Healthy coffee 
ಟ್ರೆಂಡಿಂಗ್

ನಿಮ್ಮ ಮುಂಜಾನೆಯ ಕಾಫಿಯನ್ನು ಸೂಪರ್​ ಹೆಲ್ದಿಯನ್ನಾಗಿಸಲು ಇಲ್ಲಿದೆ ಮೂರು ಬೆಸ್ಟ್ ಟಿಪ್ಸ್...Healthy coffee

ಪ್ರಮುಖ ಮುಖ್ಯಾಂಶಗಳು

  • ಹೃದಯದ ಆರೋಗ್ಯ ಮತ್ತು ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸಲು ಕೊಕೊ ಪೌಡರ್ ಸಹಕಾರಿ.
  • ಜೀರ್ಣಕ್ರಿಯೆ ಉತ್ತಮಗೊಳಿಸಲು ಮತ್ತು ಕರುಳಿನ ಆರೋಗ್ಯಕ್ಕೆ ಕಾಫಿಯಲ್ಲಿ ಎ2 ತುಪ್ಪದ ಬಳಕೆ.
  • ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಮತ್ತು ಇನ್ಸುಲಿನ್ ಸುಧಾರಿಸಲು ದಾಲ್ಚಿನ್ನಿ ಪುಡಿ ಬೆಸ್ಟ್.
Healthy coffee: 
ಬೆಳಗೆದ್ದು ನಿತ್ಯಕರ್ಮ ಮುಗಿಸಿ ಒಂದು ಕಪ್ ಬಿಸಿಬಿಸಿ ಕಾಫಿ ಕುಡಿಯುವುದು ಕೇವಲ  ಅಭ್ಯಾಸವಲ್ಲ. ಅದೊಂದು ಭಾವನೆ. ಸಾವಿರ ಚಿಂತೆಗೆ ಕೊಡುವ ಮದ್ದು.  ಬೆಳಗಿನ ದಿನಚರಿಯನ್ನು ಚುರುಕಾಗಿ ಆರಂಭಿಸಲು, ಸಂಜೆಯ ತಿಂಡಿಯೊಂದಿಗೆ ಆನಂದಿಸಲು ಅಥವಾ ಬಿಡುವಿಲ್ಲದ ಕೆಲಸದ ನಡುವೆ ಸಣ್ಣದೊಂದು ವಿರಾಮ ಪಡೆಯಲು ಕಾಫಿ ಒಂದು ಅತ್ಯುತ್ತಮ ಸಂಗಾತಿ. 
 ಕಾಫಿ, ಟೀ ಅಭ್ಯಾಸ ದೂರ ಮಾಡಿಕೊಳ್ಳೋದು ಕಷ್ಟ ಎಂದು ಆಗಾಗ್ಗೆ ಇವುಗಳ ಪ್ರಿಯರು ಮಾತನಾಡೋದು ಉಂಟು. ಆದ್ರೆ ಕಾಫಿಯಲ್ಲಿರುವ ಕೆಫೀನ್​ ಅಂಶ ನಿದ್ರಾಹೀನತೆ, ಆತಂಕ, ಹೊಟ್ಟೆಯ ಸಮಸ್ಯೆಗಳು ಮತ್ತು ಹೃದಯ ಬಡಿತಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ. ಆದರೆ, ಪೌಷ್ಟಿಕತಜ್ಞೆ ದೀಪ್ಶಿಖಾ ಜೈನ್ ಅವರು ಕಾಫಿ ಜೊತೆಗೆ ಮೂರು ಪದಾರ್ಥವನ್ನು ಸೇರಿಸಿ ಕುಡಿದರೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಹಾಗಾದರೆ ಆ ಮೂರು  ಪೌಷ್ಟಿಕಾಂಶಯುಕ್ತ ಪದಾರ್ಥ ಯಾವುದು ಎಂದು ತಿಳಿದುಕೊಳ್ಳೋಣ.

3 ಪದಾರ್ಥ ಯಾವುದು?

 ಕಾಫಿ ತನ್ನದೇ ಆದ ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಕಾಫಿಗೆ ಚಕ್ಕೆ ಪುಡಿ, ತುಪ್ಪ, ಕೋಕೊ ಪೌಡರ್​ನಂತಹ ಪೌಷ್ಟಿಕಾಂಶಯುಕ್ತ ಪದಾರ್ಥಗಳನ್ನು ಸೇರಿಸುವುದರಿಂದ ಮೆದುಳಿನ ಕಾರ್ಯಕ್ಷಮತೆ, ಜೀರ್ಣಕ್ರಿಯೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಪೌಷ್ಟಿಕತಜ್ಞೆ ದೀಪ್ಶಿಖಾ ಜೈನ್  ಇನ್​ಸ್ಟಾಗ್ರಾಮ್​ನಲ್ಲಿ  ಮಾಹಿತಿ ಹಂಚಿಕೊಂಡಿದ್ದಾರೆ. 

ಕಾಫಿಯನ್ನು ಹೀಗೆ ಸೇವನೆ ಮಾಡಿ

ಕಾಫಿಯನ್ನು ನಿಮ್ಮ ಹೊಟ್ಟೆಗೆ ಇಳಿಸುವ ಮೊದಲು ಅದರ ಜೊತೆಗೆ ಸ್ವಲ್ಪ ಕೊಕೊ ಪೌಡರ್ ಅಥವಾ ಕಚ್ಚಾ ಕೋಕೋ  ಸೇರಿಸುವುದು ಉತ್ತಮ. ಕೊಕೊ ಪೌಡರ್​ನಲ್ಲಿ anti accident ಅಂಶವು ಹೇರಳವಾಗಿರುವ ಕಾರಣ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಮುಕ್ತಿ ನೀಡಲು ಸಹಕಾರಿ. ಮೆದುಳಿನ ಆರೋಗ್ಯಕ್ಕೂ ಪ್ರಯೋಜನಕಾರಿ ಎನ್ನುತ್ತಾರೆ ದೀಪ್ಶಿಖಾ ಜೈನ್. 

ತುಪ್ಪ ಸೇರಿಸಿ ಕಾಫಿ ಕುಡಿಯಿರಿ

ಕಾಫಿಗೆ ತುಪ್ಪನ ಎಂದು ಮೂಗು ಮುರಿಯಬೇಡಿ. ಇದು ಇತ್ತೀಚೆಗೆ ಟ್ರೆಂಡ್​ ಆಗಿದೆ. ಕಾಫಿಗೆ ಒಂದು ಚಮಚ ತುಪ್ಪ ಹಾಕಿ ಕುಡಿಯುವುದರಿಂದ  ಅದರಲ್ಲಿರುವ 'ಬ್ಯುಟಿರಿಕ್ ಆಸಿಡ್' ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಕರುಳಿನ ಆರೋಗ್ಯ ವೃದ್ಧಿಸಲು, ಜೀರ್ಣಾಂಗ ವ್ಯವಸ್ಥೆಯಲ್ಲಿ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚಕ್ಕೆ ಪುಡಿ ಏಕೆ ಸೇರಿಸಬೇಕು? 

ಕಾಫಿಗೆ ಸ್ವಲ್ಪ ದಾಲ್ಚಿನ್ನಿ ಅಥವಾ ಚಕ್ಕೆ ಸೇರಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸಲು ಸಹಾಯ ಮಾಡುತ್ತದೆ. ಗ್ಲೂಕೋಸ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.  ಬ್ಲಾಕ್​ ಕಾಫಿಗೆ ಒಂದು ಚಿಟಿಕೆ ಚಕ್ಕೆ ಪುಡಿ ಸೇರಿಸುವುದರಿಂದ ಮಧುಮೇಹ ನಿರ್ವಹಣೆಗೆ ಹೆಚ್ಚು ಸಹಕಾರಿ ಎನ್ನಲಾಗಿದೆ, (ಏಜೆನ್ಸೀಸ್).
 ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.