ಕ್ರೀಡೆ

ಏಷ್ಯನ್ ಗೇಮ್ಸ್: ಕ್ವಾರ್ಟರ್ ಫೈನಲ್‌ಗೇರಿದ ಭಾರತದ ವಾಲಿಬಾಲ್ ತಂಡ

ಹಾಂಗ್ ಝೌ: ಏಷ್ಯನ್ ಗೇಮ್ಸ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ಮುಂದುವರಿಸಿದ ಭಾರತ ಪುರುಷರ ವಾಲಿಬಾಲ್ ತಂಡ 3-0 ರಿಂದ ಚೀನಾ ತೈಪೆ ತಂಡವನ್ನು ಮಣಿಸಿ ಕ್ವಾರ್ಟರ್‌ೈನಲ್‌ಗೇರಿದೆ.

ದಕ್ಷಿಣ ಕೊರಿಯಾ ವಿರುದ್ಧದ ಅಮೋಘ ನಿರ್ವಹಣೆಯ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದ ಭಾರತ ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ 25-22, 25-22, 25-21 ರಿಂದ 2018ರ ಕಂಚಿನ ಪದಕ ವಿಜೇತ ಚೀನಾ ತೈಪೆ ಎದುರು ಗೆಲುವು ದಾಖಲಿಸಿತು. ಒಂದು ಗಂಟೆ 25 ನಿಮಿಷ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಭಾರತ ಗೆಲುವಿನೊಂದಿಗೆ 1 ರಿಂದ 6 ಸ್ಥಾನದ ್ಲೇ ಆ್ಗೆ ಅರ್ಗತೆ ಪಡೆಯಿತು. ಮುಂದಿನ ಪಂದ್ಯದಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ. ಭಾರತ ಇದುವರೆಗೂ ಏಷ್ಯನ್ ಗೇಮ್ಸ್‌ನಲ್ಲಿ ಒಂದು ಬೆಳ್ಳಿ, 2 ಕಂಚಿನ ಪದಕದೊಂದಿಗೆ 3 ಪದಕ ಜಯಿಸಿದೆ. 1986ರಲ್ಲಿ ಕೊನೆಯದಾಗಿ ಪದಕ ಸಾಧನೆ ಮಾಡಿತ್ತು.

ಚೀನಾ ತೈಪೆ ತಂಡ ಅನುಭವಿಗಳಿಂದ ಕೂಡಿದ್ದು, ಮೊದಲ ಎರಡು ಸೆಟ್‌ಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದರು. ಆದರೆ ನಮ್ಮ ಆಟಗಾರರು ಅಂತರವನ್ನು ವೇಗವಾಗಿ ತಗ್ಗಿಸಿದರು. ನಾಲ್ಕು ಸೆಟ್‌ಗಳ ಪಂದ್ಯವನ್ನು ನಿರೀಕ್ಷೆ ಮಾಡಿದ್ದೇವು. ದ.ಕೊರಿಯಾ ಹಾಗೂ ಚೈನೀಸ್ ತೈಪೆ ವಿರುದ್ಧದ ಗೆಲುವು ತಂಡದ ಆತ್ಮ ಬಲ ಹೆಚ್ಚಿಸಿದೆ ಎಂದು ಭಾರತ ತಂಡದ ನಾಯಕ ವಿನೀತ್ ತಿಳಿಸಿದರು.

ಭಾರತಕ್ಕೆ ಮುಂದಿನ ಪಂದ್ಯ

ಎದುರಾಳಿ: ಜಪಾನ್

ಯಾವಾಗ: ಭಾನುವಾರ.