ದಕ್ಷಿಣ ಕೊರಿಯಾದ ಯುವತಿ ಜತೆ ಮಹೇಶ್​ ಬಾಬು ಸೋದಳಿಯನ ನಿಶ್ಚಿತಾರ್ಥ: ಆದ್ರೆ ಸ್ಟಾರ್​ ಭಾಗಿಯಾಗಿಲ್ಲ ಏಕೆ?  
ಟಾಲಿವುಡ್

ದಕ್ಷಿಣ ಕೊರಿಯಾದ ಯುವತಿ ಜತೆ ಮಹೇಶ್​ ಬಾಬು ಸೋದಳಿಯನ ನಿಶ್ಚಿತಾರ್ಥ: ಆದ್ರೆ ಸ್ಟಾರ್​ ನಟ ಭಾಗಿಯಾಗಿಲ್ಲ ಏಕೆ? Mahesh Babu Nephew

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಘಟ್ಟಮನೇನಿ ಮತ್ತು ಗಲ್ಲಾ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ ಮನೆಮಾಡಿದೆ. ಮಹೇಶ್ ಬಾಬು ತಮ್ಮ ಮುಂಬರುವ 'ವಾರಣಾಸಿ' (Varanasi) ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರೆ, ಇತ್ತ ಅವರ ಪತ್ನಿ ನಮ್ರತಾ ಶಿರೋಡ್ಕರ್ ಕುಟುಂಬದ ಪ್ರತಿಯೊಂದು ಶುಭ ಸಮಾರಂಭವನ್ನೂ ಅತ್ಯಂತ ಸ್ಮರಣೀಯವಾಗಿಸುತ್ತಿದ್ದಾರೆ.

ವಿಜಯವಾಣಿ ಸುದ್ದಿ ಜಾಲ

ಫೋಟೋಗಳು ವೈರಲ್​

ಇದೀಗ ಮಹೇಶ್ ಬಾಬು ಅವರ ಅಳಿಯ ಸಿದ್ಧಾರ್ಥ್ ಗಲ್ಲಾ ಮತ್ತು ದಕ್ಷಿಣ ಕೊರಿಯಾದ ಯುವತಿ ಹೈನ್ ಕಿಮ್ (Hyein Kim) ಅವರ ಪ್ರೀ-ವೆಡ್ಡಿಂಗ್ ಸಂಭ್ರಮಾಚರಣೆಯ ಸುಂದರ ಫೋಟೋಗಳನ್ನು ನಮ್ರತಾ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಕುಟುಂಬದಲ್ಲಿ ಹಬ್ಬದ ವಾತಾವರಣ

ಸಿದ್ಧಾರ್ಥ್ ಗಲ್ಲಾ ಅವರ ಮದುವೆ ಸಂಭ್ರಮವು ಘಟ್ಟಮನೇನಿ ಮತ್ತು ಗಲ್ಲಾ ಎರಡೂ ಕುಟುಂಬಗಳಲ್ಲಿ ಸಂತಸ ಮತ್ತು ಹಬ್ಬದ ವಾತಾವರಣವನ್ನು ತಂದಿದೆ.

ಯಾರು ಈ ಸಿದ್ಧಾರ್ಥ್ ಗಲ್ಲಾ?

ಸಿದ್ಧಾರ್ಥ್ ಗಲ್ಲಾ ಅವರು ಉದ್ಯಮಿ, ಮಾಜಿ ಸಂಸದ ಗಲ್ಲಾ ಜಯದೇವ್ ಮತ್ತು ಪದ್ಮಾವತಿ ದಂಪತಿಯ ಪುತ್ರರಾಗಿದ್ದು, ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸ್ವಂತ ಅಳಿಯ (ಸಹೋದರಿಯ ಮಗ).

ದಕ್ಷಿಣ ಕೊರಿಯಾದ ಸೊಸೆ

ಸಿದ್ಧಾರ್ಥ್ ಗಲ್ಲಾ ಅವರು ದಕ್ಷಿಣ ಕೊರಿಯಾ ಮೂಲದ ಯುವತಿ ಹೈನ್ ಕಿಮ್ (Hyein Kim) ಅವರೊಂದಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.

ಅದ್ದೂರಿ ಪ್ರೀ-ವೆಡ್ಡಿಂಗ್ ಸಂಭ್ರಮ

ನಿಶ್ಚಿತಾರ್ಥದ ಬಳಿಕ ಇದೀಗ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಿದ್ಧಾರ್ಥ್ ಮತ್ತು ಹೈನ್ ಕಿಮ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭವನ್ನು ಅತ್ಯಂತ ಸಡಗರದಿಂದ ಆಚರಿಸಲಾಗಿದೆ.

ನಮ್ರತಾ ಶಿರೋಡ್ಕರ್ ಪೋಸ್ಟ್ ವೈರಲ್

ನಮ್ರತಾ ಶಿರೋಡ್ಕರ್ ಅವರು ಈ ಸಂಭ್ರಮದ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ನಮ್ರತಾ ವಿಶೇಷ ಶುಭಾಶಯ

ಫೋಟೋಗಳೊಂದಿಗೆ "ಮದುವೆಯ ಸಂಭ್ರಮ... ಕುಟುಂಬದೊಂದಿಗೆ ಯಾವಾಗಲೂ ಮಜವಾಗಿರುತ್ತದೆ!"ಎಂದು ಕ್ಯಾಪ್ಷನ್ ಬರೆದಿರುವ ನಮ್ರತಾ, ನವಜೋಡಿಗೆ ಶುಭ ಹಾರೈಸಿದ್ದಾರೆ.

ಮಹೇಶ್ ಬಾಬು ಸಿನಿಮಾ ಬಿಜಿ

ಒಂದೆಡೆ ಕುಟುಂಬದವರೆಲ್ಲರೂ ಮದುವೆ ಸಿದ್ಧತೆ ಮತ್ತು ಸಂಭ್ರಮದಲ್ಲಿ ತೊಡಗಿದ್ದರೆ, ಇನ್ನೊಂದೆಡೆ ಮಹೇಶ್ ಬಾಬು ತಮ್ಮ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.