ಬೆಂಗಳೂರು: ನಿಮ್ಮಹಳೆಯ ಸ್ಮಾರ್ಟ್‌ಫೋನ್(SmartPhone) ಮತ್ತೆ ಹೊಸದರಂತೆ ವೇಗವಾಗಿ ಕೆಲಸ ಮಾಡಬೇಕೇ? ಹಾಗಿದ್ದರೆ, ತಜ್ಞರುಸೂಚಿಸುವ ಈ ಸರಳ ಹಾಗೂ ಪರಿಣಾಮಕಾರಿ ಸಲಹೆಗಳನ್ನು ಪಾಲಿಸಿ.
ಸ್ಮಾರ್ಟ್‌ಫೋನ್ಹಳೆಯದಾದಂತೆಲ್ಲಾ ಅದರ ವೇಗ ತಗ್ಗುವುದು ಸಹಜ ಎಂದು ನಾವು ಭಾವಿಸುತ್ತೇವೆ. ಆದರೆ, ಸರಿಯಾದ ನಿರ್ವಹಣೆಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ. ನಿಮ್ಮ ಫೋನ್ ಅನ್ನು ಸೂಪರ್ ಫಾಸ್ಟ್ ಮಾಡಲು ಈಕೆಳಗಿನ ಕ್ರಮಗಳನ್ನು ಅನುಸರಿಸಿ.
1. ಸಾಫ್ಟ್‌ವೇರ್ಮತ್ತು ಆಪ್‌ಗಳನ್ನು ಅಪ್‌ಡೇಟ್ ಮಾಡಿ
ಫೋನ್‌ನಲ್ಲಿಸಾಫ್ಟ್‌ವೇರ್ ಅಪ್‌ಡೇಟ್ ಬಂದಾಗ ಅದನ್ನು ನಿರ್ಲಕ್ಷಿಸಬೇಡಿ. ಅಪ್‌ಡೇಟ್‌ಗಳು ಕೇವಲ ಹೊಸ ಫೀಚರ್‌ಗಳನ್ನುಮಾತ್ರವಲ್ಲದೆ, ಫೋನ್‌ನ ವೇಗವನ್ನು ಹೆಚ್ಚಿಸುವ 'ಬಗ್ ಫಿಕ್ಸ್'ಗಳನ್ನು ಒಳಗೊಂಡಿರುತ್ತವೆ. ಅಲ್ಲದೆ,ಇದು ನಿಮ್ಮ ಫೋನ್ ಅನ್ನು ಸೈಬರ್ ದಾಳಿಗಳಿಂದ ರಕ್ಷಿಸುತ್ತದೆ.
2. ಬ್ಲೂಟೂತ್ಮತ್ತು ಲೊಕೇಶನ್ ಆಫ್ ಮಾಡಿ
ನಮಗೆ ಅರಿವಿಲ್ಲದಂತೆಬ್ಲೂಟೂತ್, ವೈ-ಫೈ ಮತ್ತು ಲೈವ್ ಲೊಕೇಶನ್ ಫೀಚರ್‌ಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತವೆ.ಇದು ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುವುದಲ್ಲದೆ, ಪ್ರೊಸೆಸರ್ ಮೇಲೆ ಒತ್ತಡ ಹೇರುತ್ತದೆ. ಕೆಲಸ ಮುಗಿದನಂತರ ಇವುಗಳನ್ನು ಆಫ್ ಮಾಡುವುದರಿಂದ ಫೋನ್ ಸುಗಮವಾಗಿ ಚಲಿಸುತ್ತದೆ.
3. ಸ್ಟೋರೇಜ್ಕಡೆ ಗಮನವಿರಲಿ
ಫೋನ್‌ನ ಮೆಮೊರಿ(Storage) ಶೇ. 80ಕ್ಕಿಂತ ಹೆಚ್ಚು ತುಂಬಿದಾಗ ಫೋನ್ ಹ್ಯಾಂಗ್ ಆಗಲು ಶುರುವಾಗುತ್ತದೆ. ಬಳಸದ ಅಪ್ಲಿಕೇಶನ್‌ಗಳನ್ನುಅನ್‌ಇನ್‌ಸ್ಟಾಲ್ ಮಾಡಿ. ನಕಲಿ (Duplicate) ಫೋಟೋಗಳು ಮತ್ತು ದೊಡ್ಡ ವೀಡಿಯೊ ಫೈಲ್‌ಗಳನ್ನು ಅಳಿಸಿಹಾಕಿ. ಸ್ಟೋರೇಜ್ ಮುಕ್ತವಾದಷ್ಟೂ ಫೋನ್ ವೇಗ ಹೆಚ್ಚುತ್ತದೆ.
4. ಫೋನ್ರಿಸ್ಟಾರ್ಟ್ ಮಾಡಿ
ನಿಮ್ಮ ಫೋನ್ಇದ್ದಕ್ಕಿದ್ದಂತೆ ನಿಧಾನವಾದರೆ ಅಥವಾ ಆಪ್‌ಗಳು ಓಪನ್ ಆಗಲು ಸಮಯ ತಗೆದುಕೊಂಡರೆ, ಒಮ್ಮೆ ಫೋನ್ ಅನ್ನು'ರಿಸ್ಟಾರ್ಟ್' (Restart) ಮಾಡಿ. ಇದು ಹಿನ್ನೆಲೆಯಲ್ಲಿ ಅನಗತ್ಯವಾಗಿ ನಡೆಯುತ್ತಿರುವ ಪ್ರಕ್ರಿಯೆಗಳನ್ನುನಿಲ್ಲಿಸಿ, ತಾತ್ಕಾಲಿಕ ದೋಷಗಳನ್ನು ಸರಿಪಡಿಸುತ್ತದೆ.
5. ಫ್ಯಾಕ್ಟರಿರೀಸೆಟ್ (ಕೊನೆಯ ಆಯ್ಕೆ)
ಯಾವುದೇ ವಿಧಾನಕೆಲಸ ಮಾಡದಿದ್ದಾಗ 'ಫ್ಯಾಕ್ಟರಿ ರೀಸೆಟ್' (Factory Reset) ಮಾಡುವುದು ಉತ್ತಮ. ಇದು ನಿಮ್ಮ ಫೋನ್ಅನ್ನು ಕೊಂಡುಕೊಂಡಾಗ ಇದ್ದ ಹೊಸ ಸ್ಥಿತಿಗೆ ಮರಳಿಸುತ್ತದೆ.
ಗಮನಿಸಿ: ಫ್ಯಾಕ್ಟರಿರೀಸೆಟ್ ಮಾಡುವ ಮೊದಲು ನಿಮ್ಮ ಎಲ್ಲಾ ಪ್ರಮುಖ ಫೋಟೋ ಮತ್ತು ಫೈಲ್‌ಗಳನ್ನು ಬ್ಯಾಕಪ್ ಮಾಡಿಕೊಳ್ಳಿ,ಏಕೆಂದರೆ ಇದು ಫೋನ್‌ನಲ್ಲಿರುವ ಎಲ್ಲಾ ಡೇಟಾವನ್ನು ಅಳಿಸಿಹಾಕುತ್ತದೆ,(ಏಜೆನ್ಸೀಸ್).