Battery Charging ​ 
ಟೆಕ್ನಾಲಜಿ

ಈ ರೀತಿ ಚಾರ್ಚ್​ ಮಾಡಿದ್ರೆ ಹೊಸ ಫೋನ್​ ಖರೀದಿಸುವ ಅವಶ್ಯಕತೆಯೇ ಇರಲ್ಲ! ಇಲ್ಲಿದೆ ನೋಡಿ ಸಿಂಪಲ್​ ಟ್ರಿಕ್ | Battery Charging ​

ಮೋಹನ್​ ಶೆಟ್ಟಿ

ಪ್ರಮುಖ ಮುಖ್ಯಾಂಶಗಳು

  • ಡಿಜಿಲಟ್​ ಯುಗದಲ್ಲಿ ಈಗ ಎಲ್ಲವೂ ಸ್ಮಾರ್ಟ್​
  • ಊಟವಿಲ್ಲದೆ ಬದುಕಬಲ್ಲ ಜನರು ಸ್ಮಾರ್ಟ್‌ಫೋನ್‌ ಇಲ್ಲದೆ ಇರಲಾರರು
  • ಬ್ಯಾಟರಿ ಸಮಸ್ಯೆ ಎದುರಿಸುವವರು ಈ ಸಣ್ಣ ಮಿಸ್ಟೇಕ್​ ತಪ್ಪಿಸಿ
ಬೆಂಗಳೂರು: ಡಿಜಿಲಟ್​ ಯುಗದಲ್ಲಿ ಈಗ ಎಲ್ಲವೂ ಸ್ಮಾರ್ಟ್​ ಅಂಡ್​ ಸೆಕ್ಯೂರ್. ಅದರಲ್ಲೂ, ಸ್ಮಾರ್ಟ್‌ಫೋನ್‌ಗಳ ಬಳಕೆಯಂತು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ (Battery Charging). ಜಾಗತಿಕವಾಗಿ ಆರು ಇಂಚಿನ ವಿಶಿಷ್ಟ ಡಿಸೈನ್​ನೊಳಗೊಂಡ ದುಬಾರಿ ಮೊಬೈಲ್​ಗಳ ಮಾರಾಟ ಕೂಡ ದುಪ್ಪಟ್ಟಾಗಿವೆ. ಖರೀದಿಸಲು ಜನರು ನಾ ಮುಂದು ತಾ ಮುಂದು ಎಂದು ಮಾರುಕಟ್ಟೆಗಳಲ್ಲಿ ಮುಗಿಬೀಳುತ್ತಿದ್ದಾರೆ. ಇದೊಂದು ರೀತಿ ದುರಂತವೇ ಸರಿ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಸ್ಮಾರ್ಟ್​ಫೋನ್​ ಬಳಸುವ ಜನರು ಏಕೆ ಇನ್ನೂ ಸ್ಮಾರ್ಟ್​ ಆಗಿಲ್ಲ ಅನ್ನೋದೇ ಬೇಸರದ ಸಂಗತಿ.
ತಿಂಡಿ-ಊಟ ಮಾಡ್ತೇವೋ ಇಲ್ಲವೋ! ಆದ್ರೆ, ಕೈಯಲ್ಲಿ ಆರು ಇಂಚಿನ ಸ್ಮಾರ್ಟ್​ಫೋನ್​ ಸದಾ ಇರಲೇಬೇಕು ಎಂಬ ಮನಸ್ಥಿತಿ ಜನರಲ್ಲಿ ಮೂಡಿಬಿಟ್ಟಿದೆ. ಬೆಳಗ್ಗೆ ಎಚ್ಚರಗೊಂಡ ಕ್ಷಣದಿಂದ ರಾತ್ರಿ ನಿದ್ರೆಗೆ ಜಾರುವವರೆಗೂ ಈ ಫೋನ್ ಬೇಕೇ ಬೇಕು. ಆ ಮಟ್ಟಿಗಿನ ಅಡಿಕ್ಷನ್​ ಜನರಲ್ಲಿ ಹೆಚ್ಚಿದೆ. ತಮ್ಮ ದಿನಚರಿಯ ಬಹುಪಾಲು ಸಮಯವನ್ನು ಸ್ಮಾರ್ಟ್​ಫೋನ್​ನೊಂದಿಗೆ ಕಳೆಯುವ ಮಂದಿ, ಅದರ ಬ್ಯಾಟರಿ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳುತ್ತಾರೆ. ಕಾರಣ, ರಾತ್ರಿಯೆಲ್ಲ ಫುಲ್​ ಚಾರ್ಚ್​ ಮಾಡಿದ್ರೂ ಸಂಜೆ ಆಗುವುದರೊಳಗೆ ಚಾರ್ಚ್​ ಖಾಲಿ ಆಗಿರುತ್ತದೆ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಇದರಿಂದ ಬೇಸತ್ತು, ಹೊಸ ಮೊಬೈಲ್​ಗಳ ಮೊರೆ ಹೋಗುವ ಬಳಕೆದಾರರು, ಪ್ರತಿದಿನ ಮಾಡುವ ಮಿಸ್ಟೇಕ್​ ಅನ್ನು ಸರಿಪಡಿಸಿಕೊಂಡರೆ, ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ.   
ಚಾರ್ಜಿಂಗ್ ವಿಷಯಕ್ಕೆ ಬಂದಾಗ ಅನೇಕರು ಮಾಡುವ ಸಣ್ಣ ತಪ್ಪಿದು.  ರಾತ್ರಿಯಿಡೀ ಫೋನ್​ ಅನ್ನು ಚಾರ್ಚ್​ಗೆ ಹಾಕುವುದರಿಂದ ನಿಮಗೆ ಅಪಾಯ ಕಟ್ಟಿಟ್ಟಬುತ್ತಿ. ಫುಲ್​ ಚಾರ್ಚ್​ ಮಾಡಿದ್ದರೂ ಬ್ಯಾಟರಿ ಉಳಿಯುತ್ತಿಲ್ಲ. ಇದರಲ್ಲೇನೋ ಸಮಸ್ಯೆಯಿದೆ. ಡಬ್ಬಾ ಫೋನ್​ ಎಂದು ನೀವು ಭಾವಿಸಿ, ಹೊಸ ಸ್ಮಾರ್ಟ್‌ಫೋನ್ ಮೊರೆ ಹೋದರೆ ಖಂಡಿತ ನಿಮಗೆ ನೀವೇ ಹಾಕಿಕೊಳ್ಳುವ ದಂಡವಿದು. ರಾತ್ರಿ ಪೂರ ಚಾರ್ಚಿಂಗ್ ಹಾಕುವ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ. ಇದೇ ಬ್ಯಾಟರಿ ಆರೋಗ್ಯವನ್ನು ಕ್ಷೀಣಿಸುತ್ತಿರುವುದು. 

ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಿನ ಒತ್ತಡ!

ಇಂದಿನ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಈ ಬ್ಯಾಟರಿಗಳು ಶೇ.100ರಷ್ಟು ಅಂದ್ರೆ ಫುಲ್​ ಚಾರ್ಜ್ ಆದ ಮೇಲೆ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತವೆ. ಇದು ಬ್ಯಾಟರಿಯಲ್ಲಿ ಕೆಮಿಕಲ್​ ಒತ್ತಡವನ್ನು ಜಾಸ್ತಿ ಮಾಡುತ್ತದೆ. ಹೀಗಾಗಿಯೇ, ಹಲವು ಫೋನ್​ಗಳ ಬ್ಯಾಟರಿಗಳು ಬೇಗ ಕೆಟ್ಟುಹೋಗುತ್ತದೆ. ಕೆಲವು ಊದಿಕೊಳ್ಳುತ್ತವೆ ಮತ್ತು ಇನ್ನೂ ಕೆಲವು ಸ್ಫೋಟಗೊಳ್ಳುತ್ತವೆ. 

100 ಪರ್ಸೆಂಟ್​ ಫುಲ್​ ಮೇಲೂ ಚಾರ್ಚ್ ಬೇಡ! 

ಬ್ಯಾಟರಿ ಫುಲ್ ಆದ ಮೇಲೂ ಚಾರ್ಚಿಂಗ್ ಮುಂದುವರಿಸಿದರೆ ಹಲವು ಫೋನ್​ಗಳಲ್ಲಿ ಶಾಖ ಉತ್ಪಾದನೆ ಆಗುತ್ತದೆ. ಈ ಅತಿಯಾದ ಶಾಖವು ಬ್ಯಾಟರಿಯನ್ನು ಡ್ಯಾಮೇಜ್​ ಮಾಡುವುದಲ್ಲದೇ, ಕೆಲವೊಮ್ಮೆ ಭಾರೀ ಸ್ಫೋಟಕ್ಕೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. 

ಹಾಗಿದ್ರೆ, ಎಷ್ಟಿದ್ದರೆ ಒಳ್ಳೆಯದು?

ತಜ್ಞರ ಪ್ರಕಾರ, ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಸಂಪೂರ್ಣವಾಗಿ ಬಳಕೆ ಮಾಡುವುದು ಅಥವಾ ಫುಲ್​ಗಿಂತಲೂ ಹೆಚ್ಚು ಅವಧಿ ಚಾರ್ಚ್​ ಮಾಡುವುದು ಸರಿಯಲ್ಲ. ಸಾಮಾನ್ಯವಾಗಿ, 80 ಪರ್ಸೆಂಟ್​ ಚಾರ್ಚ್​ ಇಟ್ಟುಕೊಳ್ಳುವುದು ಉತ್ತಮ ಎನ್ನಲಾಗಿದೆ. ಹೀಗೆ ಮಾಡುವುದರಿಂದ ಬ್ಯಾಟರಿ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ,(ಏಜೆನ್ಸೀಸ್).