ಕ್ರೀಡೆ

VIDEO | ಮೈದಾನದೊಳಗೆ ಓಡಿ ಬಂದು ಟೀಂ ಇಂಡಿಯಾ ನಾಯಕನನ್ನು ಬಿಗಿದಪ್ಪಿದ ಬಾಲಕ!

ರಾಯಪುರ: ನ್ಯೂಜಿಲೆಂಡ್ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು. ನಾಯಕ ರೋಹಿತ್ ಶರ್ಮಾನ ಲೆಕ್ಕಾಚಾರ ಫಲಿಸಿದ್ದು, ಭಾರತೀಯ ಬೌಲರ್​ಗಳ ಪ್ರವಾಸಿ ತಂಡವನ್ನ ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲೆಂಡ್ 108 ರನ್ ಗಳಿಸಲಷ್ಟೇ ಶಕ್ತವಾಯಿತು.

ನ್ಯೂಜಿಲೆಂಡ್ ನೀಡಿದ ಅಲ್ಪ ಮೊತ್ತದ ಗುರಿಯನ್ನು ಟೀಂ ಇಂಡಿಯಾ ಕೇವಲ 20.1 ಓವರ್​ಗಳಲ್ಲಿ ತಲುಪುವಲ್ಲಿ ಸಾಧ್ಯವಾಯಿತು. ನಾಯಕ್ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಇನ್ನಿಂಗ್ಸ್​ ಆರಂಭಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 72 ರನ್​ಗಳ ಜೊತೆಯಾಟವಾಡಿತು. ರೋಹಿತ್ ಶರ್ಮಾ 51 ರನ್ ಗಳಿಸಿ ಮಿಂಚಿದರು. ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದರು.

ರೋಹಿತ್ ಶರ್ಮಾ 37 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಬಾಲಕನೊಬ್ಬ ಮೈದಾನದೊಳಗೆ ಓಡಿಬಂದ ಘಟನೆಯೊಂದು ನಡೆಯಿತು. ರೋಹಿತ್​ ಅಪಾರ ಸಂಖ್ಯೆಯಲ್ಲಿ ಸಣ್ಣ ಪ್ರಾಯದ ಅಭಿಮಾನಿಗಳಿದ್ದಾರೆ. ಈ ಹಿಂದೆಯೂ ರೋಹಿತ್​ ಶರ್ಮಾನನ್ನು ತಪ್ಪಿಕೊಳ್ಳಲೆಂದು ಬಾಲಕರು ಮೈದಾನದೊಳಗೆ ಓಡಿ ಬಂದಿದ್ದರು. ಅಂತೆಯೇ ಇಂದಿನ ಪಂದ್ಯದಲ್ಲೂ ಬಾಲಕನೊಬ್ಬ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ರೋಹಿತ್ ಬಳಿ ಬಂದು ತಬ್ಬಿಕೊಂಡಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿಗಳು ಬಂದು ಯಾವುದೇ ತೊಂದರೆಯಾಗದಂತೆ ಬಾಲಕನನ್ನು ಹೊರಗೆ ಹೊರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಸದ್ಯ ಬಾಲಕ ಬಂದು ರೋಹಿತ್​ನನ್ನು ತಬ್ಬಿಕೊಳ್ಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭದ್ರತಾ ಸಿಬ್ಬಂದಿಗಳಿಗೆ ರೋಹಿತ್ ಶರ್ಮಾ ಸೂಚನೆ ನೀಡಿದ್ದು, ಅಭಿಮಾನಿ ಬಾಲಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದಿದ್ದಾರೆ. (ಏಜೆನ್ಸೀಸ್)