ಕ್ರೀಡೆ

Cricket: ಸೆಹ್ವಾಗ್ ದಾಖಲೆ ಮುರಿದು ಸಾಧನೆ ಮಾಡಿದ ಜೈಸ್ವಾಲ್​!

ಕಾನ್ಸುರ: ಕಾನ್ಸುರದ ಗ್ರೀನ್ ಪಾರ್ಕ್‌ನಲ್ಲಿ ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಆಟಗಾರರು ಹಲವು ದಾಖಲೆಗಳನ್ನು ಬರೆದರು. ಯಶಸ್ವಿ ಜೈಸ್ವಾಲ್ ಟೆಸ್ಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಭಾರತದ ಐಕಾನಿಕ್ ಓಪನರ್ ವೀರೇಂದ್ರ ಸೆಹ್ವಾಗ್ ಟೆಸ್ಟ್​ ಕ್ರಿಕೆಟ್(Cricket)​ನಲ್ಲಿ ಮಾಡಿದ್ದ ದಾಖಲೆ ಹಿಂದಿಕ್ಕಿದರು.

ಭಾರತ ತಂಡವು ಇಂಗ್ಲೆಂಡ್‌ನ 'ಬಾಜ್‌ಬಾಲ್ ಪರಿಕಲ್ಪನೆಗೆ ತಮ್ಮದೇ ಆದ ಸ್ಪರ್ಶವನ್ನು ನೀಡಿತು. ಪ್ರಾರಂಭದಿಂದಲೇ ಚಾಂಗ್ಲಾದೇಶ ಬೌಲರ್‌ಗಳನ್ನು ಬ್ಯಾಟ್ಸ್​ಮನ್​ಗಳು ದಂಡಿಸಿದರು.

ರೋಹಿತ್ ಅಕ್ರಮಣ ಆಟವಾಡಿದರೆ, ಜೈನ್ಸಾಲ್ ನಿಯಂತ್ರಣದ ಆಟವಾಡಿದರು. ಮೊದಲ ಮೂರು ಓವರ್‌ಗಳಲ್ಲಿ, ರೋಹಿತ್ ಮತ್ತು ಜೈಸ್ವಾಲ್ 14 ಪ್ಲಸ್ ಪ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿ ಎದುರಾಳಿ ಫೀಲ್ಡರ್‌ಗಳನ್ನು ಬೌಂಡರಿಯತ್ತ ಅಟ್ಟಿದರು.

31 ಎಸೆತದಲ್ಲಿ 50 ರನ್​: Cricket

ಜೈಸ್ವಾಲ್ ಕೇವಲ 31 ಎಸೆತಗಳನ್ನು ಎದುರಿಸಿ ಅತ್ಯಂತ ವೇಗದ ಅರ್ಧಶತಕ ಪೂರೈಸಿದರು. ಅವರು 2008 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವೀರೇಂದ್ರ ಸೆಹ್ವಾಗ್ ಅವರ ಸಾಧನೆಯನ್ನು ಮೀರಿಸಿದರು. ಯುವ ಎಡಗೈ ಆರಂಭಿಕ ಆಟಗಾರ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಗಳಿಸಿದ ಭಾರತದ ನಾಲ್ಕನೇಆಟಗಾರರಾಗಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ ಭಾರತ ಬ್ಯಾಟಿಂಗ್ ಮಾಡಿ ಕೇವಲ 61 ಎಸೆತಗಳಲ್ಲಿ ಶತಕ ದಾಖಲಿಸಿತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವೊಂದು ಇನ್ನಿಂಗ್ಸ್‌ನಲ್ಲಿ ಗಳಿಸಿದ ಅತಿ ವೇಗದ 100 ರನ್ ಆಗಿದೆ. ಈ ದಾಖಲೆ ಮೊದಲು ಭಾರತದ ಹೆಸರಲ್ಲಿತ್ತು ಎಂಬುದು ಗಮನಾರ್ಹ.