ಕ್ರೀಡೆ

ವರಮಹಾಲಕ್ಷ್ಮಿ ಹಬ್ಬದಂದು ಯುವರಾಜ್​ ಸಿಂಗ್​ ಮನೆಗೆ ಹೊಸ ಅತಿಥಿ ಆಗಮನ

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ಆಲ್​ರೌಂಡರ್​, ವಿಶ್ವಕಪ್ ವಿಜೇತ ತಂಡದ ಸದಸ್ಯ ಯುವರಾಜ್​ ಸಿಂಗ್​ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಪತ್ನಿ ಹೇಜಲ್​ ಕೀಚ್​ ಅವರೊಂದಿಗೆ ಸ್ವಾಗತಿಸಿದ್ದಾರೆ.

ಯುವರಾಜ್​ ಸಿಂಗ್​ ಅವರ ಪತ್ನಿ ಹೇಜಲ್​ ಕೀಚ್​ ಆಗಸ್ಟ್​ 25ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸುದ್ದಿಯನ್ನು ಸ್ವತಃ ಮಾಜಿ ಕ್ರಿಕೆಟಿಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವರಾಜ್​ ಸಿಂಗ್​ ದಂಪತಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ನಿದ್ರೆಯಿಲ್ಲದ ರಾತ್ರಿಗಳು ಹೆಚ್ಚು ಸಂತೋಷಕರವಾಗಿದ್ದು, ನಮ್ಮ ಪುಟ್ಟ ರಾಜಕುಮಾರಿ ಔರಾಳನ್ನು ನಾವು ಸ್ವಾಗತಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ದಂಪತಿಗೆ ಒಂದೂವರೆ ವರ್ಷದ ಮಗನಿದ್ದಾನೆ. ಯುವರಾಜ್​ ಸಿಂಗ್​-ಹೇಜಲ್​ ಕೀಚ್​ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.