- ಇಂದು ಬಹುತೇಕ ಜನರು ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಹಣದ ವಹಿವಾಟು ನಡೆಸುತ್ತಿದ್ದಾರೆ
- ಏನೇ ಖರೀದಿ ಮಾಡಲು, ಹಣವನ್ನು ಇನ್ನೊಬ್ಬರಿಗೆ ಕಳುಹಿಸಲು ಆನ್ಲೈನ್ ಪಾವತಿ ಮೊರೆ ಹೋಗುತ್ತಿದ್ದಾರೆ
- ಫೋನ್ ಪೇ, ಪೇಟಿಎಂ, ಅಮೇಜಾನ್ ಪೇ, ವಾಟ್ಸ್ಆ್ಯಪ್ ಪೇ ಮತ್ತು ಗೂಗಲ್ ಪೇನಂತಹ ಅಪ್ಲಿಕೇಶನ್ಗಳಿವೆ
Google Pay : ಇಂದು ಬಹುತೇಕ ಜನರು ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಹಣದ ವಹಿವಾಟು ನಡೆಸುತ್ತಿದ್ದಾರೆ. ಏನೇ ಖರೀದಿ ಮಾಡಲು, ಹಣವನ್ನು ಇನ್ನೊಬ್ಬರಿಗೆ ಕಳುಹಿಸಲು ಮತ್ತು ಶಾಪಿಂಗ್ ಮಾಡುವುದೂ ಸೇರಿದಂತೆ ಪ್ರತಿಯೊಂದಕ್ಕೂ ಆನ್ಲೈನ್ ಪಾವತಿ ಮೊರೆ ಹೋಗುತ್ತಿದ್ದಾರೆ. ಫೋನ್ ಪೇ, ಪೇಟಿಎಂ, ಅಮೇಜಾನ್ ಪೇ, ವಾಟ್ಸ್ಆ್ಯಪ್ ಪೇ ಮತ್ತು ಗೂಗಲ್ ಪೇನಂತಹ ಅನೇಕ ಅಪ್ಲಿಕೇಶನ್ಗಳು ನಮ್ಮ ನಡುವೆ ಇದೆ. ಅದರಲ್ಲಿ ಹೆಚ್ಚಿ ಮಂದಿ Google Pay ಅನ್ನು ಬಳಸುತ್ತಿದ್ದಾರೆ.
ಎಲ್ಲ ಅಪ್ಲಿಕೇಶನ್‌ಗಳ ಪಾವತಿ ವ್ಯವಸ್ಥೆಯು UPI ಆಧರಿಸಿದೆ. ಬಿಲ್‌ಗಳನ್ನು ಪಾವತಿಸುವುದರಿಂದ ಹಿಡಿದು ಮೊಬೈಲ್ ಫೋನ್‌ಗಳನ್ನು ರೀಚಾರ್ಜ್ ಮಾಡುವವರೆಗೆ, ನೀವು ಈ ಅಪ್ಲಿಕೇಶನ್ ಮೂಲಕ ಎಲ್ಲವನ್ನೂ ಸುಲಭವಾಗಿ ಮಾಡಬಹುದು.
Google Pay ಈ ಎಲ್ಲಾ ವಹಿವಾಟುಗಳ ವಿವರಗಳನ್ನು ಸಂಗ್ರಹಿಸುತ್ತದೆ. ಅಂದರೆ, ನಿಮ್ಮ ವಹಿವಾಟಿನ ಹಿಸ್ಟರಿ ಸೇವ್ ಆಗಿರುತ್ತದೆ. ಅನೇಕ ಜನರಿಗೆ ವಹಿವಾಟಿನ ಹಿಸ್ಟರಿಯನ್ನು ಹೇಗೆ ಡಿಲೀಟ್ ಮಾಡಬೇಕೆಂಬುದು ತಿಳಿದಿಲ್ಲ. ಡಿಲೀಟ್ ಮಾಡುವುದು ಒಂದು ರೀತಿಯಲ್ಲಿ ಒಳ್ಳೆಯದು ಮತ್ತು ಕೆಟ್ಟದು ಕೂಡ. ಆದಾಗ್ಯೂ, ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ಈ ವಹಿವಾಟಿನ ಹಿಸ್ಟರಿಯನ್ನು ಸುಲಭವಾಗಿ ಅಳಿಸಬಹುದು. ಅದು ಹೇಗೆಂದು ನಾವೀಗ ತಿಳಿದುಕೊಳ್ಳೋಣ.
* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Google Pay ಅಪ್ಲಿಕೇಶನ್ ತೆರೆಯಿರಿ. ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸೆಟ್ಟಿಂಗ್‌ಗಳು ಕ್ಲಿಕ್ ಮಾಡಿ.
* ಪ್ರೈವಸಿ ಮತ್ತು ಸೆಕ್ಯುರಿಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಡೇಟಾ ಮತ್ತು ಪರ್ಸನಲೈಜೇನ್ ಆಯ್ಕೆಯನ್ನು ಆರಿಸಿ.
* ನಿಮ್ಮ Google ಖಾತೆ ಲಿಂಕ್ ಅನ್ನು ಕ್ಲಿಕ್ ಮಾಡಿ. ಬಳಿಕ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಪಾವತಿ ವಹಿವಾಟುಗಳು ಮತ್ತು ಚಟುವಟಿಕೆಯನ್ನು ನೋಡಬಹುದು.
* ಅದರ ಪಕ್ಕದಲ್ಲಿರುವ ಕ್ರಾಸ್ ಬಟನ್ ಕ್ಲಿಕ್ ಮಾಡುವ ಮೂಲಕ ನೀವು ವಹಿವಾಟು ಹಿಸ್ಟರಿಯನ್ನು ಡಿಲೀಟ್ ಮಾಡಬಹುದು.
* ನೀವು ವಹಿವಾಟಿನ ಹಿಸ್ಟರಿಯನ್ನು ಒಂದೇ ಬಾರಿಗೆ ಡಿಲೀಟ್ ಮಾಡಲು ಬಯಸಿದರೆ, ಮೇಲಿನ ರಿಮೋವ್ ಅಥವಾ ಡಿಲೀಟ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಡಿಲೀಟ್ ಮಾಡಲು ಇಚ್ಛಿಸುವ ಸಮಯದ ಅವಧಿಯನ್ನು ಆಯ್ಕೆ ಮಾಡಬಹುದು.