ಟಾಲಿವುಡ್

ಹನುಮಾನ್ 2 ವರ್ಸಸ್ ಜೈ ಹನುಮಾನ್ : ನಿರ್ದೇಶಕ ಪ್ರಶಾಂತ್ ವರ್ಮಾಗೆ ಸೆಡ್ಡು ಹೊಡೆದ ಮತ್ತೊಂದು ನಿರ್ಮಾಣ ಸಂಸ್ಥೆ

ನಿರ್ದೇಶಕ ಪ್ರಶಾಂತ್ ವರ್ಮಾ, ನಟ ತೇಜಾ ಸಜ್ಜಾ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ತೆಲುಗಿನ ‘ಹನುಮಾನ್’ (2024) ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ಪ್ರಶಾಂತ್ ವರ್ಮಾ, ನಟ ರಿಷಬ್ ಶೆಟ್ಟಿ ಜತೆಗೂಡಿ ಚಿತ್ರದ ಪ್ರೀಕ್ವೆಲ್ ‘ಜೈ ಹನುಮಾನ್’ ಘೋಷಿಸಿದ್ದರು. ಆದರೆ, ಮೊದಲ ಭಾಗ ನಿರ್ಮಿಸಿದ್ದ ನಿರ್ಮಾಪಕರನ್ನು ಕೈಬಿಟ್ಟು ಬೇರೊಂದು ಸಂಸ್ಥೆ ಜತೆಗೂಡಿ ಚಿತ್ರ ಘೋಷಿಸಿದ್ದು, ಚರ್ಚೆಗೆ ಕಾರಣವಾಗಿತ್ತು.

ನಿರ್ದೇಶಕ ಪ್ರಶಾಂತ್ ವರ್ಮಾ, ನಟ ತೇಜಾ ಸಜ್ಜಾ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ತೆಲುಗಿನ ‘ಹನುಮಾನ್’ (2024) ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ಪ್ರಶಾಂತ್ ವರ್ಮಾ, ನಟ ರಿಷಬ್ ಶೆಟ್ಟಿ ಜತೆಗೂಡಿ ಚಿತ್ರದ ಪ್ರೀಕ್ವೆಲ್ ‘ಜೈ ಹನುಮಾನ್’ ಘೋಷಿಸಿದ್ದರು. ಆದರೆ, ಮೊದಲ ಭಾಗ ನಿರ್ಮಿಸಿದ್ದ ನಿರ್ಮಾಪಕರನ್ನು ಕೈಬಿಟ್ಟು ಬೇರೊಂದು ಸಂಸ್ಥೆ ಜತೆಗೂಡಿ ಚಿತ್ರ ಘೋಷಿಸಿದ್ದು, ಚರ್ಚೆಗೆ ಕಾರಣವಾಗಿತ್ತು. ಇನ್ನು ಕೆಲ ತಿಂಗಳ ಹಿಂದೆ ‘ಜೈ ಹನುಮಾನ್’ ಸೆಟ್ಟೇರಿದ್ದು, ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ವರ್ಷ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ. ಹೀಗಿರುವಾಗಲೇ, ‘ಹನುಮಾನ್’ ನಿರ್ಮಿಸಿದ್ದ ಮೂಲ ನಿರ್ಮಾಣ ಸಂಸ್ಥೆಯು ಇದೀಗ ಹೊಸ ನಾಯಕ ಮತ್ತು ನಿರ್ದೇಶಕನ ಜತೆಗೂಡಿ ಮೊದಲ ಚಿತ್ರದ ಸೀಕ್ವೆಲ್ ‘ಹನುಮಾನ್ 2: ದ ರೈಸ್ ಆ್ ವಾನರಾಸ್’ ಘೋಷಿಸುವ ಮೂಲಕ ನಿರ್ದೇಶಕ ಪ್ರಶಾಂತ್ ವರ್ಮಾಗೆ ಸೆಡ್ಡು ಹೊಡೆದಿದೆ. ಆ ಮೂಲಕ ಟಾಲಿವುಡ್‌ನಲ್ಲಿ ‘ಹನುಮಾನ್ 2: ದ ರೈಸ್ ಆಫ್​ ವಾನರಾಸ್’ ವರ್ಸಸ್ ‘ಜೈ ಹನುಮಾನ್’ ಕಾಳಗಕ್ಕೆ ವೇದಿಕೆ ಸಿದ್ಧವಾದಂತಾಗಿದೆ. ಇನ್ನು ಹೊಸದಾಗಿ ಘೋಷಣೆಯಾಗಿರುವ ‘ಹನುಮಾನ್ 2: ದ ರೈಸ್ ಆಫ್ ವಾನರಾಸ್’ ಮೊದಲ ಭಾಗದ ಮುಂದುವರಿದ ಕಥೆಯಾಗಿರಲಿದೆ ಎಂದು ಸಂಸ್ಥೆ ತಿಳಿಸಿದೆ. ಹಾಗೆಯೇ, ತೇಜಾ ಸಜ್ಜಾ ಜಾಗಕ್ಕೆ ಬೇರೊಬ್ಬ ನಟನ ಆಯ್ಕೆಯಾಗಿದ್ದು, ಸೀಕ್ವೆಲ್‌ನಲ್ಲಿ ಪಂಜ ವೈಷ್ಣವ್ ತೇಜಾ ನಾಯಕನಾಗಿ ಅಭಿನಯಿಸಲಿದ್ದಾರೆ. ಪ್ರಶಾಂತ್ ವರ್ಮಾ ಬದಲಿಗೆ ತೆಲುಗಿನ ‘ಡಿಸ್ಕೋ ರಾಜಾ’ ಖ್ಯಾತಿಯ ವಿಐ ಆನಂದ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಬೆಳವಣಿಗೆ ಎರಡು ಚಿತ್ರತಂಡಗಳ ಬಲಾಬಲಕ್ಕೆ ಕಾರಣವಾಗಲಿದೆ ಎಂಬ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.-ಏಜೆನ್ಸೀಸ್