ಕ್ರೀಡೆ

ಶಾರ್ದೂಲ್​ಗೆ ಹ್ಯಾಟ್ರಿಕ್ ಚಾನ್ಸ್ ಇಲ್ಲ: ಯಾಕೆ ಇಲ್ಲಿದೆ ಮಾಹಿತಿ...

ಮುಂಬೈ: ಟೀಮ್ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್, ಇಂದೋರ್​ನಲ್ಲಿ ನಡೆದ 2ನೇ ಟಿ20 ಪಂದ್ಯದ ತಮ್ಮ ಕೊನೇ ಓವರ್​ನ ಕೊನೇ ಎರಡು ಎಸೆತಗಳಲ್ಲಿ ವಿಕೆಟ್ ಉರುಳಿಸಿದ್ದರು. ಆದರೆ, ಪುಣೆಯಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದಲ್ಲಿ ಅವರು ಮೊದಲ ಎಸೆತದಲ್ಲಿ ವಿಕೆಟ್ ಪಡೆದರೆ ಇದು ಹ್ಯಾಟ್ರಿಕ್ ಎಂದು ಪರಿಗಣನೆಯಾಗುವುದಿಲ್ಲ.

ಕ್ರಿಕೆಟ್ ನಿಯಮದ ಪ್ರಕಾರ, ಒಂದೇ ಪಂದ್ಯದ ಸತತ ಮೂರು ಎಸೆತಗಳಲ್ಲಿ ವಿಕೆಟ್ ಉರುಳಿಸಿದರೆ, ಮಾತ್ರವೇ ಹ್ಯಾಟ್ರಿಕ್ ಎಂದು ಪರಿಗಣನೆಯಾಗುತ್ತದೆ.

ಎರಡು ಭಿನ್ನ ಪಂದ್ಯಗಳಲ್ಲಿ ಸತತ ಮೂರು ವಿಕೆಟ್ ಸಂಪಾದನೆ ಮಾಡಿದರೆ ಅದನ್ನು ಹ್ಯಾಟ್ರಿಕ್ ಆಗಿ ಪರಿಗಣನೆ ಮಾಡುವುದಿಲ್ಲ.