ಸ್ಕ್ರೀನ್ ಸೀಳಿಕೊಂಡು ಥಿಯೇಟರ್‌ಗೆ ನುಗ್ಗಿದ ಕಾರು
ವೈರಲ್: ನಾವು ಸಿನಿಮಾಗಳಲ್ಲಿ ಕಂಡುಬರುವ ಆ್ಯಕ್ಷನ್ ದೃಶ್ಯಗಳಲ್ಲಿ ಕಾರ್ಗಳು, ಜೀಪ್ಗಳು ದಿಡೀರ್ ಎಂಟ್ರಿ ಕೊಡುವುದು, ಕತ್ತಿ-ಮಚ್ಚುಗಳಲ್ಲಿ ಹೊಡೆದಾಡುವುದನ್ನು ನೋಡಿರುತ್ತೆವೆ. ಆದರೆ ಈ ಘಟನೆ ನಿಜವಾಗಿ ನಡೆದರೆ ಹೇಗಾಗಬೇಡ! ಈಗ ಇದೇ ರೀತಿಯ ಒಂದು ಆ್ಯಕ್ಷನ್ ಭರಿತ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಥಿಯೇಟರ್‌ಗೆ ನುಗ್ಗಿದ ಕಾರ್!
ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಸಿನಿಮಾ ಥಿಯೇಟರ್ನಲ್ಲಿ ಯಾವುದೀ ಆ್ಯಕ್ಷನ್ ಸಿನಿಮಾದ ಪ್ರದರ್ಶನವಾಗುತ್ತಿರುತ್ತದೆ. ಪರದೆಯ ಮೇಲೆ ಕಾರು ಬರುತ್ತಿರುವ ಕಾಣಿಸುತ್ತಿರುತ್ತದೆ. ಅದೇ ಸಮಯಕ್ಕೆ ನೈಜ ಕಾರೊಂದು ಸಿನಿಮಾ ಮಂದಿರದ ಪರದೆಯನ್ನು ಹರಿದು ಪ್ರೇಕ್ಷಕರನ್ನು ದಿಗಲು ಗೊಳಿಸಿದನ್ನು ವಿಡಿಯೋನಲ್ಲಿ ನೋಡಬಹುದಾಗಿದೆ.
ಈ ಘಟನೆ ನಡೆಯುತ್ತಿದ್ದಂತೆ ಸಿನಿಮಾ ಮಂದರಿದಲ್ಲಿದ್ದ ಜನ ಕಂಗಾಲಾಗಿದ್ದು, ದಿಡೀರ್ ಎಂದು ನಡೆದ ಈ ಘಟನೆಯನ್ನು ನೋಡಿ ಹೆದರಿ ಹೋಗಿದ್ದಾರೆ. ಅದು ಹೇಗೆ ಪರದೆಯನ್ನು ಹರಿದು ಈ ಕಾರು ಬಂದಿತು ಎಂದು ಚಿಂತಾಕ್ರಾಂತರಾಗಿದ್ದಾರೆ.
ನೆಟ್ಟಿಗರ ಫನ್ನಿ ಕಮೆಂಟ್ಸ್!
ಈ ವಿಡಿಯೀ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಬಾಕ್ಸ್ ತುಂಬಿಸುವ ಕೆಲಸಕ್ಕೆ ಕೈ ಹಾಕಿದ್ದಿದ್ದಾರೆ. ಇದನ್ನು ನಾವು 4 ಡಿ ಎಕ್ಸ್ಪಿರಿಯನ್ಸ್ ಎಂದು ಕರೆಯಬಹುದು ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದರೆ, ಆ ಕಾರನ್ನು ತಂದವನ ಮೇಲೆ ಪೊಲೀಸ್ ಕೇಸ್ ದಾಖಲಿಸಿ ಎಂದು ಇನ್ನೊಬ್ಬರು ಹೇಳಿದ್ದಾರೆ.
ನನಗ್ಯಾಕೋ ಈ ವಿಡಿಯೋ ಕೃತಕ ಬುದ್ಧಿಮತ್ತೆ ಸಹಾತದಿಂದ ನಿರ್ಮಿಸಿದ್ದು ಎಂದು ಅನ್ನಿಸುತ್ತದೆ ಎಂದು ಮತ್ತೊಬ್ಬರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಈ ವಿಡಿಯೋ ಏನಾದರೂ ನಿಜವಾದರೆ ಆ ವಾಹನ ಚಾಲಕನನ್ನು ಮಾತ್ರ ಸುಮ್ಮನೆ ಬಿಡಬೇಡಿ ಎನ್ನುವುದು ನೆಟ್ಟಿಗರ ಅಭಿಪ್ರಾಯವಾಗಿದೆ, (ಏಜನ್ಸೀಸ್).