ಕಲಬುರಗಿ: ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜೀವನಪ್ರಕಾಶ ಶಾಲೆಯ ಪಟುಗಳು ಹ್ಯಾಂಡ್‌ಬಾಲ್‌ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಟುಗಳಾದ ಅಂಬಿಕಾ, ಚೈತ್ರಾ, ಪೂಜಾ, ಸಿದ್ದಮ್ಮ, ನಮ್ರತಾ, ಪ್ರೀತಿ ಆರ್, ಪ್ರೀತಿ, ಶೀಲು, ಖುಷಿ, ವಿದ್ಯಶ್ರೀ, ಗಾಯತ್ರಿ, ಕೀರ್ತಿ, ಶಿವ, ಬಸವರಾಜ ವಿಭಾಗ ಮಟ್ಟಕ್ಕೆ ಆಯ್ಕೆಯಾದವರು.
ಜಿಲ್ಲಾ ಮಟ್ಟಕ್ಕೆ ಆಯ್ಕೆ: ತಾಲೂಕು ಮಟ್ಟದ ಕ್ರೀಡಾಕೂಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರೀತಿ, ಶೀಲು ಪ್ರಥಮ ಸ್ಥಾನ, ೧೦೦ ಮೀಟರ್ ಓಟದಲ್ಲಿ ಸೃಷ್ಟಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತಾಧಿಕಾರಿ ಸುಶೀಲಾ ಪಿ., ಪ್ರಶಾಂತ ಪಿ., ಗೋಲ್ಡಾ ಪಿ., ಮುಖ್ಯಗುರು ಅಮರೇಶ್ವರ ಸೀಳಿ, ದೈಹಿಕ ಶಿಕ್ಷಣ ಶಿಕ್ಷಕ ಪುನೀತ ಸಿರೂರ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.