ನಟಿ ಭಾಗ್ಯಶ್ರೀ ಬೋರ್ಸೆ 
ಟಾಲಿವುಡ್

ಬೋಲ್ಡ್​ ಭಾಗ್ಯಶ್ರೀ ಬೋರ್ಸೆ: ಲೆನಿನ್​ ಸುಂದರಿಯ ಹಾಟ್​ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು..! Bhagyashri Borse

'ಚಂದು ಚಾಂಪಿಯನ್' ಚಿತ್ರದ ಮೂಲಕ ಗಮನ ಸೆಳೆದು, ಇತ್ತೀಚೆಗೆ ನಟ ಅಖಿಲ್​ ಅಕ್ಕಿನೇನಿ ಅಭಿನಯದ 'ಲೆನಿನ್' ಚಿತ್ರದ ಯಶಸ್ಸನ್ನು ಆನಂದಿಸುತ್ತಿರುವ ಯುವ ಪ್ರತಿಭೆ ನಟಿ ಭಾಗ್ಯಶ್ರೀ ಬೋರ್ಸೆ ( Bhagyashri Borse ) ಇದೀಗ ಹೊಸ ಫೋಟೋಶೂಟ್​ ಮೇಲೆ ಸದ್ದು ಮಾಡುತ್ತಿದ್ದಾರೆ.

ವಿಜಯವಾಣಿ ಸುದ್ದಿ ಜಾಲ

ಸ್ಟೈಲಿಶ್ ಲುಕ್​

ತನ್ನ ಮನಮೋಹಕ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ನಟಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಗ್ಲಾಮರಸ್ ಹಾಗೂ ಸ್ಟೈಲಿಶ್ ಫೋಟೋಗಳು ಈಗ ಸಿನಿರಂಗದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ತಮಿಳು ಚಿತ್ರರಂಗದಲ್ಲಿ ಬಿಜಿ

ದುಲ್ಕರ್ ಸಲ್ಮಾನ್ ಜೊತೆಗಿನ 'ಕಾಂತ' ಚಿತ್ರದ ಬಳಿಕ, ಶಿವಕಾರ್ತಿಕೇಯನ್ ನಾಯಕನಾಗಿ ನಟಿಸುತ್ತಿರುವ 'ಸೇಯಾನ್' (Seyon) ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕಮಲ್ ಹಾಸನ್ ನಿರ್ಮಾಣದ ಚಿತ್ರ

ಶಿವಕುಮಾರ್ ಮುರುಗೇಶನ್ ನಿರ್ದೇಶನದ, ಗ್ರಾಮೀಣ ಹಿನ್ನೆಲೆಯ ಆಕ್ಷನ್ ಡ್ರಾಮಾ ಚಿತ್ರವಾಗಿರುವ 'ಸೇಯಾನ್' ಅನ್ನು ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆಯು ನಿರ್ಮಿಸುತ್ತಿದೆ.

ಮಾಡೆಲ್​ ರಂಗದಲ್ಲಿ ಸಕ್ರಿಯ

ನಟನೆಯ ಜೊತೆಗೆ ಮಾಡೆಲಿಂಗ್ ರಂಗದಲ್ಲೂ ಸಕ್ರಿಯರಾಗಿರುವ ಇವರು, ಪ್ರಮುಖ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಟೈಲಿಶ್ ಫ್ಯಾಷನ್ ಸೆನ್ಸ್

ಕಪ್ಪು ಬಣ್ಣದ ಹ್ಯಾಲ್ಟರ್ ನೆಕ್ ಉಡುಗೆ, ಸೂಕ್ಷ್ಮವಾದ ಚೋಕರ್ ಹಾಗೂ ನ್ಯಾಚುರಲ್ ಮೇಕಪ್‌ನಲ್ಲಿ ಇತ್ತೀಚೆಗೆ ಫೋಟೋಶೂಟ್ ನಡೆಸಿ ಗ್ಲಾಮರ್ ಲುಕ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ದಕ್ಷಿಣ ಭಾರತದಲ್ಲಿ ಕ್ರೇಜ್

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಅಲ್ಪಾವಧಿಯಲ್ಲೇ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.

ಪ್ರಕೃತಿ ಪ್ರೇಮಿ

ಹೊರಾಂಗಣ ಹಾಗೂ ಹಸಿರು ಪರಿಸರದಲ್ಲಿ ಫೋಟೋಶೂಟ್ ನಡೆಸಿ ತಮ್ಮ ನೈಸರ್ಗಿಕ ಶೈಲಿಯ ಸೌಂದರ್ಯವನ್ನು ವ್ಯಕ್ತಪಡಿಸಲು ಹೆಚ್ಚು ಇಷ್ಟಪಡುತ್ತಾರೆ.