ಬರ್ಮಿಂಗ್ಹ್ಯಾಂ: ಕಾಮನ್ವೆಲ್ತ್ ರಾಷ್ಟ್ರಗಳ ಮಹಾ ಕ್ರೀಡಾ ಹಬ್ಬಕ್ಕೆ ಇಂಗ್ಲೆಂಡ್ ಸಜ್ಜಾಗಿದೆ. ಕರೊನಾ ವೈರಸ್ ಹಾವಳಿಯ ನಡುವೆ ಟೋಕಿಯೊ ಒಲಿಂಪಿಕ್ಸ್ ಆಯೋಜನೆಯ ಬಳಿಕ ಮತ್ತೊಂದು ಪ್ರತಿಷ್ಠಿತ ಕ್ರೀಡಾಕೂಟಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಗುರುವಾರ ನಡೆಯಲಿರುವ ವರ್ಣರಂಜಿತ ಸಮಾರಂಭದೊಂದಿಗೆ 12 ದಿನಗಳ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. ಇತ್ತೀಚೆಗಿನ ಕಾಮನ್ವೆಲ್ತ್ ಗೇಮ್ಸ್ ಆವೃತ್ತಿಗಳಲ್ಲಿ ಭರ್ಜರಿ ನಿರ್ವಹಣೆಯೊಂದಿಗೆ ಮಿಂಚುತ್ತಿದ್ದ ಭಾರತ ಈ ಬಾರಿ ಶೂಟಿಂಗ್ ಸ್ಪರ್ಧೆ ಇಲ್ಲದೆ ಹಿನ್ನಡೆ ಎದುರಿಸಿದೆ. ಅದರ ನಡುವೆಯೂ ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್ನಲ್ಲಿ ತೋರಿದ ಸರ್ವಶ್ರೇಷ್ಠ ನಿರ್ವಹಣೆ ಭಾರತಕ್ಕೆ ಹುಮ್ಮಸ್ಸು ತುಂಬಿದೆ. ಕುಸ್ತಿ, ಬಾಕ್ಸಿಂಗ್, ವೇಟ್ಲಿಫ್ಟಿಂಗ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಟೇಬಲ್ ಟೆನಿಸ್ ಮತ್ತು ಸ್ಕಾ$$$್ವಷ್ನಲ್ಲಿ ಹೆಚ್ಚಿನ ಪದಕ ಬಾಚಿಕೊಳ್ಳುವತ್ತ ಭಾರತ ಗಮನ ಹರಿಸಲಿದೆ.
111 ಪುರುಷರು ಮತ್ತು 104 ಮಹಿಳೆಯರ ಸಹಿತ ಭಾರತ ಒಟ್ಟು 215 ಕ್ರೀಡಾಪಟುಗಳ ತಂಡದೊಂದಿಗೆ ಕಣಕ್ಕಿಳಿಯಲಿದ್ದು, 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ತವರಿನಲ್ಲಿ ನಡೆದ ದೆಹಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ 38 ಚಿನ್ನ, 27 ಬೆಳ್ಳಿ, 36 ಕಂಚಿನ ಸಹಿತ 101 ಪದಕ ಜಯಿಸಿದ್ದು ಕೂಟದ ಇತಿಹಾಸದಲ್ಲಿ ಭಾರತದ ಸರ್ವಶ್ರೇಷ್ಠ ನಿರ್ವಹಣೆಯಾಗಿದೆ. ಆದರೆ ಶೂಟಿಂಗ್ ಕ್ರೀಡೆಯ ಗೈರಿನಲ್ಲಿ ಭಾರತ ಈ ಸಲವೂ ಅದನ್ನು ಹಿಮ್ಮೆಟ್ಟಿಸುವುದು ಕಠಿಣವೆನಿಸಿದೆ. ಹಿಂದಿನ 2018ರ ಗೋಲ್ಡ್ಕೋಸ್ಟ್ ಗೇಮ್ಸ್ನಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಸಹಿತ ಒಟ್ಟು 66 ಪದಕ ಜಯಿಸಿತ್ತು. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್ನಲ್ಲಿ 1 ಚಿನ್ನ, 2 ಬೆಳ್ಳಿ, 4 ಕಂಚಿನ ಸಹಿತ 7 ಪದಕ ಗೆದ್ದಿದ್ದ ಶ್ರೇಷ್ಠ ನಿರ್ವಹಣೆ ಭಾರತಕ್ಕೆ ಸ್ಫೂರ್ತಿ ತುಂಬಿದೆ.
22ನೇ ಕಾಮನ್ವೆಲ್ತ್ ಗೇಮ್ಸ್
72 ದೇಶಗಳು
5,054 ಕ್ರೀಡಾಪಟುಗಳು
20 ಕ್ರೀಡೆಗಳು
280 ಸ್ವರ್ಣ ಸ್ಪರ್ಧೆಗಳು
12 ದಿನಗಳು
15 ಕ್ರೀಡಾಂಗಣಗಳು
215 ಭಾರತದ ಸ್ಪರ್ಧಿಗಳು
ಪಿವಿ ಸಿಂಧು ಧ್ವಜಧಾರಿ
ನೀರಜ್ ಚೋಪ್ರಾ ಗೈರಿನಲ್ಲಿ ಒಲಿಂಪಿಕ್ಸ್ ಅವಳಿ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಅವಕಾಶ ಒಲಿದಿದೆ. 2018ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಅವರು ಭಾರತದ ಧ್ವಜಧಾರಿಯಾಗಿದ್ದರು. ವೇಟ್ಲ್ಟಿರ್ ಮೀರಾಬಾಯಿ ಚಾನು ಮತ್ತು ಬಾಕ್ಸರ್ ಲವ್ಲಿನಾ ಬೋಗೋರ್ಹೈನ್ರನ್ನೂ ಧ್ವಜಧಾರಿಯಾಗಲು ಪರಿಗಣಿಸಲಾಯಿತಾದರೂ, ಅಂತಿಮವಾಗಿ ಮತ್ತೆ ಸಿಂಧುಗೆ ಅವಕಾಶ ಲಭಿಸಿತು. ಆರಂಭೋತ್ಸವದ ಪಥ ಸಂಚಲನದಲ್ಲಿ ಭಾರತದಿಂದ ಗರಿಷ್ಠ 164 ಮಂದಿ ಭಾಗವಹಿಸಲು ಅವಕಾಶ ಲಭಿಸಿದೆ ಎಂದು ಭಾರತ ತಂಡದ ಚ್ೀ ಡಿ ಮಿಷನ್ ರಾಜೇಶ್ ಭಂಡಾರಿ ತಿಳಿಸಿದ್ದಾರೆ.
ಪಣಕ್ಕಿರುವ ಒಟ್ಟು ಸ್ವರ್ಣ 280
ಅಥ್ಲೆಟಿಕ್ಸ್: 58; ಬ್ಯಾಡ್ಮಿಂಟನ್: 6; ಬಾಸ್ಕೆಟ್ಬಾಲ್: 4; ಬೀಚ್ ವಾಲಿಬಾಲ್: 2; ಬಾಕ್ಸಿಂಗ್: 16
ಮಹಿಳಾ ಕ್ರಿಕೆಟ್: 1; ಸೈಕ್ಲಿಂಗ್: 26; ಡೈವಿಂಗ್: 12; ಈಜು: 52; ಜಿಮ್ನಾಸ್ಟಿಕ್: 20; ಹಾಕಿ: 2; ಜುಡೋ: 14; ಲಾನ್ಬೌಲ್ಸ್: 11; ನೆಟ್ಬಾಲ್: 1; ರಗ್ಬಿ ಸೆವೆನ್: 2; ಸ್ಕಾ$್ವಷ್: 5; ಟೇಬಲ್ ಟೆನಿಸ್: 11; ಟ್ರಯಥ್ಲಾನ್: 5; ವೇಟ್ಲಿಫ್ಟಿಂಗ್: 16; ಪ್ಯಾರಾ ಪವರ್ಲಿಫ್ಟಿಂಗ್: 4; ಕುಸ್ತಿ: 12.
ಗೇಮ್ಸ್ ಇತಿಹಾಸ
ಪ್ರತಿ 4 ವರ್ಷಕ್ಕೊಮ್ಮೆ ಆಯೋಜನೆಯಾಗುವ ಕಾಮನ್ವೆಲ್ತ್ ಗೇಮ್ಸ್ ಮೊದಲು ಆರಂಭವಾಗಿದ್ದು 1930ರಲ್ಲಿ. ಬ್ರಿಟಿಷ್ ವಸಾಹತುಗಳಾಗಿದ್ದ ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತವೆ. ಸದ್ಯ 52 ಸದಸ್ಯ ರಾಷ್ಟ್ರಗಳಿದ್ದು ಕೂಟದಲ್ಲಿ 72 ದೇಶಗಳು ಭಾಗವಹಿಸುತ್ತಿವೆ. ಕೆನಡದ ಹ್ಯಾಮಿಲ್ಟನ್ನಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟ ನಡೆದಿತ್ತು. 1930ರಿಂದ 1950ರವರೆಗೆ ಕೂಟವನ್ನು ಬ್ರಿಟಿಷ್ ಎಂಪೈರ್ ಗೇಮ್ಸ್, 1954ರಿಂದ 66ರವರೆಗೆ ಬ್ರಿಟಿಷ್ ಎಂಪೈರ್ ಮತ್ತು ಕಾಮನ್ವೆಲ್ತ್ ಗೇಮ್ಸ್, 1970ರಿಂದ 74ರವರೆಗೆ ಬ್ರಿಟಿಷ್ ಕಾಮನ್ವೆಲ್ತ್ ಗೇಮ್ಸ್ ಎಂದು ಕರೆಯಲಾಗುತ್ತಿತ್ತು. 1978ರಿಂದ ಕಾಮನ್ವೆಲ್ತ್ ಗೇಮ್ಸ್ ಎನ್ನುವ ಹೆಸರಿನಿಂದ ಕೂಟ ಗುರುತಿಸಿಕೊಂಡಿದೆ.
ಭಾರತದ ಸ್ವರ್ಣ ಆಕಾಂಗಳು
*ಪಿವಿ ಸಿಂಧು (ಬ್ಯಾಡ್ಮಿಂಟನ್)
*ರವಿ ದಹಿಯಾ (ಕುಸ್ತಿ)
*ಮೀರಾಬಾಯಿ (ವೇಟ್ಲಿಫ್ಟಿಂಗ್)
*ಭಜರಂಗ್ ಪೂನಿಯಾ (ಕುಸ್ತಿ)
*ಲವ್ಲಿನಾ ಬೋಗೋರ್ಹೈನ್ (ಬಾಕ್ಸಿಂಗ್)
*ಪುರುಷರ ಹಾಕಿ ತಂಡ
*ಮನಿಕಾ ಬಾತ್ರಾ (ಟೇಬಲ್ ಟೆನಿಸ್)
*ಲಕ್ಷ$್ಯ ಸೇನ್ (ಬ್ಯಾಡ್ಮಿಂಟನ್)
*ಕಿಡಂಬಿ ಶ್ರೀಕಾಂತ್ (ಬ್ಯಾಡ್ಮಿಂಟನ್)
*ನಿಖತ್ ಜರೀನ್ (ಬಾಕ್ಸಿಂಗ್)
*ದೀಪಿಕಾ ಪಲ್ಲಿಕಲ್ (ಸ್ಕಾ$$$್ವಷ್)
ವರ್ಣರಂಜಿತ ಆರಂಭೋತ್ಸವ
ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ವರ್ಣರಂಜಿತ ಸಮಾರಂಭದೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ನಿರ್ದೇಶಕ ಇಕ್ಬಾಲ್ ಖಾನ್ ಮಾರ್ಗದರ್ಶನದಲ್ಲಿ ಆರಂಭೋತ್ಸವ ಸಮಾರಂಭ ನಡೆಯಲಿದ್ದು, ರ್ಬಮಿಂಗ್ಹ್ಯಾಂನ ಅದ್ಭುತ ವಿಶ್ವಾಸವನ್ನು ಪ್ರಸ್ತುತಪಡಿಸಲಿದೆ. ಡುರಾನ್ ಡುರಾನ್ ನ್ಯೂ ವೇವ್ ಬ್ಯಾಂಡ್ ಸಮಾರಂಭದ ಪ್ರಮುಖ ಆಕರ್ಷಣೆ. ಬ್ಲಾ$್ಯಕ್ ಸಬ್ಬತ್ ರಾಕ್ ಬ್ಯಾಂಡ್ನ ಟೋನಿ ಲೊಮ್ಮಿ ಕೂಡ ರ್ಯಾಪರ್ ಸೊವೆಟೊ ಕಿಂಚ್ ಜತೆ ಕಾರ್ಯಕ್ರಮ ನೀಡಲಿದ್ದಾರೆ.
*ಉದ್ಘಾಟನಾ ಸಮಾರಂಭ
ಎಲ್ಲಿ: ಅಲೆಕ್ಸಾಂಡರ್ ಸ್ಟೇಡಿಯಂ, ರ್ಬಮಿಂಗ್ಹ್ಯಾಂ
ಆರಂಭ: ರಾತ್ರಿ 11.30 (ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್, ಡಿಡಿ ಸ್ಪೋರ್ಟ್ಸ್
ಬ್ರಿಟನ್ನಲ್ಲಿ ಇನ್ನೂ ಏರದ ಬಿಸಿ
2012ರ ಲಂಡನ್ ಒಲಿಂಪಿಕ್ಸ್ ಬಳಿಕ ಬ್ರಿಟನ್ನಲ್ಲಿ ನಡೆಯುತ್ತಿರುವ ಅತಿದೊಡ್ಡ ಕ್ರೀಡಾಕೂಟ ಇದಾಗಿದೆ. ಆದರೂ "ಬುಲ್ ರಿಂಗ್' ಖ್ಯಾತಿಯ ರ್ಬಮಿಂಗ್ಹ್ಯಾಂ ನಗರದಲ್ಲಿ ಇನ್ನೂ ಕ್ರೀಡಾಕೂಟದ ಕಲರವ ದೊಡ್ಡ ಮಟ್ಟದಲ್ಲಿ ಕಾಣಿಸಿಲ್ಲ. ಸದ್ಯ ಇಂಗ್ಲೆಂಡ್ನಲ್ಲಿ ಮಹಿಳೆಯರ ಯುರೋಕಪ್ ನಡೆಯುತ್ತಿರುವುದು ಮತ್ತು ಆತಿಥೇಯ ತಂಡವೇ ೈನಲ್ಗೇರಿರುವುದರಿಂದ ುಟ್ಬಾಲ್ ಬಗೆಗಿನ ಚರ್ಚೆಯೇ ಹೆಚ್ಚಾಗಿದೆ. 72 ದೇಶಗಳ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ನಗರದಲ್ಲಿದ್ದರೂ, ಸ್ಥಳಿಯ ಪತ್ರಿಕೆಗಳಲ್ಲಿ ಕಾಮನ್ವೆಲ್ತ್ ಗೇಮ್ಸ್ ಬಗ್ಗೆ ಹೆಚ್ಚಿನ ವರದಿಗಳಿಲ್ಲ. ಆದರೆ 92 ವರ್ಷಗಳ ಇತಿಹಾಸ ಹೊಂದಿರುವ ಕ್ರೀಡಾಕೂಟ ಆರಂಭಗೊಂಡ ಬಳಿಕ ಸ್ಥಳಿಯ ಉತ್ಸಾಹ ಹೆಚ್ಚುವ ನಿರೀೆ ಇದೆ.
3ನೇ ಬಾರಿ ಇಂಗ್ಲೆಂಡ್ ಆತಿಥ್ಯ
ಇಂಗ್ಲೆಂಡ್ ಆತಿಥ್ಯದಲ್ಲಿ ಇದು 3ನೇ ಕಾಮನ್ವೆಲ್ತ್ ಗೇಮ್ಸ್ ಆಗಿದೆ. ಈ ಮುನ್ನ 1934 (ಲಂಡನ್) ಮತ್ತು 2002ರಲ್ಲಿ (ಮ್ಯಾಂಚೆಸ್ಟರ್) ನಡೆದಿತ್ತು. ಇದಲ್ಲದೆ ಕಳೆದ 2 ದಶಕಗಳಲ್ಲಿ ಬ್ರಿಟನ್ನಲ್ಲಿ ಇದು 3ನೇ ಗೇಮ್ಸ್ ಆಗಿದೆ. 2014ರಲ್ಲಿ ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆದಿತ್ತು. ಇನ್ನು ಕಳೆದ 2 ದಶಕಗಳಲ್ಲಿ ಬ್ರಿಟನ್&ಆಸ್ಟ್ರೆಲಿಯಾ ಹೊರತಾಗಿ ಭಾರತ (2010) ಮಾತ್ರ ಈ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದೆ. ಮೂಲ ಯೋಜನೆಯ ಪ್ರಕಾರ ದಣ ಆಫ್ರಿಕಾದ ಡರ್ಬನ್ನಲ್ಲಿ ಈ ಕ್ರೀಡಾಕೂಟ ನಡೆಯಬೇಕಾಗಿತ್ತು. ಆದರೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ಡರ್ಬನ್ 2017ರಲ್ಲೇ ಹಿಂದೆ ಸರಿದಿತ್ತು.
ಕರೊನಾ ವೈರಸ್ ಭಯವಿಲ್ಲ
ಕರೊನಾ ಭೀತಿಯ ನಡುವೆ ಟೋಕಿಯೊ ಒಲಿಂಪಿಕ್ಸ್, ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಮುಂತಾದ ದೊಡ್ಡ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ ಬಳಿಕ ಕಾಮನ್ವೆಲ್ತ್ ಗೇಮ್ಸ್ ವೈರಸ್ ಬಗ್ಗೆ ಹೆಚ್ಚಿನ ಭಯವಿಲ್ಲದೆ ನಡೆಯುತ್ತಿದೆ. ಕ್ರೀಡಾಕೂಟದಲ್ಲಿ ಪ್ರತಿದಿನ ಸುಮಾರು 1,200&1,400 ಕ್ರೀಡಾಪಟುಗಳಿಗೆ ಕೋವಿಡ್&19 ಪರೀೆ ನಡೆಯುತ್ತಿದ್ದು, ಇದುವರೆಗೆ ಪ್ರತಿದಿನ ಒಂದು ಡಜನ್ ಕ್ರೀಡಾಪಟುಗಳಷ್ಟೇ ಸೋಂಕಿತರಾಗಿರುವುದು ಪತ್ತೆಯಾಗುತ್ತಿದೆ. ಇದರ ನಡುವೆಯೂ ಭಾರತೀಯ ಕ್ರೀಡಾಪಟುಗಳಿಗೆ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಐಇಎ ಸೂಚಿಸಿದೆ. ಆದರೆ ಕರೊನಾ ಪಾಸಿಟಿವ್ ಆದವರು ತಕ್ಷಣ ಸ್ಪರ್ಧೆಯಿಂದ ಹೊರಬೀಳುವುದಿಲ್ಲ. ಅವರ ಲಸಿಕೆ ದಾಖಲೆ ಮತ್ತು ವೈದ್ಯಕಿಯ ತಂಡ ನೀಡುವ ಮಾಹಿತಿ ಆಧರಿಸಿ ಭವಿಷ್ಯ ನಿರ್ಧಾರವಾಗಲಿದೆ.
ಮಹಿಳೆಯರ ಮೇಲುಗೈ
ಹಾಲಿ ಜಾಗತಿಕ ಕ್ರೀಡಾಕೂಟಗಳಲ್ಲಿ ಬಹುತೇಕ ಲಿಂಗ ಸಮಾನತೆ ದಾಖಲಾಗುತ್ತಿದ್ದರೆ, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಈ ಬಾರಿ ಮಹಿಳೆಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚಿನ ಸ್ಪರ್ಧೆಗಳಿವೆ. ಟಿ20 ಕ್ರಿಕೆಟ್ ಸ್ಪರ್ಧೆ ಮಹಿಳೆಯರಿಗಷ್ಟೆ ನಡೆಯುತ್ತಿದೆ. ಮಿಶ್ರ ವಿಭಾಗದಲ್ಲೂ 7 ಸ್ಪರ್ಧೆಗಳು ನಡೆಯುತ್ತಿವೆ. ಒಟ್ಟು 280 ಸ್ವರ್ಣ ಪದಕಗಳ ಪೈಕಿ 136 ಮಹಿಳೆಯರಿಗೆ ಮತ್ತು 134 ಪುರುಷರಿಗೆ ಪ್ರದಾನವಾಗಲಿದೆ. 10 ಪದಕ ಮಿಶ್ರ ವಿಭಾಗದಲ್ಲಿ ನಿರ್ಧಾರವಾಗಲಿದೆ.
ಇನ್ನು ಸಾಮಾನ್ಯರ ಜತೆಯಲ್ಲೇ ಅಂಗವಿಕಲರ ಪ್ಯಾರಾ ಸ್ಪರ್ಧೆಗಳೂ ನಡೆಯಲಿವೆ.