ನು ಬಾಯಲ್ಲಿ ಕಚ್ಚಿಕೊಂಡಿದ್ದರಿಂದ ಹಾವಿನ ಸ್ಥಿತಿಯೂ ಕರುಣಾಜನಕವಾಗಿತ್ತು. ತೀವ್ರ ಭಯಭೀತಗೊಂಡಿದ್ದ ಹಾವು, ಆ ಅಪಾಯದಿಂದ ಪಾರಾಗಲು ಹೆಣಗಾಡಿತು. ಮೀನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಹಾವು ಹರಸಾಹಸ ಪಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಕೆಲಕಾಲ ಗಾಳಿಯಲ್ಲಿ ತೂಗಾಡುತ್ತಾ ಹೋರಾಟ ನಡೆಸಿದ ನಂತರ, ಮೀನು ಮತ್ತೊಂದು ಮೀನಿನ ಸಾಹಯದಿಂದ ಮತ್ತೆ ನೀರಲ್ಲಿ ಬಿದ್ದಿತು. ಅತ್ತ ಹಾವು ಕೂಡ ಮೀನಿ ಬಾಯಿಯಿಂದ ಬಿಡಿಸಿಕೊಂಡು ನಿಟ್ಟುಸಿರು ಬಿಟ್ಟಿತು. ಪ್ರಕೃತಿಯಲ್ಲಿ ಎಂದಿಗೂ ನಡೆಯದ ಈ ಅಪರೂಪದ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 16.6 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡು ವೈರಲ್ ಆಗಿ, ಹವಾ ಸೃಷ್ಟಿಸಿದೆ, (ಏಜೆನ್ಸೀಸ್​).