ನವದೆಹಲಿ: ಮುಂಬರುವ ಬಾರ್ಡರ್&ಗಾವಸ್ಕರ್ ಆಸ್ಟೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಅಕ್ಟೋಬರ್ 28 ರಂದು ಭಾರತ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಆಸ್ಟ್ರೆಲಿಯಾ ಪ್ರವಾಸಕ್ಕೆ ಬಿಸಿಸಿಐ ಭಾರತದ ಜಂಬೋ ತಂಡವನ್ನು ಹೆಸರಿಸುವ ನಿರೀೆಯಿದ್ದು, ಅನುಭವಿ ಚೇತೇಶ್ವರ ಪೂಜಾರ ಸ್ಥಾನ ಪಡೆದರೂ ಅಚ್ಚರಿಯಿಲ್ಲ ಎನ್ನಲಾಗಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಆಯ್ಕೆ ಸಮಿತಿ ಸಭೆ ಸೇರಲಿದ್ದು, ಆಸೀಸ್ ಪ್ರವಾಸಕ್ಕೆ ಭಾರತ ತಂಡವನ್ನು ಅಂತಿಗೊಳಿಸುವ ನಿರೀೆ ಇದೆ. ಆಟಗಾರರ ಾಮ್ರ್, ಫಿಟ್ನೆಸ್ ಹಾಗೂ ತಂಡದ ಸಂಯೋಜನೆ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ೈನಲ್ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ 36 ವರ್ಷದ ಚೇತೇಶ್ವರ ಪೂಜಾರ ಮರಳಿ ಸ್ಥಾನ ಪಡೆಯುವ ನಿರೀೆ ಇದೆ.
ಹಿಂದಿನ ಪ್ರವಾಸದಲ್ಲಿ ಆಸ್ಟ್ರೆಲಿಯಾ ವೇಗಿಗಳನ್ನು ಕಾಡಿದ್ದ ಪೂಜಾರ, ಟೀಮ್ ಇಂಡಿಯಾ ಬ್ಯಾಟಿಂಗ್ನ ಬೆನ್ನೆಲುಬು ಎನಿಸಿದ್ದರು. 2018&19ರಲ್ಲಿ 1258 ಎದುರಿಸಿ 521 ರನ್ಗಳಿಸಿ ಗರಿಷ್ಠ ರನ್ ಸ್ಕೋರರ್ ಆಗಿದ್ದ ಪೂಜಾರ, 2020&21ರಲ್ಲಿ 978 ಎಸೆತಗಳಲ್ಲಿ 271 ರನ್ ಕಲೆಹಾಕಿದ್ದರು. ಜತೆಗೆ ಇತ್ತೀಚೆಗೆ ರಣಜಿ ಟ್ರೋಫಿ ದ್ವಿಶತಕ ಸಿಡಿಸಿರುವ ಪೂಜಾರ, ಆಯ್ಕೆ ಸಮಿತಿಯ ಗಮನಸೆಳೆದಿದ್ದಾರೆ ಎನ್ನಲಾಗಿದೆ. ಪೂಜಾರ ಸೇರ್ಪಡೆಯಿಂದ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗಕ್ಕೆ ಆಸ್ಟ್ರೆಲಿಯಾ ಪ್ರವಾಸದಲ್ಲಿ ಹೆಚ್ಚಿನ ಸಿಗಲಿದೆ. ಪೂಜಾರ ಇದುವರೆಗೆ ಟೀಮ್ ಇಂಡಿಯಾ ಪರ ಆಡಿರುವ 103 ಟೆಸ್ಟ್ಗಳಲ್ಲಿ 35 ಅರ್ಧಶತಕ, 19 ಶತಕ ಹಾಗೂ 3 ದ್ವಿಶತಕ ಸಹಿತ 7,195 ರನ್ ಕಲೆಹಾಕಿದ್ದಾರೆ. ಭಾರತ ಹಾಗೂ ಆಸ್ಟ್ರೆಲಿಯಾ ನಡುವಿನ ಸರಣಿ ನ.22ರಂದು ಆರಂಭವಾಗಲಿದ್ದು, 10ಕ್ಕೆ ಟೀಮ್ ಇಂಡಿಯಾ ಪ್ರಯಾಣ ಬೆಳೆಸಲಿದೆ.
ಆಲ್ರೌಂಡರ್ ಆಗಿ ನಿತೀಶ್ ?
ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶ ನೀಡಿರುವ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಅವರನ್ನು ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಪರಿಗಣಿಸಿರುವ ಬಿಸಿಸಿಐ, ಶಾರ್ದೂಲ್ ಠಾಕೂರ್ ಜತೆಯಾಗಿ ಇವರನ್ನು ಹೆಸರಿಸುವ ಸಾಧ್ಯತೆಗಳಿವೆ. ನಿತೀಶ್ ಕುಮಾರ್ ಪ್ರಸ್ತುತ ಭಾರತ ಟೆಸ್ಟ್ ತಂಡದ ಮೀಸಲು ಆಟಗಾರರ ಭಾಗವಾಗಿದ್ದಾರೆ. ನಿತೀಶ್ ಜತೆಗೆ ಹರ್ಷಿತ್ ರಾಣಾ, ಮಯಾಂಕ್ ಯಾದವ್ ಸೇರಿ ನೆಟ್ಸ್ ಬೌಲರ್ಗಳ ಬೃಹತ್ ತಂಡ ಆಸ್ಟ್ರೆಲಿಯಾ ತೆರಳುವ ಸಾಧ್ಯತೆಗಳಿವೆ.