ಅಹಮದಾಬಾದ್: ರಾಧಾ ಯಾದವ್ (48 ರನ್, 64 ಎಸೆತ, 5 ಬೌಂಡರಿ, 69ಕ್ಕೆ 4 ವಿಕೆಟ್) ಆಲ್ರೌಂಡ್ ಆಟದ ಹೊರತಾಗಿಯೂ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಎದುರು 76 ರನ್‌ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1 ರಿಂದ ಸಮಬಲಗೊಂಡಿದೆ. ಸರಣಿಯ ನಿರ್ಣಾಯಕ ಮೂರನೇ ಹಾಗೂ ಅಂತಿಮ ಪಂದ್ಯ ಮಂಗಳವಾರ ನಡೆಯಲಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.ಆರಂಭಿಕರಾದ ಸುಜಿ ಬೇಟ್ಸ್ (58 ರನ್, 70 ಎಸೆತ, 8 ಬೌಂಡರಿ) ಹಾಗೂ ಜಾರ್ಜಿಯಾ ಪ್ಲಿಮ್ಮರ್ (41) ಜೋಡಿ ಉತ್ತಮ ಆರಂಭ ಒದಗಿಸಿತು. ಬಳಿಕ 5ನೇ ವಿಕೆಟ್‌ಗೆ ನಾಯಕಿ ಸೋಫಿ ಡಿವೈನ್ (79 ರನ್, 86 ಎಸೆತ, 7 ಬೌಂಡರಿ, 1 ಸಿಕ್ಸರ್) ಜತೆಯಾದ ಮ್ಯಾಡಿ ಗ್ರೀನ್ (42) ನಡೆಸಿದ ಜತೆಯಾಟದ ಬಲದಿಂದ ನ್ಯೂಜಿಲೆಂಡ್ 9 ವಿಕೆಟ್‌ಗೆ 259 ರನ್ ಪೇರಿಸಿತು. ಭಾರತ ತಂಡ ಐದು ಕ್ಯಾಚ್‌ಗಳನ್ನು ಕೈಚೆಲ್ಲಿ ಕಿವೀಸ್ ಮೊತ್ತ ಏರಲು ಸಹಕರಿಸಿತು.
ಪ್ರತಿಯಾಗಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಲ್ಯದಿಂದ 100 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ಭಾರತ ಚೇಸಿಂಗ್‌ನಲ್ಲಿ ಲಯ ತಪ್ಪಿತು. ಆಗ ಜತೆಯಾದ ರಾಧಾ ಯಾದವ್ ಹಾಗೂ ಸೈಮಾ ಠಾಕೂರ್ (29) ಕೆಲ ಹೊತ್ತು ಪ್ರತಿರೋಧ ತೋರಿದರು. ಅಂತಿಮವಾಗಿ ಭಾರತ 47.1 ಓವರ್‌ಗಳಲ್ಲಿ 183 ರನ್‌ಗಳಿಗೆ ಆಲೌಟ್ ಆಯಿತು. ಸೋಫಿ ಡಿವೈನ್ ಬೌಲಿಂಗ್‌ನಲ್ಲಿಯೂ 3 ವಿಕೆಟ್ ಪಡೆದ ಮಿಂಚಿದರು.
ನ್ಯೂಜಿಲೆಂಡ್: 9 ವಿಕೆಟ್‌ಗೆ 259 (ಸುಜಿ ಬೇಟ್ಸ್ 58, ಜಾರ್ಜಿಯಾ ಪ್ಲಿಮ್ಮರ್ 41, ಲೌರೆನ್ 3, ಡಿವೈನ್ 79, ಹ್ಯಾಲಿ ಡೇ 8, ಗ್ರೀನ್ 42, ಇಸಾಬೆಲ್ಲಾ 11, ಜೆಸ್ ಕೆರ್ 12*, ರಾಧಾ ಯಾದವ್ 69ಕ್ಕೆ 4, ದೀಪ್ತಿ ಶರ್ಮ 30ಕ್ಕೆ 2).
ಭಾರತ: 47.1 ಓವರ್‌ಗಳಲ್ಲಿ 183 (ಸ್ಮತಿ 0, ಶೆಾಲಿ 11, ಯಸ್ತಿಕಾ 12, ಹರ್ಮಾನ್‌ಪ್ರೀತ್ 24, ಜೆಮೀಮಾ 17, ತೇಜಲ್ 15, ದೀಪ್ತಿ 15,ಆರುಂಧತಿ 2, ರಾಧಾ 48, ಸೈಮಾ 29, ತಹುಹು 42ಕ್ಕೆ 3, ಡಿವೈನ್ 27ಕ್ಕೆ 3). ಪಂದ್ಯಶ್ರೇಷ್ಠ: ಸೋಫಿ ಡಿವೈನ್.
ಮೂರನೇ ಪಂದ್ಯ
ಯಾವಾಗ: ಮಂಗಳವಾರ
ಎಲ್ಲಿ: ಅಹಮದಾಬಾದ್