ಕ್ರೀಡೆ

ಹಾರ್ದಿಕ್ ಹಾದಿಯಲ್ಲಿ ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗ! ಪತ್ನಿಯೊಂದಿಗೆ ವಿಚ್ಛೇದನ..ನಾಲ್ಕು ವರ್ಷಗಳ ದಾಂಪತ್ಯ ಅಂತ್ಯ! Yuzvendra Chahal Divorce Rumours

Yuzvendra Chahal Divorce Rumours:  ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಈ ವರ್ಷ ವಿಚ್ಛೇದನ ಪಡೆದರು. ಇದೀಗ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ಪತ್ನಿಯಿಂದ ಬೇರ್ಪಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್. ಈಗಾಗಲೇ ಟೀಂ ಇಂಡಿಯಾದಿಂದ ದೂರ ಉಳಿದಿರುವ ಚಹಾಲ್ ವೈಯಕ್ತಿಕ ಜೀವನದಲ್ಲಿ ತೀವ್ರ ಏರಿಳಿತಗಳನ್ನು ಎದುರಿಸುತ್ತಿರುವಂತಿದೆ.

2020ರಲ್ಲಿ ಕೊರೊನಾ ವೈರಸ್‌ನಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಹೇರಲಾಗಿತ್ತು. ಅದೇ ಸಮಯದಲ್ಲಿ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಧನಶ್ರೀಗೆ ಪರಿಚಯವಾಯಿತು. ಇಬ್ಬರೂ ಪ್ರೀತಿಸಿ ಡಿಸೆಂಬರ್ 22, 2020 ರಂದು ವಿವಾಹವಾದರು.

ಯುಜುವೇಂದ್ರ-ಧನಶ್ರೀ ಮದುವೆಯಾಗಿ ಡಿಸೆಂಬರ್ 22ಕ್ಕೆ ನಾಲ್ಕು ವರ್ಷ ಪೂರೈಸಿದೆ. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಇವರಿಬ್ಬರೂ ಕನಿಷ್ಠ ತಮ್ಮ ವಿವಾಹ ವಾರ್ಷಿಕೋತ್ಸವದ ಪೋಸ್ಟ್ ಗಳನ್ನಾಗಲಿ, ಶುಭಾಶಯಗಳನ್ನಾಗಲಿ ಹಂಚಿಕೊಂಡಿರಲಿಲ್ಲ. ಇದರಿಂದಾಗಿ ಇಬ್ಬರೂ ಬೇರೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಳೆದ ಕೆಲ ದಿನಗಳಿಂದ ಹೀಗೇ ಅಲ್ಲ, ಚಾಹಲ್-ಧನಶ್ರೀ ಅವರ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು ಇವರಿಬ್ಬರ ವಿಚ್ಛೇದನದ ಸುದ್ದಿಗೆ ಬಲ ನೀಡುತ್ತಿವೆ.

ಬಾಲಿವುಡ್ ನಿರ್ಮಾಪಕ ಮತ್ತು ಚಲನಚಿತ್ರ ವಿಮರ್ಶಕ ಕಮಲ್ ಆರ್ ಖಾನ್ ಚಾಹಲ್-ಧನಶ್ರೀ ಬೇರ್ಪಟ್ಟಿದ್ದಾರೆ ಎನ್ನಲಾಗಿದೆ. KRK ಡಿಸೆಂಬರ್ 22 ರಂದು ಪೋಸ್ಟ್ ಮಾಡಿದೆ. ಅದರಲ್ಲಿ, 'ಚಹಲ್ ಧನಶ್ರೀ ಅವರ ದಾಂಪತ್ಯ ಹೆಚ್ಚು ದಿನ ನಡೆಯುವುದಿಲ್ಲ ಎಂದು ನನಗೆ ಮೊದಲಿನಿಂದಲೂ ತಿಳಿದಿತ್ತು. ಈಗ ಇಬ್ಬರೂ ಬೇರೆಯಾಗಿದ್ದಾರೆ' ಎಂದು  ಟ್ವೀಟ್​​ ಮಾಡಿದ್ದಾರೆ.