Mr. Prakhar Aggarwal, Vice President - Marketing & Sales, Tata Steel Colors Pvt. Ltd, Mr. T V Narendran, CEO and Managing Director, Tata Steel Limited, Mr. Praveen Venugopalan Thampi, Managing Director 
ಟೆಕ್ನಾಲಜಿ

ಟಾಟಾ ಸ್ಟೀಲ್ ಕಲರ್ಸ್‌ನಿಂದ ಭಾರತದಲ್ಲಿ ಕಲರ್‌ಕೋಟ್ ಪ್ರಿ-ಪೇಂಟೆಡ್ ಸ್ಟೀಲ್ ಪರಿಚಯ

ಟಾಟಾ ಸ್ಟೀಲ್ ಕಲರ್ಸ್ ಪ್ರೈವೇಟ್ ಲಿಮಿಟೆಡ್ (TSCPL) ಇಂದು ಭಾರತದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ಕಲರ್‌ಕೋಟ್® ಪ್ರಿ-ಪೇಂಟೆಡ್ ಸ್ಟೀಲ್ ಉತ್ಪನ್ನಗಳ ಶ್ರೇಣಿಯನ್ನು ಪರಿಚಯಿಸುವುದಾಗಿ ಘೋಷಿಸಿದೆ. ದಶಕಗಳ ಯುರೋಪಿಯನ್ ಪರಿಣತಿ, ಸುಧಾರಿತ ತಂತ್ರಜ್ಞಾನ ಮತ್ತು ಸಾಬೀತಾದ ಕಟ್ಟಡಗಳ ಹೊರಾವರಣ ಪರಿಹಾರಗಳನ್ನು ದೇಶದ ಬೆಳೆಯುತ್ತಿರುವ ಮೂಲಸೌಕರ್ಯ ವಲಯಕ್ಕೆ ತರುವ ಉದ್ದೇಶವನ್ನು ಕಂಪನಿ ಹೊಂದಿದೆ.

ಬೆಂಗಳೂರು: ಟಾಟಾ ಸ್ಟೀಲ್ ಕಲರ್ಸ್ ಪ್ರೈವೇಟ್ ಲಿಮಿಟೆಡ್ (TSCPL) ಇಂದು ಭಾರತದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ಕಲರ್‌ಕೋಟ್® ಪ್ರಿ-ಪೇಂಟೆಡ್ ಸ್ಟೀಲ್ ಉತ್ಪನ್ನಗಳ ಶ್ರೇಣಿಯನ್ನು ಪರಿಚಯಿಸುವುದಾಗಿ ಘೋಷಿಸಿದೆ. ದಶಕಗಳ ಯುರೋಪಿಯನ್ ಪರಿಣತಿ, ಸುಧಾರಿತ ತಂತ್ರಜ್ಞಾನ ಮತ್ತು ಸಾಬೀತಾದ ಕಟ್ಟಡಗಳ ಹೊರಾವರಣ ಪರಿಹಾರಗಳನ್ನು ದೇಶದ ಬೆಳೆಯುತ್ತಿರುವ ಮೂಲಸೌಕರ್ಯ ವಲಯಕ್ಕೆ ತರುವ ಉದ್ದೇಶವನ್ನು ಕಂಪನಿ ಹೊಂದಿದೆ.

ಭಾರತದ ಹವಾಮಾನಕ್ಕೆ ಅನುಗುಣವಾಗಿ ಸುಧಾರಿತ ಲೇಪನ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾದ ಕಲರ್‌ಕೋಟ್® ಉತ್ಪನ್ನಗಳು ಬಾಳಿಕೆ, ಸೌಂದರ್ಯ, ಉಷ್ಣ ಕಾರ್ಯಕ್ಷಮತೆ ಮತ್ತು ಸುಸ್ಥಿರತೆಯನ್ನು ಒಟ್ಟುಗೂಡಿಸುತ್ತವೆ. ವಿವಿಧ ಕಟ್ಟಡ ನಿರ್ಮಾಣದ ಅಗತ್ಯಗಳನ್ನು ಪೂರೈಸುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರಕೃತಿಯ ಸೌಂದರ್ಯದಿಂದ ಪ್ರೇರಿತವಾಗಿರುವ ಕಲರ್‌ಕೋಟ್® ವೈವಿಧ್ಯಮಯ ಬಣ್ಣಗಳು ಮತ್ತು ಸಾಬೀತಾದ ಕಾರ್ಯಕ್ಷಮತೆಯ ಮೂಲಕ ಆಕರ್ಷಕ ಹಾಗೂ ಬಾಳಿಕೆ ಬರುವ ವಾಸ್ತುಶಿಲ್ಪಕ್ಕೆ ನೆರವಾಗುತ್ತದೆ.

ಬಿಸಿ ಮತ್ತು ಉಷ್ಣ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಇದರ ಸುಧಾರಿತ ಲೇಪನ ತಂತ್ರಜ್ಞಾನವು ಬಣ್ಣ ಮತ್ತು ಹೊಳಪಿನ ದೀರ್ಘಕಾಲೀನ ಸಂರಕ್ಷಣೆ, ತುಕ್ಕು ನಿರೋಧಕತೆ, ಕತ್ತರಿಸಿದ ಅಂಚುಗಳ ರಕ್ಷಣೆ, ಗೀರು ನಿರೋಧಕತೆ ಹಾಗೂ ದೀರ್ಘಕಾಲದ ಸೌಂದರ್ಯವನ್ನು ಒದಗಿಸುತ್ತದೆ. ವಿವಿಧ ಬಣ್ಣಗಳು ಮತ್ತು ಫಿನಿಷ್‌ಗಳ ಆಯ್ಕೆಯು ವಾಸ್ತುಶಿಲ್ಪಿಗಳು ಹಾಗೂ ಡೆವಲಪರ್‌ಗಳಿಗೆ ಹೆಚ್ಚಿನ ವಿನ್ಯಾಸ ಸ್ವಾತಂತ್ರ್ಯವನ್ನು ನೀಡುತ್ತದೆ.

ಜಮ್ಶೆಡ್‌ಪುರದಲ್ಲಿರುವ ಅತ್ಯಾಧುನಿಕ ಘಟಕದಲ್ಲಿ ತಯಾರಾಗುವ ಕಲರ್‌ಕೋಟ್® ಉತ್ಪನ್ನಗಳನ್ನು ಟಾಟಾ ಸ್ಟೀಲ್ ಕಲರ್ಸ್ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತಯಾರಿಸಿ, ವಿತರಿಸಿ ಹಾಗೂ ಮಾರುಕಟ್ಟೆ ಮಾಡಲಿದೆ. ಇದರಿಂದ ಜಾಗತಿಕ ತಂತ್ರಜ್ಞಾನ ಮತ್ತು ಪರಿಣತಿಯು ಸ್ಥಳೀಯವಾಗಿಯೇ ಲಭ್ಯವಾಗಲಿದೆ.

ಟಾಟಾ ಸ್ಟೀಲ್ ಕಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರವೀಣ್ ವಿ. ಥಂಪಿ ಅವರು ಮಾತನಾಡಿ, “ಭಾರತವು ಭವಿಷ್ಯದತ್ತ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ, ಕೈಗಾರಿಕೆಗಳು ಮತ್ತು ಸಮುದಾಯಗಳಿಗೆ ದೀರ್ಘಕಾಲೀನ ಬಾಳಿಕೆ, ವಿನ್ಯಾಸ ಮತ್ತು ಪರಿಸರ ಕಾರ್ಯಕ್ಷಮತೆ ಸೇರಿದಂತೆ ಎಲ್ಲ ಆಯಾಮಗಳಲ್ಲಿಯೂ ಉತ್ತಮ ಗುಣಮಟ್ಟದ ವಸ್ತುಗಳ ಅಗತ್ಯವಿದೆ.

ಜಾಗತಿಕ ಮಟ್ಟದ ಸುಧಾರಿತ ಪರಿಹಾರಗಳನ್ನು ಭಾರತೀಯ ಮೂಲಸೌಕರ್ಯ ವಲಯಕ್ಕೆ ಪರಿಚಯಿಸುವ ಮೂಲಕ ವಿಶ್ವಮಟ್ಟದ ಹೊಸ ಮಾನದಂಡಗಳನ್ನು ರೂಪಿಸಲು ನೆರವಾಗುವುದು ನಮ್ಮ ಉದ್ದೇಶವಾಗಿದೆ. ಜಾಗತಿಕವಾಗಿ ಮೆಚ್ಚುಗೆ ಪಡೆದ ಪರಿಹಾರಗಳನ್ನು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪರಿಚಯಿಸಲು ಟಾಟಾ ಸ್ಟೀಲ್ ಕಲರ್ಸ್ ಹೆಮ್ಮೆಪಡುತ್ತದೆ. ಇದರಿಂದ ವಾಸ್ತುಶಿಲ್ಪಿಗಳು ಮತ್ತು ನಿರ್ಮಾಣ ವಲಯದವರಿಗೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ರೂಪಿಸಲು ಸಾಧ್ಯವಾಗುತ್ತದೆ,” ಎಂದು ಹೇಳಿದರು.

ಕಲರ್‌ಕೋಟ್®ನ ಮೇಲ್ಛಾವಣಿ ಮತ್ತು ಗೋಡೆ ಹೊದಿಕೆ ಪರಿಹಾರಗಳು ಮೆಟ್ರೋ ಹಾಗೂ ಸಾರಿಗೆ ಮೂಲಸೌಕರ್ಯ, ಬಂದರುಗಳು ಮತ್ತು ಗೋದಾಮುಗಳು, ವಿತರಣಾ ಕೇಂದ್ರಗಳು, ಉತ್ಪಾದನಾ ಮತ್ತು ವಾಹನ ತಯಾರಿಕಾ ಘಟಕಗಳು, ವಾಣಿಜ್ಯ ಕಟ್ಟಡಗಳು, ರಕ್ಷಣಾ ವಲಯ ಹಾಗೂ ಆಧುನಿಕ ಸಾಂಸ್ಥಿಕ ಕಟ್ಟಡಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಳಕೆಗೆ ಸೂಕ್ತವಾಗಿವೆ.