ಹುಬ್ಬಳ್ಳಿ: ಹುಬ್ಬಳ್ಳಿ ಜಿಮ್ಖಾನ್ ಕ್ಲಬ್ನಲ್ಲಿ 6ನೇ ಆವೃತ್ತಿಯ ಜಿಮ್ಖಾನಾ ಪ್ರೀಮಿಯರ್ ಲೀಗ್ (ಜಿಪಿಎಲ್) ಬ್ಯಾಡ್ಮಿಂಟನ್ ಟೂರ್ನಿಗೆ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹಾಗೂ ಕೈಲಾಸ ಮುನವ್ವರ ಶನಿವಾರ ಸಂಜೆ ಚಾಲನೆ ನೀಡಿದರು.
ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದ ರಿಂದ ಆರೋಗ್ಯ ವೃದ್ಧಿ ಯಾಗುತ್ತದೆ. ಮನುಷ್ಯ ಸಂಬಂಧಗಳು ಸುಧಾರಿಸುತ್ತವೆ. ಕ್ರೀಡಾ ಮನೋಭಾವ ಬೆಳೆಯುತ್ತದೆ ಎಂದು ಪ್ರದೀಪ ಶೆಟ್ಟರ್ ಹೇಳಿದರು. ಟಾಪ್ಸೀಡ್ ತಂಡದ ಮಾಲೀಕರಾದ ಮನೀಷ ಮತ್ತು ವಿಮಲ, ಕೋಳಿವಾಡ ರಾಕ್ಸ್ ತಂಡದ ಶಂಕರ ಕೋಳಿವಾಡ, ಫೇದರ್ಸ್ ತಂಡದ ಕೃಷ್ಣಾ ಉಚ್ಚಿಲ್, ದಿ ಹಾಟ್ಶಾಟ್ ತಂಡದ ನಂದೀಶ ಕುಲಕರ್ಣಿ, ಜಗದೀಶ ಕಲ್ಯಾಣ ಶೆಟ್ಟರ್, ದಿನೇಶ ಶೆಟ್ಟಿ, ಗಿರೀಶ ವೀಣಾ, ಇತರರು ಇದ್ದರು. ಜಿಪಿಎಲ್ನಲ್ಲಿ 4 ತಂಡಗಳು ಭಾಗವಹಿಸಿವೆ. ಸುಮಾರು ಒಂದೂವರೆ ತಿಂಗಳು ಪ್ರತಿ ಶನಿವಾರ-ಭಾನುವಾರ ಮಾತ್ರ ಪಂದ್ಯಗಳು ನಡೆಯಲಿವೆ. 43 ಆಟಗಾರರು ಭಾಗವಹಿಸಿದ್ದಾರೆ.
ಬೆಳಗ್ಗೆ ಕೃಷ್ಣಾ ಉಚ್ಚಿಲ ಮಾಲೀಕತ್ವದ ಫೇದರ್ಸ್ ತಂಡದ ಟಿ-ಶರ್ಟ್ ಬಿಡುಗಡೆ ಮಾಡಲಾಯಿತು. ವಿಶ್ವನಾಥ ಉಪ್ಪಿನ, ಗಿರೀಶ ವೀಣಾ, ಪ್ರಕಾಶ ಹೆಗ್ಡೆ, ಕೌಸ್ತುಭ ಸಂಶೀಕರ, ಹರೀಶ ಮರಾಠೆ, ಬಿ. ಎನ್. ಗೌಡರ, ಪ್ರಕಾಶ ರೂಗಿ, ಇತರರಿದ್ದರು.