ಸಾಂದರ್ಭಿಕ ಚಿತ್ರ  
ಟೆಕ್ನಾಲಜಿ

ನೀವಿದನ್ನು ಮಾಡ್ತಿದ್ರೆ ಇಂದೇ ನಿಲ್ಲಿಸಿ... ಮುನ್ಸೂಚನೆ ಇಲ್ಲದೇ ನಿಮ್ಮ ವಾಟ್ಸ್​ಆ್ಯಪ್ ಬ್ಲಾಕ್​ ಆಗಬಹುದು ಎಚ್ಚರ! Whatsapp

ಪ್ರಮುಖ ಮುಖ್ಯಾಂಶಗಳು

  • ಇಂದು ಮೊಬೈಲ್​ ಬಳಕೆದಾರರಿಗೆ ವಾಟ್ಸ್​ಆ್ಯಪ್​ ಒಂದು ಪರಿಚಿತ ಅಪ್ಲಿಕೇಶನ್
  • ಯಾವುದೇ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ವಾಟ್ಸ್​ಆ್ಯಪ್ ಬೇಕೇ ಬೇಕು
  • ಮುನ್ಸೂಚನೆಯನ್ನು ನೀಡದೇ ನಿಮ್ಮ ವಾಟ್ಸ್​ಆ್ಯಪ್​ ಖಾತೆ ಬ್ಲಾಕ್​ ಆಗುತ್ತೆ ಎಚ್ಚರ
  • ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮೆಟಾ ಹೇಳುತ್ತದೆ
ನವದೆಹಲಿ: ಊರಿಗೆ ಬಂದವರು ನೀರಿಗೆ ಬಾರದೇ ಇರುತ್ತಾರಾ ಅನ್ನೋ ಮಾತನ್ನು ಡಿಜಿಟಲ್​ ಲೋಕಕ್ಕೆ ಅಪ್ಲೈ ಮಾಡುವುದಾದರೆ, ಸ್ಮಾರ್ಟ್‌ಫೋನ್ ತೆಗೆದುಕೊಂಡ ಮೇಲೆ ವಾಟ್ಸ್​ಆ್ಯಪ್​ ( Whatsapp ) ಗೆ ಬಾರದೇ ಇರುತ್ತಾರಾ ಎನ್ನಬಹುದು. ಇಂದು ಮೊಬೈಲ್​ ಬಳಕೆದಾರರಿಗೆ ವಾಟ್ಸ್​ಆ್ಯಪ್​ ಒಂದು ಪರಿಚಿತ ಅಪ್ಲಿಕೇಶನ್ ಆಗಿದೆ. ಎಷ್ಟರ ಮಟ್ಟಿಗೆ ಅಂದರೆ, ದಿನನಿತ್ಯದಲ್ಲಿ ಮನುಷ್ಯನನ್ನು ಆವರಿಸಿಕೊಂಡಿದೆ.
ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಮೆಸೇಜ್​ಗಳನ್ನು ಕಳುಹಿಸಲು ಮತ್ತು ಯಾವುದೇ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ವಾಟ್ಸ್​ಆ್ಯಪ್ ಬೇಕೇ ಬೇಕು. ಅಷ್ಟರಮಟ್ಟಿಗೆ ವಾಟ್ಸ್​ಆ್ಯಪ್​ಗೆ ಎಲ್ಲರೂ ಅಡಿಕ್ಟ್​ ಆಗಿದ್ದಾರೆ. ಹೀಗಿರುವಾಗ ಯಾವುದೇ ಮುನ್ಸೂಚನೆಯನ್ನು ನೀಡದೇ ನಿಮ್ಮ ವಾಟ್ಸ್​ಆ್ಯಪ್​ ಖಾತೆಯನ್ನು ಇದ್ದಕ್ಕಿದ್ದಂತೆ ಶಾಶ್ವತವಾಗಿ ಬ್ಲಾಕ್​ ಮಾಡಿದರೆ ಏನಾಗಬಹುದು? ಆ ರೀತಿ ಮಾಡಲು ಸಾಧ್ಯವೇ ಇಲ್ಲ ಅನಿಸಬಹುದು ಆದರೆ, ಸಾಧ್ಯತೆ ಇದೆ ಎನ್ನುತ್ತವೆ ವರದಿಗಳು.
ಹೌದು, ಎಲ್ಲರಿಗೂ ಈ ಸಮಸ್ಯೆ ಬರಬಾರದು ಅಂದರೆ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮೆಟಾ ಹೇಳುತ್ತದೆ. ವಾಟ್ಸ್​ಆ್ಯಪ್​ ಹೆಸರಲ್ಲಿ ಹೆಚ್ಚುವರಿ ಫೀಚರ್​ಗಳನ್ನು ಒಳಗೊಂಡಿರುವ ಥರ್ಡ್​ ಪಾರ್ಟಿ ಅಪ್ಲಿಕೇಶನ್‌ಗಳ ವಿರುದ್ಧ ಮೆಟಾ ಕಂಪನಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇದು ವಾಟ್ಸ್ಆ್ಯಪ್​ ಪ್ಲಸ್ ಮತ್ತು ವಾಟ್ಸ್​ಆ್ಯಪ್​ ಜಿಬಿ ಪ್ಲಸ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವ ಬಳಕೆದಾರರಿಗೆ ಅನ್ವಯಿಸುತ್ತದೆ. ಕಾರಣವೆಂದರೆ ಅಂತಹ ಅಪ್ಲಿಕೇಶನ್‌ಗಳು ಸುರಕ್ಷಿತವಾಗಿಲ್ಲ ಮತ್ತು ನಿಮ್ಮ ಹೆಚ್ಚಿನ ಪ್ರಮಾಣದ ಡೇಟಾವನ್ನು ವ್ಯರ್ಥ ಮಾಡುತ್ತವೆ ಎಂದು ಮೆಟಾ ಎಚ್ಚರಿಕೆ ನೀಡಿದೆ.
ಈ ಅಪ್ಲಿಕೇಶನ್‌ಗಳಲ್ಲಿ ಸ್ವಯಂ ಪ್ರತ್ಯುತ್ತರಗಳು ಮತ್ತು ಚಾಟ್ ಶೆಡ್ಯೂಲಿಂಗ್ ಫೀಚರ್​ಗಳು ಕೂಡ ಇವೆ. ವಾಟ್ಸ್​ಆ್ಯಪ್​ ನೀತಿಯ ಪ್ರಕಾರ, ಥರ್ಡ್​ ಪಾರ್ಟಿ ಅಪ್ಲಿಕೇಶನ್‌ಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ನೀವು ಅಂತಹ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವುದು ಕಂಪನಿಯ ಗಮನಕ್ಕೆ ಬಂದರೆ, ತಕ್ಷಣ ನಿಮ್ಮ ವಾಟ್ಸ್​ಆ್ಯಪ್​ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಲಾಗುತ್ತದೆ. ಏಕೆಂದರೆ, ಅವು ಅನಧಿಕೃತ ಅಪ್ಲಿಕೇಶನ್​ಗಳು. ಆ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ. ಸದ್ಯ ವಾಟ್ಸ್​ಆ್ಯಪ್​ ಒದಗಿಸಿದ ಮಾಹಿತಿಯ ಪ್ರಕಾರ, ಭಾರತದಿಂದ 20,70,000 ವಾಟ್ಸ್​ಆ್ಯಪ್​ ಖಾತೆಗಳನ್ನು ನಿಷೇಧಿಸಲಾಗಿದೆ.

ಇತರ ಕಾರಣಗಳು

1. ನೀವು ಅಪರಿಚಿತ ಸಂಖ್ಯೆಗಳಿಂದ ನಿರಂತರವಾಗಿ ಪ್ರಮೋಷನಲ್​ ಮಸೇಜ್​ಗಳನ್ನು ಸ್ವೀಕರಿಸಿದರೂ ನಿಮ್ಮ ವಾಟ್ಸ್​ಆ್ಯಪ್ ಖಾತೆ ಬ್ಲಾಕ್​ ಆಗುತ್ತದೆ.

2. ನೀವು WhatsApp ಮೂಲಕ ನಿರಂತರವಾಗಿ ಪ್ರಮೋಷನಲ್ ಮೆಸೇಜ್​ಗಳನ್ನು ಕಳುಹಿಸಿದರು ಕೂಡ ನಿಮ್ಮ ಖಾತೆಯನ್ನು ನಿರ್ಬಂಧಿಸಬಹುದು.​

3. ನೀವು ವಾಟ್ಸ್​ಆ್ಯಪ್​ ಮೂಲಕ ನಿಂದನೀಯ ಮಸೇಜ್​ಗಳು, ಬೇರೆಯವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು, ಇನ್ನೊಬ್ಬರಿಗೆ ಬೆದರಿಕೆ ಹಾಕುವುದು ಮತ್ತು ದ್ವೇಷ ಭಾಷಣದಂತಹ ಹಾನಿಕಾರಕ ವಿಷಯವನ್ನು ಪದೇ ಪದೇ ಹಂಚಿಕೊಂಡರೆ, ನಿಮ್ಮ ಖಾತೆಯನ್ನು ನಿಷೇಧಿಸಬಹುದು.
ಒಂದು ವೇಳೆ ನಿಮ್ಮ WhatsApp ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೆ, ಸ್ವಲ್ಪ ಸಮಯದ ನಂತರ ನೀವು ಅದನ್ನು ಮರುಸ್ಥಾಪಿಸಬಹುದು. ಆದರೆ ನೀವು ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದರೆ, ನಿಮ್ಮ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಲಾಗುತ್ತದೆ. ಈ ರೀತಿ ನಿಮ್ಮನ್ನು ನಿರ್ಬಂಧಿಸಿದರೆ, ನಿಮ್ಮ ಖಾತೆಯನ್ನು ಮರಳಿ ಪಡೆಯಲು ನೀವು WhatsApp ಸಪೋರ್ಟ್​ಗೆ ಮೇಲ್ ಮಾಡಬೇಕಾಗುತ್ತದೆ. ಖಾತೆಯನ್ನು ಪರಿಶೀಲಿಸಿದ ನಂತರ ನಿಮ್ಮ ಖಾತೆ ಸಕ್ರಿಯವಾಗಬಹುದು, (ಏಜೆನ್ಸೀಸ್​).