ಕ್ರೀಡೆ

ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ, ಮೈಸೂರಿನ ಎಂ.ವೆಂಕಟೇಶ್ ಹೊಸಮುಖ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮುಂಬರುವ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಗೆ ಸ್ಟಾರ್ ಬ್ಯಾಟರ್ ಮನೀಷ್ ಪಾಂಡೆ ಸಾರಥ್ಯದ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಮೈಸೂರಿನ ವೇಗಿ ಎಂ. ವೆಂಕಟೇಶ್ ಮೊದಲ ಬಾರಿಗೆ ರಾಜ್ಯ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನುಭವಿ ಆಟಗಾರ ಆರ್.ಸಮರ್ಥ್ ಉಪನಾಯಕನಾಗಿದ್ದಾರೆ.

4 ಬಾರಿಯ ಚಾಂಪಿಯನ್ ಕರ್ನಾಟಕ ತಂಡ, ಬಲಿಷ್ಠ ತಂಡಗಳಾದ ತಮಿಳುನಾಡು, ಬಂಗಾಳ, ಹಾಲಿ ಚಾಂಪಿಯನ್ ಮುಂಬೈ, ಬರೋಡ ಹಾಗೂ ಪುದುಚೇರಿ ಒಳಗೊಂಡ ಎಲೈಟ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಡಿಸೆಂಬರ್ 8ರಿಂದ 14ರವರೆಗೆ ಕೇರಳದ ತಿರುವನಂತಪುರದಲ್ಲಿ ಪಂದ್ಯಗಳು ನಡೆಯಲಿವೆ. ಇತ್ತೀಚೆಗೆ ಮುಕ್ತಾಯಗೊಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರನ್ನರ್‌ಅಪ್ ಆಗಿದ್ದ ತಂಡದಲ್ಲಿ ಆಡಿದ ಬಹುತೇಕ ಆಟಗಾರರು ಸ್ಥಾನ ಉಳಿಸಿಕೊಂಡಿದ್ದಾರೆ. ಆಲ್ರೌಂಡರ್ ಅನಿರುದ್ಧ ಜೋಶಿ ಬದಲಿಗೆ ಡಿ.ನಿಶ್ಚಲ್‌ಗೆ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ತಂಡ: ಮನೀಷ್ ಪಾಂಡೆ (ನಾಯಕ), ಆರ್.ಸಮರ್ಥ್(ಉಪನಾಯಕ), ರೋಹನ್ ಕದಂ, ಕರುಣ್ ನಾಯರ್, ಸಿದ್ದಾರ್ಥ್ ಕೆವಿ, ಅಭಿನವ್ ಮನೋಹರ್, ಡಿ.ನಿಶ್ಚಲ್, ಶರತ್ ಬಿ.ಆರ್ (ವಿಕೀ), ಶರತ್ ಶ್ರೀನಿವಾಸ್ (ವಿಕೀ), ಜೆ.ಸುಚಿತ್, ಶ್ರೇಯಸ್ ಗೋಪಾಲ್, ಕೆಸಿ ಕಾರ್ಯಪ್ಪ, ರಿತೇಶ್ ಭಟ್ಕಳ್, ಪ್ರವೀಣ್ ದುಬೆ, ವಿದ್ಯಾಧರ್ ಪಾಟೀಲ್, ವಿ.ಕೌಶಿಕ್, ಪ್ರತೀಕ್ ಜೈನ್, ದರ್ಶನ್ ಎಂಬಿ, ವೈಶಾಕ್ ವಿ, ವೆಂಕಟೇಶ್ ಎಂ.

ಕರ್ನಾಟಕದ ವೇಳಾಪಟ್ಟಿ

ದಿನಾಂಕ: ಎದುರಾಳಿ

ಡಿ.8: ಪುದುಚೇರಿ

ಡಿ.9: ತಮಿಳುನಾಡು

ಡಿ.11: ಮುಂಬೈ

ಡಿ.12: ಬರೋಡ

ಡಿ.14: ಬಂಗಾಳ

6