ಕ್ರೀಡೆ

ಪಾಕಿಸ್ತಾನ ವಿರುದ್ಧ ಡೇವಿಸ್​ ಕಪ್​ ಪಂದ್ಯಕ್ಕೆ ಕನ್ನಡಿಗ ಜೀಶನ್​ ಅಲಿ ಭಾರತ ತಂಡದ ಆಡದ ನಾಯಕ

ಇಸ್ಲಾಮಾಬಾದ್​: ಭಾರತ ಟೆನಿಸ್​ ತಂಡ 60 ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಡೇವಿಸ್​ ಕಪ್​ ಪಂದ್ಯ ಆಡಲು ಸಜ್ಜಾಗಿದ್ದು, ಕನ್ನಡಿಗ ಜೀಶನ್​ ಅಲಿ ತಂಡಕ್ಕೆ ತರಬೇತುದಾರರಾಗಿರುವ ನಡುವೆ, ಆಡದ ನಾಯಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. 1964ರಲ್ಲಿ ಕೊನೆಯದಾಗಿ ಪಾಕಿಸ್ತಾನ ನೆಲದಲ್ಲಿ ಆಡಿದಾಗ ಜೀಶನ್​ ಅಲಿ ಅವರ ತಂದೆ ಅಖ್ತರ್​ ಅಲಿ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು ಎಂಬುದು ವಿಶೇಷವಾಗಿದೆ.

ಭಾರತ ತಂಡದ ಕಾಯಂ ಆಡದ ನಾಯಕ ರೋಹಿತ್​ ರಾಜ್​ಪಾಲ್​ ಕುಟುಂಬದಲ್ಲಿನ ವೈದ್ಯಕಿಯ ತುರ್ತುಸ್ಥಿತಿಯಿಂದಾಗಿ ಇಸ್ಲಾಮಾಬಾದ್​ಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಅಖಿಲ ಭಾರತ ಟೆನಿಸ್​ ಸಂಸ್ಥೆ (ಎಐಟಿಎ) ಜೀಶನ್​ ಅಲಿಗೆ ಅವಳಿ ಹೊಣೆ ವಹಿಸಿದೆ.

"1964ರಲ್ಲಿ ಪಾಕ್​ನಲ್ಲಿ ಆಡಿದ ತಂಡದಲ್ಲಿ ನನ್ನ ತಂಡ ಇದ್ದರು. ಹೀಗಾಗಿ 60 ವರ್ಷಗಳ ಬಳಿಕ ನಾನಿಲ್ಲಿಗೆ ಭಾರತ ತಂಡದೊಂದಿಗೆ ಬಂದಿರುವುದು ನನಗೆ ಮತ್ತು ಕುಟುಂಬಕ್ಕೆ ವಿಶೇಷವಾದ ಕ್ಷಣವಾಗಿದೆ. ನಾನು 8 ವರ್ಷ ಡೇವಿಸ್​ ಕಪ್​ನಲ್ಲಿ ಆಡಿದ್ದೆ. ನಂತರ ಕೋಚ್​ ಆದೆ. ಈಗ ನಾಯಕನೂ ಆಗಿರುವುದು ಹೆಮ್ಮೆಯ ಕ್ಷಣ. ನಾವು ಗೆಲುವು ದಾಖಲಿಸುವ ವಿಶ್ವಾಸವಿದೆ' ಎಂದು 54 ವರ್ಷದ ಜೀಶಾನ್​ ಅಲಿ ಹೇಳಿದ್ದಾರೆ. ಪಾಕ್​ ವಿರುದ್ಧದ ವಿಶ್ವಗುಂಪು&1ರ ಪ್ಲೇಆ್​ ಪಂದ್ಯ ಫೆಬ್ರವರಿ 3-4ರಂದು ನಡೆಯಲಿದೆ. ಪಾಕ್​ನಲ್ಲಿ ಭಾರತ ತಂಡ ಭಾರಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.