Washing Machine Guide (ಸಾಂದರ್ಭಿಕ ಚಿತ್ರ) 
ಟೆಕ್ನಾಲಜಿ

ಹಣ ಉಳಿಸಲು ಹೋಗಿ ತಪ್ಪು ಮೆಷಿನ್ ಖರೀದಿಸಬೇಡಿ; ವಾಷಿಂಗ್ ಮೆಷಿನ್ ಖರೀದಿಯ ಗುಟ್ಟು ಇಲ್ಲಿದೆ! Washing Machine Guide

ಭಾನುಪ್ರಿಯ ಡಿ.ಕೆ

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನದಲ್ಲಿ ವಾಷಿಂಗ್​ ಮಿಷನ್​ ಎಂಬುದು ಕೇವಲ ಅನುಕೂಲಕ್ಕಾಗಿ ಮಾತ್ರವಲ್ಲ
  • ಕಾರ್ಯನಿರತ ಜೀವನಶೈಲಿಯಲ್ಲಿ ಇದು ಸಮಯವನ್ನು ಉಳಿಸುವುದಲ್ಲದೇ ಶ್ರಮವನ್ನು ಕಡಿಮೆ ಮಾಡುತ್ತದೆ
  • ಮಾರುಕಟ್ಟೆಯಲ್ಲಿ ಅರೆ-ಸ್ವಯಂಚಾಲಿತ ಮತ್ತು ಸಂಪೂರ್ಣ ಸ್ವಯಂಚಾಲಿತ ಎಂಬ ಎರಡು ಮಿಷನ್​ಗಳಿವೆ
Washing Machine Guide: ಇತ್ತೀಚಿನ ದಿನದಲ್ಲಿ ವಾಷಿಂಗ್​ ಮಿಷನ್​ ಎಂಬುದು ಕೇವಲ ಅನುಕೂಲಕ್ಕಾಗಿ ಮಾತ್ರವಲ್ಲ. ಇದು ಪ್ರತಿಯೊಬ್ಬ ಮನೆಯಲ್ಲೂ ಅಗತ್ಯವಾಗಿರುವಂತಹ ಸಾಧನ. ಹೆಚ್ಚುತ್ತಿರುವ ಕಾರ್ಯನಿರತ ಜೀವನಶೈಲಿಯಲ್ಲಿ ಇದು ಸಮಯವನ್ನು ಉಳಿಸುವುದಲ್ಲದೇ ಶ್ರಮವನ್ನು ಕೂಡಾ ಕಡಿಮೆ ಮಾಡುತ್ತದೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ಅರೆ-ಸ್ವಯಂಚಾಲಿತ ಮತ್ತು ಸಂಪೂರ್ಣ ಸ್ವಯಂಚಾಲಿತ ಎಂಬ ಎರಡು ಜನಪ್ರಿಯ ತೊಳೆಯುವ ಯಂತ್ರಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. 
ಎರಡೂ ಯಂತ್ರಗಳಿಗೆ ತನ್ನದೇ ಆದ ಅನುಕೂಲಗಳು ಮತ್ತು ಉಪಯೋಗಗಳಿವೆ. ನೀವೇನಾದರೂ ನಿಮ್ಮ ಮನೆಗೆ ತೊಳೆಯುವ ಯಂತ್ರವನ್ನು ತರಲು ಯೋಚಿಸುತ್ತಿದ್ದರೆ ಇವೆರಡೂ ಯಂತ್ರಗಳ ಬಗ್ಗೆ ಸ್ವಲ್ಪ ಗಮನಹರಿಸಿ.

ಅರೆ-ಸ್ವಯಂಚಾಲಿತ

ಅರೆ-ಸ್ವಯಂಚಾಲಿತ ಯಂತ್ರ ಎಂದರೆ ನೀವೇ ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಬೇಕು. ನೀವೇನಾದರೂ ಬಜೆಟ್​ ಫ್ರೆಂಡ್ಲಿ ಯಂತ್ರವನ್ನು ತೆಗೆದುಕೊಳ್ಳಲು ಬಯಸಿದರೆ ಈ ಯಂತ್ರ ಉತ್ತಮ ಆಯ್ಕೆಯಾಗಿದೆ. ಈ ಯಂತ್ರವು ಎರಡು ಪ್ರತ್ಯೇಕ ಟಬ್‌ಗಳನ್ನು ಹೊಂದಿದ್ದು, ಒಂದು ತೊಳೆಯಲು ಮತ್ತು ಇನ್ನೊಂದು ಒಣಗಿಸಲು ಇರುತ್ತದೆ. ನೀವೇ ನೀರನ್ನು ತುಂಬಿಸಿಕೊಳ್ಳಬೇಕು. ಜೊತೆಗೆ ತೊಳೆದ ಬಟ್ಟೆಗಳನ್ನು ವಾಶ್​ ಟಬ್​ನಿಂದ ಸ್ಪಿನ್​ ಟಬ್​ಗೆ ವರ್ಗಾಯಿಸಬೇಕು. 
ಆದಾಗ್ಯೂ, ಈ ಯಂತ್ರಗಳು ವಿದ್ಯುತ್ ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ದೀರ್ಘಾವಧಿಯಲ್ಲಿ ಅವು ಕಡಿಮೆ ವೆಚ್ಚದಾಯಕವಾಗುತ್ತವೆ. ಇದು ಸಣ್ಣ ಕುಟುಂಬಗಳಿಗೆ ಅಥವಾ ನೀರಿನ ಕೊರತೆಯಿರುವ ಪ್ರದೇಶಗಳಿಗೆ ಪ್ರಯೋಜನಕಾರಿಯಾಗಬಹುದು.

ಸಂಪೂರ್ಣ ಸ್ವಯಂಚಾಲಿತ

ಸಂಪೂರ್ಣ ಸ್ವಯಂಚಾಲಿತ ಎಂದರೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದು ಯಾವುದೇ ತೊಂದರೆಯಿಲ್ಲದೇ ಲಾಂಡ್ರಿ ಬಯಸಿದರೆ ಈ ಮಿಷನ್​ ಉಪಯುಕ್ತವಾಗಿದೆ. ಇದು ಒಂದೇ ಟಬ್‌ನಲ್ಲಿ ಬಟ್ಟೆಯನ್ನು ತೊಳೆಯುವುದರಿಂದ ಹಿಡಿದು ಒಣಗಿಸುವವರೆಗೂ ಎಲ್ಲವನ್ನೂ ನೋಡಿಕೊಳ್ಳುತ್ತದೆ ಮತ್ತು ಲಾಂಡ್ರಿ ಡಿಟರ್ಜೆಂಟ್​ ಸೇರಿಸಿ ಒಂದು ಬಟನ್​​ ಒತ್ತಿದರೆ ಸಾಕು ಯಂತ್ರವೇ ಎಲ್ಲವನ್ನೂ ಮಾಡುತ್ತದೆ. 
ಈ ಯಂತ್ರವು ಸ್ವಯಂಚಾಲಿತವಾಗಿ ನೀರನ್ನು ತುಂಬುತ್ತದೆ ಮತ್ತು ಹೊರಹಾಕುತ್ತದೆ. ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ. ಸಂಪೂರ್ಣ ಸ್ವಯಂಚಾಲಿತ ಯಂತ್ರಗಳು ಟಾಪ್​ ಲೋಡ್​ ಮತ್ತು ಫ್ರಂಟ್​ ಲೋಡ್​ ರೂಪಾಂತರಗಳಲ್ಲಿ ಲಭ್ಯವಿದೆ. ಈ ಯಂತ್ರಗಳು ವಿಭಿನ್ನ ವಾಶ್​ ಪ್ರೊಗ್ರಾಂಗಳನ್ನು ಮತ್ತು ಸ್ಮಾರ್ಟ್​ ನಿಯಂತ್ರಣಗಳಂತಹ ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಯಾವ ಯಂತ್ರ ಉತ್ತಮವಾಗಿರುತ್ತದೆ?

ನೀವು ವಾಷಿಂಗ್ ಮಿಷನ್​ ಆಯ್ಕೆ ಮಾಡುವಾಗ ನಿಮಗೆ ಯಾವುದು ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಕಡಿಮೆ ಬಜೆಟ್​ನಲ್ಲಿ ಯೋಚಿಸುತ್ತಿದ್ದರೆ, ಅರೆ-ಸ್ವಯಂಚಾಲಿತ ಯಂತ್ರವನ್ನು ತೆಗೆದುಕೊಳ್ಳಿ. ಅನುಕೂಲತೆ, ಸಮಯ ಉಳಿತಾಯ ಮತ್ತು ಆಧುನಿಕ ವೈಶಿಷ್ಟ್ಯಗಳಿಗೆ ಆದ್ಯತೆ ನೀಡಿದರೆ, ಸಂಪೂರ್ಣ ಸ್ವಯಂಚಾಲಿತ ಯಂತ್ರವು ಉತ್ತಮವಾಗಿರುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.